Blinkitನಲ್ಲಿ ಕಿಂಡರ್ ಜಾಯ್ ಆರ್ಡರ್ ಮಾಡಿ ಅಮ್ಮ ಬೈಬೇಡ ಎಂದು ಮನವೊಲಿಸುತ್ತಿರುವ ಪುಟ್ಟ ಹುಡುಗಿ, ಈ ವಿಡಿಯೋ ನೋಡಿ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಮನ ಗೆಲ್ಲುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್‌ ಆಗಿದ್ದು, ಪಾಟ್ನಾ ಮೂಲದ ಪುಟಾಣಿಯೊಂದು ಬ್ಲಿಂಕಿಟ್ ನಲ್ಲಿ ಕಿಂಡರ್ ಜಾಯ್ ಆರ್ಡರ್ ಮಾಡಿದ್ದಾಗಿ ನನಗೆ ಬೈ ಬೇಡ ಎಂದು ತನ್ನ ತಾಯಿ ಬಳಿ ಮುದ್ದು ಮುದ್ದಾಗಿ ಹೇಳಿದ್ದಾಳೆ. ಈ ಪುಟ್ಟ ಹುಡುಗಿಯ ಮುದ್ದು ಮುದ್ದಾದ ಮಾತು ನೆಟ್ಟಿಗರ ಮನ ಗೆದ್ದಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

Blinkitನಲ್ಲಿ ಕಿಂಡರ್ ಜಾಯ್ ಆರ್ಡರ್ ಮಾಡಿ ಅಮ್ಮ ಬೈಬೇಡ ಎಂದು ಮನವೊಲಿಸುತ್ತಿರುವ ಪುಟ್ಟ ಹುಡುಗಿ, ಈ ವಿಡಿಯೋ ನೋಡಿ
ವೈರಲ್​ ವಿಡಿಯೋ
Edited By:

Updated on: Feb 06, 2025 | 2:13 PM

ಮಕ್ಕಳ ಮುದ್ದಾದ ಮಾತುಗಳನ್ನು ಕೇಳುವುದೇ ಚಂದ. ಅದರಲ್ಲಿ ತಪ್ಪು ಮಾಡಿ ತನ್ನ ತಾಯಿಯ ಬಳಿ ಹೇಳಿಕೊಳ್ಳುವ ರೀತಿ ನೋಡಿದ್ರೆ ಒಳಗೊಳಗೆ ನಗು ಬರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಮಕ್ಕಳು ತಮ್ಮ ಮುದ್ದು ಮುದ್ದು ಮಾತುಗಳಿಂದ ಎಲ್ಲರ ಮನ ಗೆಲ್ಲುತ್ತಾರೆ. ಇದೀಗ ಅಂತಹದ್ದೇ ಕ್ಯೂಟ್‌ ವಿಡಿಯೋವೊಂದು ವೈರಲ್‌ ಆಗಿದ್ದು, ಪುಟಾಣಿಯೊಂದು ಬ್ಲಿಂಕಿಟ್ ಮೂಲಕ ರಹಸ್ಯವಾಗಿ ಕಿಂಡರ್ ಜಾಯ್ ಆರ್ಡರ್ ಮಾಡಿದ್ದಾಗಿ ತನ್ನ ತಾಯಿ ಬಳಿ ಮುದ್ದು ಮುದ್ದಾಗಿ ಹೇಳಿಕೊಂಡಿರುವ ಕ್ಲಿಪಿಂಗ್ಸ್ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದೆ.

ಈ ವಿಡಿಯೋವನ್ನು ಎರಾ ಸಿನ್ಹಾ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು , ಈ ವಿಡಿಯೋದಲ್ಲಿ ಪುಟಾಣಿ ಹುಡುಗಿಯೊಬ್ಬಳು, ಅಮ್ಮ, ನೀವು ನನಗೆ ಬೈಯುವುದಿಲ್ಲ ಅಲ್ಲವೇ ಎಂದು ಕೇಳಿದ್ದಾಳೆ. ಆ ಪುಟಾಣಿಯ ತಾಯಿ ಅನುಮಾನದಿಂದ, ಯಾಕೆ? ಎಂದು ಕೇಳಿದ್ದು,.ನಾನು ಬ್ಲಿಂಕಿಟ್ ನಿಂದ ಕಿಂಡರ್ ಜಾಯ್ ಅನ್ನು ಆರ್ಡರ್ ಮಾಡಿದೆ ಎಂದು ಹೇಳಿ ತಪ್ಪು ಒಪ್ಪಿಕೊಂಡಿದ್ದಾಳೆ. ಆದರೆ ತಾಯಿ ಈಗ ಯಾಕೆ ಅದನ್ನು ತಿನ್ನುತ್ತೀಯಾ, ಇದು ಊಟದ ಸಮಯ ಎಂದು ಗದರಿದ್ದಾಳೆ. ಆ ತಕ್ಷಣವೇ ಪುಟ್ಟ ಹುಡುಗಿ ಉತ್ತರಿಸಿದ್ದು, ಖುಷಿ ಆಗ್ತದೆ ಎಂದು ಹೇಳಿದ್ದಾಳೆ. ಆ ಬಳಿಕ ಎಂತ ಊಟ ಊಟ ಊಟ ಎಂದು ವ್ಯಂಗ್ಯವಾಗಿ ಹೇಳಿ ಚೇಷ್ಟೆ ನಗು ಬೀರಿದ್ದಾಳೆ. ಈ ವಿಡಿಯೋವೊಂದು ನಾಲ್ಕು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದು ನೋಡುಗರ ಹೃದಯ ಗೆದಿದ್ದು, ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ನಾನು ಹೀಗೆ ನನ್ನ ತಾಯಿಯ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಅವಳು ಮಜಾ ಆಯೇಗಾ ಎಂದು ಹೇಳುವ ರೀತಿ ನಿಜಕ್ಕೂ ಅದ್ಭುತವಾಗಿದೆ. ಇನ್ನೊಬ್ಬ ಬಳಕೆದಾರರು, ‘ಅತಿಯಾಗಿ ಯೋಚಿಸುವುದನ್ನು ಮರೆತುಬಿಡಿ, ಮಜಾ ಆಯೇಗಾ ಎಂದು ಹೇಳಿ ಮುಂದುವರೆಯಿರಿ’ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ