Viral Video : ಮಕ್ಕಳನ್ನು ಹೇಗೆ ಖುಷಿಪಡಿಸಬೇಕು, ಅವರ ಆಸೆ ಆಕಾಂಕ್ಷೆಗಳನ್ನು ಹೇಗೆ ಈಡೇರಿಸಬೇಕು ಎಂದು ಸದಾ ಯೋಚಿಸುತ್ತಲೇ ಇರುತ್ತಾರೆ ಈಗಿನ ಅಪ್ಪ-ಅಮ್ಮ. ಆಗಾಗ ಅವರಿಗಿಷ್ಟವಾದ ಉಡುಗೊರೆಗಳನ್ನು ಕೊಟ್ಟು ಅವರ ಮುಖದಲ್ಲಿ ನಗು ಅರಳುವುದನ್ನು ಕಾಣುವ ಸಾರ್ಥಕತೆಗಾಗಿ ಹಂಬಲಿಸುತ್ತಿರುತ್ತಾರೆ. ಆದರೆ ಉಡುಗೊರೆಗಳ ಆಯ್ಕೆ ತುಂಬಾ ಮುಖ್ಯ. ಒಂದು ವಸ್ತುರೂಪದ ಉಡುಗೊರೆ ಇನ್ನೊಂದು ಜೀವಪರ ಉಡುಗೊರೆ. ವಸ್ತುರೂಪದ ಉಡುಗೊರೆಗಳನ್ನು ಕೊಡುವುದರಿಂದ ಪೋಷಕರೇ ಮಕ್ಕಳನ್ನು ಕೊಳ್ಳುಬಾಕುತನ ಸಂಸ್ಕೃತಿಗೆ ತಳ್ಳಿದಂತೆ ಆಗುತ್ತದೆ. ಇನ್ನು ಜೀವಪರ ಉಡುಗೊರೆಗಳನ್ನು ಕೊಟ್ಟಾಗ ಮಕ್ಕಳಲ್ಲಿ ಅನುಕಂಪ, ಸಹಾನುಭೂತಿ, ಸಹಾಯಗುಣದಂತ ಮಾನವೀಯ ಅಂಶಗಳನ್ನು ಮೈಗೂಡಿಸಿದಂತೆ ಆಗುತ್ತದೆ. ಇಲ್ಲಿರುವ ಈ ವಿಡಿಯೋ ಜೀವಪರ ಉಡುಗೊರೆಗೆ ಉದಾಹರಣೆ.
ಬ್ರೆನ್ನಾಳ ಅಪ್ಪ ಸೇನೆಯಲ್ಲಿ ಕೆಲಸ ಮಾಡುತ್ತಾರೆ. ಮೊದಲು ಒಂದು ಟೆಡ್ಡಿನಾಯಿಯನ್ನು ಉಡುಗೊರೆ ಕೊಟ್ಟಾಗ ಆಕೆ ಖುಷಿಪಡುತ್ತಾಳೆ. ಕೆಲ ಕ್ಷಣಗಳಲ್ಲಿಯೇ ಕಾರಿನಿಂದ ಮುದ್ದಾದ ಕಪ್ಪು ನಾಯಿಮರಿಯನ್ನು ಅವಳ ಕೈಗಿಡುತ್ತಾರೆ. ಅಚ್ಚರಿಯಿಂದ ಖುಷಿಯಿಂದ ಆಕೆ ಕಣ್ಣೀರಾಗುತ್ತಾಳೆ. ಏಕೆಂದರೆ ಈ ಉಡುಗೊರೆಯನ್ನು ಆಕೆ ನಿರೀಕ್ಷಿಸಿಯೇ ಇರಲಿಲ್ಲ!
ಬಾಲೆಯ ತಾಯಿ ಜೆನ್ನಿಫರ್ ಕ್ವಾಂಡೆ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದು 5 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ.
‘ಜೀವಂತ ನಾಯಿಮರಿ ಸಿಗುತ್ತಿದ್ದಂತೆ ಆಟಿಕೆನಾಯಿಯನ್ನು ಅವಮಾನಿಸಿದ್ದಾಳೆ’ ಎಂದು ಒಬ್ಬರು ನಗುತ್ತ ಹೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ, ‘ಆಟಿಕೆನಾಯಿ ಕೊಟ್ಟಾಗಲೂ ಅಷ್ಟೇ ಪ್ರೀತಿಯಿಂದ ಅಚ್ಚರಿ ವ್ಯಕ್ತಪಡಿಸಿರುವುದ ನನಗಂತೂ ಖುಷಿ ತಂದಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಈ ವಿಡಿಯೋ ತುಂಬಾ ಅದ್ಭುತವಾಗಿದೆ. ಇಂಥ ವಿಡಿಯೋಗಳು ಬೇಕು’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
3 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ನೀವೂ ಯೋಚಿಸುತ್ತೀರಲ್ಲವೆ? ನಿಮ್ಮ ಮಕ್ಕಳಿಗೆ ಏನು ಇಷ್ಟ, ಏನು ಉಡುಗೊರೆ ಕೊಟ್ಟರೆ ಅದು ಅವರ ಮಾನಸಿಕ ಹೇಗೆ ಪೂರಕವಾಗುತ್ತದೆ ಎಂದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:44 pm, Fri, 16 September 22