ಕಳೆದ ವರ್ಷ ಆಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯಾದಂತಹ ಸಂದರ್ಭದಲ್ಲಿ ರಾಮ ಮಂದಿರ ಥೀಮ್‌ನಲ್ಲಿ ಕೇಕ್ ತಯಾರಿಸಿದಂತಹ, ರಾಮ ಮಂದಿರ ಥೀಮ್‌ನ ವಜ್ರದ ಹಾರ ತಯಾರಿಸಿದ್ದಂತ ಸುದ್ದಿಗಳು ಬಹಳನೇ ವೈರಲ್ ಆಗಿದ್ದವು. ಇದೀಗ ಇಲ್ಲೊಂದು ವಾಚ್ ಕಂಪೆನಿ ಕೂಡಾ ರಾಮ ಮಂದಿರ ವಿನ್ಯಾಸದ ವಾಚ್ ಪರಿಚಯಿಸಿದೆ. ತನ್ನ ವಿಭಿನ್ನ ವಿನ್ಯಾಸಗಳಿಂದಲೇ ಸಾಕಷ್ಟು ಹೆಸರುವಾಸಿಯಾಗಿರುವ ಜಾಕೋಬ್ & ಕೋ ಕಂಪೆನಿ ಶ್ರೀರಾಮ, ಆಂಜನೇಯ ಮತ್ತು ರಾಮ ಮಂದಿರದ ವಿನ್ಯಾಸವಿರುವ ಈ ವಿಶಿಷ್ಟ ವಾಚ್ ತಯಾರಿಸಿದೆ. ಈ ವಿಶಿಷ್ಟ ಹಾಗೇನೇ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ತನ್ನ ವಿಶಿಷ್ಟ ವಿನ್ಯಾಸಗಳಿಗೆ ಹೆಸರುವಾಸಿಯಾದ ವಾಚ್ ಬ್ರಾಂಡ್ ಜಾಕೋಬ್ & ಕೋ ಈ ವಿಶೇಷ ಆವೃತ್ತಿಯ ವಾಚ್ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸುಮಾರು 49 ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಾಗಲೇ 35 ವಾಚ್ ಮಾರಾಟವಾಗಿದೆ.
ಜಾಕೋಬ್ & ಕೋ ಭಾರತೀಯ ಮೂಲಕ ವಾಚ್ ಕಂಪೆನಿಯಾದ ಎಥೋಸ್ ಸಹಯೋಗದೊಂದಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ಈ ವಿಶೇಷ ವಾಚ್ ತಯಾರಿಸಿದೆ. ಈ ವಾಚ್‌ನಲ್ಲಿ ಶ್ರೀರಾಮ, ಆಂಜನೇಯ ಮತ್ತು ರಾಮಮಂದಿರ ವಿಶೇಷ ವಿನ್ಯಾಸವಿದೆ. ಇದು 44 ಎಂಎಂ ರೋಸ್ ಗೋಲ್ಡ್‌ನಿಂದ ಆವೃತವಾಗಿದೆ. ಈ ವಿಶೇಷ ಆವೃತ್ತಿಯ ವಾಚ್‌ನ ಬೆಲೆ ಬರೋಬ್ಬರಿ 34 ಲಕ್ಷ ರೂಪಾಯಿಗಳು.
ಇದನ್ನೂ ಓದಿ: ಕೆ-ಪಾಪ್ ಹಾಡಿಗೆ ಹೆಜ್ಜೆ ಹಾಕಿದ ಭರತನಾಟ್ಯ ಕಲಾವಿದೆಯರು; ವಿಡಿಯೋ ವೈರಲ್
ಈ ಸೀಮಿತ ಆವೃತ್ತಿಯ ವಾಚ್ ಮೇಲೆ ಶ್ರೀ ರಾಮ, ಆಂಜನೇಯ ಮತ್ತು ರಾಮಮಂದಿರದ ವಿನ್ಯಾಸವನ್ನು ರಚಿಸಲಾಗಿದೆ. ಇದು ರಾಮಜನ್ಮ ಭೂಮಿಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಸಂಕೇತಿಸುತ್ತದೆ. ಇನ್ನೂ ಈ ವಾಚ್ ಕೇಸರಿ ಬಣ್ಣದ ರಬ್ಬರ್ ಪಟ್ಟಿಯನ್ನು ಹೊಂದಿದ್ದು, ಇದು ಆಧ್ಯಾತ್ಮಿಕತೆ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಮತ್ತು ಹಿಂದೂ ಧರ್ಮದ ಮೌಲ್ಯಗಳನ್ನು ಪ್ರತಿಧ್ವನಿಸುತ್ತದೆ. ಈ ವಿಶೇಷ ಆವೃತ್ತಿಯ ಸುಮಾರು 49 ವಾಚ್‌ಗಳನ್ನು ತಯಾರಿಸಲಾಗಿದ್ದು, ಇದಾಗಲೇ 35 ವಾಚ್ ಮಾರಾಟವಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ