Viral Video: ಮೆಟ್ರೋನಲ್ಲಿ ಡ್ಯಾನ್ಸ್ ಮಾಡಿದ ಈ ಪುಟ್ಟ ಹುಡುಗಿಗೆ ಫಿದಾ ಆದ ನೆಟ್ಟಿಗರು

Little Girl Dancing in Metro : ದೆಹಲಿಯ ಮೆಟ್ರೋದಲ್ಲಿ ಈ ಪುಟ್ಟ ಹುಡುಗಿ ಡ್ಯಾನ್ಸ್ ಮಾಡಿದ ವಿಡಿಯೋವನ್ನು 34,59,895 ಇಷ್ಟಪಟ್ಟಿದ್ದಾರೆ. ಅಂಥದ್ದೇನಿದೆ?

Viral Video: ಮೆಟ್ರೋನಲ್ಲಿ ಡ್ಯಾನ್ಸ್ ಮಾಡಿದ ಈ ಪುಟ್ಟ ಹುಡುಗಿಗೆ ಫಿದಾ ಆದ ನೆಟ್ಟಿಗರು
Edited By:

Updated on: Aug 24, 2022 | 2:46 PM

Little Girl : ದೆಹಲಿಯ ಮೆಟ್ರೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಗೋಮಿ ಗೋಮಿ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪೀಚೆ ತೋ ದೇಖೋ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಸಮೈರಾ ಗುರುಂಗ್ ಎಂಬ ಪುಟ್ಟ ಹುಡುಗಿಯ ಇನ್​ಸ್ಟಾಗ್ರಾಂ ಪ್ರೊಫೈಲ್​ನಲ್ಲಿ ಈ ವಿಡಿಯೋ ಪೋಸ್ಟ್​ ಆಗಿದೆ. ದೆಹಲಿಯ ಮೆಟ್ರೋದ ಕಂಪಾರ್ಟ್‌ಮೆಂಟ್‌ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋ ಅನ್ನು 34,59,895 ಲಕ್ಷ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ, ಒಬ್ಬ ವ್ಯಕ್ತಿ ಸಮೈರಾ ಹಿಂದೆ ನಿಂತು ಹೆಜ್ಜೆ ಹಾಕುತ್ತಿರುವುದು ಕಾಣಿಸುತ್ತದೆ.

ಮಕ್ಕಳೇ ಹಾಗೇ. ತಾವಿದ್ದಲ್ಲೇ ಹೆಜ್ಜೆ ಹಾಕಲು ಶುರು ಮಾಡುತ್ತವೆ. ಸಂಕೋಚ, ನಾಚಿಕೆ ಎಂಬ ನಾಗರಿಕ ವರ್ತನೆಯ ಪರಿಭಾಷೆಗಳು  ಅವುಗಳನ್ನು ಪ್ರವೇಶಿಸಿರುವುದಿಲ್ಲ. ಪ್ರತಿಯೊಂದನ್ನು ಖುಷಿಯಿಂದ ಅನುಭವಿಸುವುದು ಬೆರಗಿನಿಂದ ನೋಡುವುದಷ್ಟೇ ಅವುಗಳ ಪ್ರಪಂಚವಾಗಿರುತ್ತದೆ. ಈ ನೃತ್ಯ ನೋಡಿದ ಯಾರಿಗೂ ಅಂಥ ಪ್ರಪಂಚಕ್ಕೆ ಮತ್ತೆ ಮರಳಬೇಕು ಅನ್ನಿಸದಿದ್ದೀತೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ