ಬಾವಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ರೋಚಕ ವಿಡಿಯೋ ವೈರಲ್​

ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾವಿಯೊಳಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ ರೋಚಕ ವಿಡಿಯೋ ವೈರಲ್​
ಚಿರತೆ ರಕ್ಷಣೆ
Image Credit source: India Today
Updated By: ವಿವೇಕ ಬಿರಾದಾರ

Updated on: Jun 26, 2022 | 10:45 PM

ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ನಾಡಿಗೆ ಬಂದು ಅಪಾಯಕ್ಕೆ ಸಿಲುಕಿರುವ ಸಾಕಷ್ಟು ಉದಾಹಣೆಗಳಿವೆ. ಅವುಗಳನ್ನು ಕೆಲವೊಂದು ಸಾರಿ ರಕ್ಷಣೆ ಮಾಡಲು ಸಾಧ್ಯವಾಗದೆ ಅಥವಾ ಜನರ ದುರ್ನಡತೆಯಿಂದ ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ವಿಡಿಯೋದಲ್ಲಿ ಚಿರತೆಯೊಂದು ಬಾವಿಗೆ ಬಿದ್ದಿದೆ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಒಂದು ಮಂಚಕ್ಕೆ ಹಗ್ಗವನ್ನು ಕಟ್ಟಿದ್ದಾರೆ. ನಂತರ ಮಂಚವನ್ನು ಬಾವಿ ಒಳಗೆ ಬಿಟ್ಟಿದ್ದಾರೆ.

ಬಾವಿ ಒಳಗೆ ಬಿಟ್ಟ ಮಂಚದ ಮೇಲೆ ಚಿರತೆ ನೆಗೆದು ಕುಳಿತು ಕೊಂಡಿದೆ. ನಂತರ ನಿಧಾನವಾಗಿ ಮಂಚವನ್ನು ಮೇಲೆ ಎತ್ತಿದ್ದಾರೆ. ಮಂಚ ಮೇಲೆ ಬರುತ್ತಿದ್ದಂತೆ ಚಿರತೆ ನಕ್ಕನೆ ಭೂಮಿ ಮೇಲೆ ಜಿಗಿದು ಓಡಿ ಹೋಗಿದೆ. ಈ ದೃಶ್ಯವಾಳಿಯನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.  ಇದಕ್ಕೆ ನೆಟ್ಟಿಗರು ಸಾಕಷ್ಟು ಕಾಮೆಂಟ್​ ಮಾಡಿದ್ದು ಅಧಿಕಾರಿಗಳ ಕಾರ್ಯಕ್ಕೆ ಮತ್ತು ಜನರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.