ಮಳೆಯಲ್ಲಿ ನೆನೆಯುತ್ತಿದ್ದ ಚಿರತೆ ಮರಿಯನ್ನು ರಕ್ಷಿಸಿ ಕರ್ತವ್ಯ ಮೆರೆದ ಪ್ರಾಣಿ ರಕ್ಷಕರು; ಕಂಬಳಿ ಹೊದ್ದು ಚಿರತೆ ಮರಿ ಮಲಗಿರುವ ದೃಶ್ಯ ನೋಡಿ

Viral Video: ನಿನ್ನೆ ಸಂಜೆಯ ವೇಳೆಗೆ ಪ್ರಾಣಿ ರಕ್ಷಕರು ಹಂಚಿಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಮರಿಯು ಬೆಚ್ಚಗೆ ಕಂಬಳಿ ಹೊದ್ದು ಮಲಗಿರುವ ದೃಶ್ಯ ಸೆರೆಯಾಗಿದೆ.

ಮಳೆಯಲ್ಲಿ ನೆನೆಯುತ್ತಿದ್ದ ಚಿರತೆ ಮರಿಯನ್ನು ರಕ್ಷಿಸಿ ಕರ್ತವ್ಯ ಮೆರೆದ ಪ್ರಾಣಿ ರಕ್ಷಕರು; ಕಂಬಳಿ ಹೊದ್ದು ಚಿರತೆ ಮರಿ ಮಲಗಿರುವ ದೃಶ್ಯ ನೋಡಿ
ಮಳೆಯಲ್ಲಿ ನೆನೆಯುತ್ತಿದ್ದ ಚಿರತೆ ಮರಿಯನ್ನು ರಕ್ಷಿಸಿ ಕರ್ತವ್ಯ ಮೆರೆದ ಪ್ರಾಣಿ ರಕ್ಷಕರು
Edited By:

Updated on: Sep 29, 2021 | 1:03 PM

ನಿನ್ನೆ (ಸೆ.29)ರಂದು ಮುಂಬೈನಲ್ಲಿ ಚಿರತೆಯೊಂದು ಮಳೆಯಲ್ಲಿ ನೆನೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅನಾಥವಾಗಿ ದಿಕ್ಕು ತೋಚದೇ ತಿರುಗಾಡುತ್ತಿದ್ದ ಚಿರತೆ ಮರಿಯನ್ನು ನೋಡಿದ ಸ್ಥಳೀಯರು ಪ್ರಾಣಿ ರಕ್ಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಕಂಬಳಿ ಹೊದ್ದು ಚಿರತೆ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಳೆಯಲ್ಲಿ ನೆಂದಿದ್ದ ಚಿರತೆ ಮರಿ ನಡುಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪ್ರಾಣಿ ರಕ್ಷಕರಿಗೆ ಕರೆ ಮಾಡಿದ್ದಾರೆ. ಅವರು ಚಿರತೆ ಮರಿಯನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ದೃಶ್ಯಗಳಲ್ಲಿ ಗಮನಿಸುವಂತೆ ಚಿರತೆ ಮರಿ ಕಂಬಳಿಯನ್ನು ಹೊದ್ದು ಬೆಚ್ಚಗೆ ಮಲಗಿರುವುದನ್ನು ನೋಡಬಹುದು.

ಪೊಲೀಸ್ ಅಧಿಕಾರಿಗಳು ಸಹ ತಮ್ಮಲ್ಲಾದ ಸಹಾಯ ಮಾಡಿದ್ದಾರೆ. ಚಿರತೆ ಮರಿಯನ್ನು ರಕ್ಷಿಸಲು ಸ್ಥಳಕ್ಕೆ ಆಗಮಿಸಿದ್ದರು ಬಳಿಕ ಪ್ರಾಣಿ ರಕ್ಷಕರ ಗುಂಪು ಮಳೆಯಲ್ಲಿ ನೆನೆಯುತ್ತ ನಿಂತಿದ್ದ ಚಿರತೆ ಮರಿಯನ್ನು ಹಿಡಿದು ರಕ್ಷಣೆ ನೀಡಿದೆ. ನಿನ್ನೆ ಸಂಜೆಯ ವೇಳೆಗೆ ಪ್ರಾಣಿ ರಕ್ಷಕರು ಹಂಚಿಕೊಂಡ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರತೆ ಮರಿಯು ಬೆಚ್ಚಗೆ ಕಂಬಳಿ ಹೊದ್ದು ಮಲಗಿರುವ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ:

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

(Leopard walking in rain in Mumbai animal rescuers saved leopard viral video)

Published On - 1:03 pm, Wed, 29 September 21