20 ಅಡಿ ಆಳದ ಬಾವಿಯಲ್ಲಿ ಚಿರತೆಯು ಸಿಕ್ಕಿಬಿದ್ದ ಘಟನೆ ಆಸ್ಸಾಂನಲ್ಲಿ ನಡೆದಿದೆ. ಈ ಮಧ್ಯೆ ನೀರಿನಲ್ಲಿ ಇಡೀ ದೇಹವನ್ನು ಮುಳುಗಿಸಿಕೊಂಡು ಮುಖವನ್ನಷ್ಟೇ ಮೇಲಕ್ಕೆತ್ತಿ ಭಯಂಕರ ಕಣ್ಣುಗಳನ್ನು ಬಿಟ್ಟು ನಿಂತಿರುವ ಅದ್ಭುತ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಾವಿಯಲ್ಲಿ ಅಚಾನಕ್ಆಗಿ ಚಿರತೆ ಬಿದ್ದುಬಿಟ್ಟಿದೆ. ಅರಣ್ಯ ಇಲಾಖೆ ಮತ್ತು ವನ್ಯ ಜೀವಿ ಸಂರಕ್ಷಣೆ ಅಧಿಕಾರಿಗಳು ಸೇರಿ ಚಿರತೆಯನ್ನು ರಕ್ಷಿಸಿದ್ದಾರೆ. ಮರಳಿ ಅದರ ವಾಸಸ್ಥಾನಕ್ಕೆ ಹಿಂತಿರುಗಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಅದು ತೆರೆದ ಬಾವಿಯಾಗಿತ್ತು. ಅಲೆದಾಡುತ್ತಿದ್ದ ಚಿರತೆ ಹೇಗೋ ಬಾವಿಯಲ್ಲಿ ಬಿದ್ದುಬಿಟ್ಟಿದೆ. ಚಿರತೆಯು ಘರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು. ಧ್ವನಿಯು ಕರ್ಕಶವಾಗಿದ್ದರಿಂದ ಒಮ್ಮೆಲೆ ಭಯವಾಯಿತು. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿದ್ದೇವೆ ಎಂದು ಗ್ರಾಮಸ್ಥರೋರ್ವರು ಹೇಳಿದ್ದಾರೆ. ಬಲೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಕರು ರಕ್ಷಿಸಿದ್ದಾರೆ. ಚಿರತೆಯನ್ನು ಅರಣ್ಯಕ್ಕೆ ಬಿಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Assam | Leopard trapped in open well on the fringe of Garbhanga forest in Kamrup district, rescued
An adult leopard that fell down in a well at Madhab Nagar was rescued by forest personnel, earlier today. Leopard was then released back into the wild: Assam Environment Min’s PRO pic.twitter.com/Qr8CH0FJnP
— ANI (@ANI) July 1, 2021
ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ವನ್ಯಜೀವಿಯನ್ನು ಸಂರಕ್ಷಿಸಿದ್ದಕ್ಕಾಗಿ ಅಧಿಕಾರಿಗಳಿಗೆ ಶ್ಲಾಘನೆ ವ್ಯಕ್ತವಾಗಿದೆ. ಅರಣ್ಯ ಸಿಬ್ಬಂದಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿದ್ದಾರೆ ಅಭಿನಂದನೆಗಳು ಎಂದು ಇನ್ನೋರ್ವರು ಹೇಳಿದ್ದಾರೆ. ಬಾವಿಯಲ್ಲಿ ಕುತ್ತಿಗೆಯನ್ನಷ್ಟೇ ಮೇಲಕ್ಕೆತ್ತಿ ಚಿರತೆ ನೋಡತ್ತಿರುವ ಚಿತ್ರ ಅದ್ಭುತವಾಗಿದೆ.. ಅಪರೂಪದ ದೃಶ್ಯ ಎಂದು ಅಭಿಪ್ರಾಯ ಕೇಳಿಬಂದಿದೆ.
ಇದನ್ನೂ ಓದಿ:
ಮಗನ ಬರ್ತ್ಡೇಗೆ ಕೇಕ್ ತರಲು ಹೋಗಿದ್ದ ಅವರನ್ನು ಚಿರತೆ ಬೆನ್ನಟ್ಟಿತು, ಜೀವ ಉಳಿಸಲು ಕೇಕ್ ನೆರವಾಯಿತು!
ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ
Published On - 11:12 am, Fri, 2 July 21