
Viral : ಲ್ಯಾಬ್ರಡರ್ ನಾಯಿಮರಿಯೊಂದನ್ನು ಮನೆ ತುಂಬಿಸಿಕೊಳ್ಳುವ ಈ ವಿಡಿಯೋ ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಬಾಸ್ಕೆಟ್ನಲ್ಲಿ ತೆಗೆದುಕೊಂಡು ಬಂದು ಹೊಸ್ತಿಲಿನಾಚೆ ನಿಲ್ಲಿಸಿ ಚೆಂಡುಹೂವಿನೆಸಳು ಹಾಕಿ, ಆರತಿ ಮಾಡಿ ನಾಯಿಮರಿಯನ್ನು ಒಳಗೆ ಕರೆದುಕೊಳ್ಳಲಾಗುತ್ತದೆ. ಮನೆಗೆ ಹೊಸ ಸದಸ್ಯರನ್ನು ಆಹ್ವಾನಿಸುವಾಗ ಅವರವರ ಮನೆಗಳಲ್ಲಿ ಒಂದೊಂದು ರೀತಿಯ ಪದ್ಧತಿ ಇರುತ್ತದೆ. ಇನ್ನು ಪ್ರಾಣಿಪ್ರಿಯರಿಗೆ ಮನುಷ್ಯರೂ ಒಂದೇ ಪ್ರಾಣಿಗಳೂ ಒಂದೇ. ಒಂದೇ ಸಮನಾಗಿ ಆದರಿಸುವ ರೂಢಿ ಇರುತ್ತದೆ. ಈ ವಿಡಿಯೋ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ.
ಅನೇಕರು ಅನೇಕರ ರೀತಿ ಪ್ರತಿಕ್ರಿಯೆಯ ಮೂಲಕ ಹಾರೈಸಿದ್ದಾರೆ. ‘ಈ ಮುದ್ದಾದ ನಾಯಿಮರಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ವಯಸ್ಸಾದಾಗ ಇದನ್ನು ಅನಾಥವಾಗಿಸಬೇಡಿ’. ‘ಯಾವುದೇ ಸಂದರ್ಭದಲ್ಲಿ ಈ ಮಗುವನ್ನು ನೀವು ಅನಾಥವಾಗಿಸಲಾರಿರಿ ಎಂದು ಆಶಿಸುತ್ತೇನೆ.
ಸಾಕುಪ್ರಾಣಿಗಳಿಂದ ಕೂಡಿದ ಮನೆಗಳಲ್ಲಿ ಪ್ರೀತಿ, ದಯೆ, ಕರುಣೆ, ಮಾನವೀಯತೆ ಉಸಿರಾಡುತ್ತಿರುತ್ತದೆ. ನೀವು ಪ್ರೀತಿಸಿದರೆ ಅವೂ ನಿಮ್ಮನ್ನು ಪ್ರೀತಿಸುತ್ತವೆ.