Maharashtra: ಗಂಡಾಗಿ ಬದಲಾಗಿದ್ದ ಮಹಿಳಾ ಪೊಲೀಸ್​​​​​​; ಇದೀಗ ಗಂಡು ಮಗುವಿನ ತಂದೆ

|

Updated on: Jan 21, 2024 | 12:05 PM

ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗ ಬದಲಾಯಿಸಿಕೊಂಡಿದ್ದ ಮಹಿಳಾ ಪೊಲೀಸ್​​ ಪೇದೆ ಇದೀಗ ಗಂಡು ಮಗುವಿನ ತಂದೆಯಾಗಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಜೂನ್ 1988 ರಲ್ಲಿ ಹುಟ್ಟಿದ ಲಲಿತಾ ಸಾಳ್ವೆ 2020ರಲ್ಲಿ ಲಲಿತ್​​ ಕುಮಾರ್​​​​ ಆಗಿ ಬದಲಾಗಿದ್ದರು.

Maharashtra: ಗಂಡಾಗಿ ಬದಲಾಗಿದ್ದ ಮಹಿಳಾ ಪೊಲೀಸ್​​​​​​; ಇದೀಗ ಗಂಡು ಮಗುವಿನ ತಂದೆ
Lalit Kumar Salve
Follow us on

ಮಹಾರಾಷ್ಟ್ರ:  ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗ ಬದಲಾಯಿಸಿಕೊಂಡಿದ್ದ ಮಹಿಳಾ ಪೊಲೀಸ್​​ ಪೇದೆ ಇದೀಗ ಗಂಡು ಮಗುವಿನ ತಂದೆಯಾಗಿರುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.  ಬೀಡ್ ಜಿಲ್ಲೆಯ ಪೊಲೀಸ್ ಪೇದೆ ಲಲಿತ್ ಕುಮಾರ್ ಸಾಳ್ವೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ 2020ರಲ್ಲಿ ಸೀಮಾ ಎಂಬ ಯುವತಿಯನ್ನು ಮದುವೆಯಾಗಿದ್ದರು. 2018 ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ನಂತರ, ಲಿಂಗ-ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಪ್ರಕ್ರಿಯೆಯು 2018 ಮತ್ತು 2020 ರ ನಡುವೆ ಮೂರು ಶಸ್ತ್ರಚಿಕಿತ್ಸೆಗಳನ್ನು ಒಳಗೊಂಡಿತ್ತು.ಗಂಡಾಗಿ ಬದಲಾಗಿದ್ದ ಮಹಿಳಾ ಪೊಲೀಸ್​​​​​​ ಪೇದೆ ಜನವರಿ 15ರಂದು ಗಂಡು ಮಗುವಿನ ತಂದೆಯಾಗಿದ್ದಾರೆ.

ಜೂನ್ 1988 ರಲ್ಲಿ ಹುಟ್ಟಿದ ಲಲಿತಾ ಸಾಳ್ವೆ 2020ರಲ್ಲಿ ಲಲಿತ್​​ ಕುಮಾರ್​​​​ ಆಗಿ ಬದಲಾಗಿದ್ದರು. 2013 ರಲ್ಲಿ ತನ್ನ ದೈಹಿಕ ಬದಲಾವಣೆಗಳನ್ನು ಗಮನಿಸಿ, ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದಾಗ ಲಲಿತ್​​​​​ ಅಲ್ಲಿ Y ಕ್ರೋಮೋಸೋಮ್ ಇರುವಿಕೆಯನ್ನು ವೈದ್ಯರು ಬಹಿರಂಗಪಡಿಸಿದ್ದರು. ಸಾಮಾನ್ಯವಾಗಿ ಹೆಣ್ಣಿನಲ್ಲಿ ಎರಡು X ಕ್ರೋಮೋಸೋಮ್​​ಗಳು ಇರುತ್ತವೆ. ಅದರಂತೆ ವೈದ್ಯರ ಸಲಹೆ ಮೇರೆಗೆ ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಇದನ್ನೂ ಓದಿ: ಸಿಂಗಲ್​​​ ಬಾಯ್ಸ್​​​ ​​​​ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ

“ಮಹಿಳೆಯಾಗಿ ಪ್ರಾರಂಭದಲ್ಲಿ ನನ್ನ ಪ್ರಯಾಣವು ಹೋರಾಟಗಳಿಂದ ತುಂಬಿತ್ತು. ಈ ಸಮಯದಲ್ಲಿ, ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಸೂಕ್ತ ಎಂದೆನಿಸಿತ್ತು. ಈಗ ನಾನು ಸಂತೋಷವಾಗಿದ್ದೇನೆ. ನನ್ನ ಹೆಂಡತಿ ಸೀಮಾ ಮಗುವನ್ನು ಹೊಂದಲು ಬಯಸಿದ್ದಳು. ಈಗ ಕಂಡು ಮಗುವಿನ ಜನನವಾಗಿದೆ” ಎಂದು ಲಲಿತ್​​ ಕುಮಾರ್ ಸುದ್ದಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:55 am, Sun, 21 January 24