AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 680ರೂ. ಆಭರಣ ಕೊಳ್ಳಲು ತಾಯಿಯ 1.16 ಕೋಟಿ ರೂ. ಮೌಲ್ಯದ ಒಡವೆಗಳ ಮಾರಿದ ಮಗಳು

680 ರೂ. ಆಭರಣಕ್ಕಾಗಿ 1.16 ಕೋಟಿ ರೂ. ಮೌಲ್ಯದ ಒಡವೆ ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಯುವತಿಯೊಬ್ಬರು 680ರೂ.ನ ಆಭರಣಕ್ಕಾಗಿ ತಾಯಿಯ 1.16 ಕೋಟಿ ರೂ. ಮೌಲ್ಯದ ಆಭರಣವನ್ನು ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. 680 ರೂ.ಬೆಲೆಯ ಲಿಪ್​ಸ್ಟಡ್ಸ್​ ಖರೀದಿಸಲು ಕೋಟಿ ಮೌಲ್ಯದ ಆಭರಣವನ್ನು ಮಾರಿರುವ ಯುವತಿ ಕಂಡು ಎಲ್ಲರೂ ಬೆರಗಾಗಿದ್ದಾರೆ.

Viral: 680ರೂ. ಆಭರಣ ಕೊಳ್ಳಲು ತಾಯಿಯ 1.16 ಕೋಟಿ ರೂ. ಮೌಲ್ಯದ  ಒಡವೆಗಳ ಮಾರಿದ ಮಗಳು
ಆಭರಣImage Credit source: Dhanvitours
ನಯನಾ ರಾಜೀವ್
|

Updated on: Feb 07, 2025 | 9:17 AM

Share

ಅನೇಕ ಬಾರಿ ಮಕ್ಕಳು ಪೋಷಕರ ಮುಂದೆ ಹಲವು ಬೇಡಿಕೆಗಳನ್ನಿಡುತ್ತಾರೆ. ಕೆಲವೊಂದನ್ನು ಪೋಷಕರು ಈಡೇರಿಸುತ್ತಾರೆ, ಆದರೆ ಹೇಳಿದ್ದೆಲ್ಲವನ್ನೂ ತಂದುಕೊಟ್ಟು ಮಕ್ಕಳನ್ನು ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ಕೆಲವು ಪೋಷಕರು ಎಲ್ಲವನ್ನೂ ತಂದುಕೊಡುವುದಿಲ್ಲ.

ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಯುವತಿಯೊಬ್ಬರು 680ರೂ.ನ ಆಭರಣಕ್ಕಾಗಿ ತಾಯಿಯ 1.16 ಕೋಟಿ ರೂ. ಮೌಲ್ಯದ ಆಭರಣವನ್ನು ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. 680 ರೂ.ಬೆಲೆಯ ಲಿಪ್​ಸ್ಟಡ್ಸ್​ ಖರೀದಿಸಲು ಕೋಟಿ ಮೌಲ್ಯದ ಆಭರಣವನ್ನು ಮಾರಿರುವ ಯುವತಿ ಕಂಡು ಎಲ್ಲರೂ ಬೆರಗಾಗಿದ್ದಾರೆ. ಆಕೆಯೇ ಈ ವಿಚಾರವನ್ನು ಬಾಯ್ಬಿಟ್ಟಿರಲಿಲ್ಲ. ಆಕೆಯ ತಾಯಿ ತನ್ನ ಆಭರಣ ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಆದರೆ ದುರಾದೃಷ್ಟವೆಂದರೆ ಬಳೆಗಳು, ಕಂಠಹಾರಗಳು, ವಜ್ರವನ್ನು ನಕಲಿ ಎಂದು ತಿಳಿದು ಕಡಿಮೆ ಬೆಲೆ ಮಾರಾಟ ಮಾಡಿದ್ದಾಳೆ ಇದನ್ನು ತಿಳಿದು ತಾಯಿ ಆಘಾತಕ್ಕೊಳಗಾಗಿದ್ದಾಳೆ. ಆಕೆ ಅದನ್ನು ಮಾರಾಟ ಮಾಡಲು ಮುಂದಾಗಿದ್ದುದು ನನಗೆ ತಿಳಿದಿರಲಿಲ್ಲ, ಆ ದಿನ ಆಕೆಗೆ ಹಣದ ಅಗತ್ಯವಿತ್ತು, ಎಷ್ಟು ಬೇಕು ಎಂದು ಕೇಳಿದಾಗ 60 ಯುವಾನ್ ಎಂದು ಹೇಳಿದ್ದಳು, ಯಾರೋ ಲಿಪ್​ ಸ್ಟಡ್ಸ್​ ಧರಿಸಿರುವುದನ್ನು ನೋಡಿದ್ದೇನೆ ನನಗೂ ಬೇಕೆಂದು ಕೇಳಿದ್ದಳು.

ಮತ್ತಷ್ಟು ಓದಿ: ಬಜೆಟ್ ಎಫೆಕ್ಟ್, ಆಮದು ಸುಂಕ ಕಡಿತ; ಚಿನ್ನಾಭರಣ, ಇತರೆ ಒಡವೆಗಳ ಬೆಲೆ ಇಳಿಕೆ ಸಾಧ್ಯತೆ

ಪೊಲೀಸರು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದರು ಮತ್ತು ಮಾರುಕಟ್ಟೆ ಆಡಳಿತ ಮಂಡಳಿಯ ಸಹಯೋಗದೊಂದಿಗೆ ತನಿಖೆಯಲ್ಲಿ ತೊಡಗಿಸಿಕೊಂಡರು. ಶೀಘ್ರದಲ್ಲೇ ಅವರು ಎಲ್ಲಾ ಆಭರಣಗಳನ್ನು ಮಾರಾಟ ಮಾಡಿದ ಜೇಡ್ ಮರುಬಳಕೆ ಅಂಗಡಿಯನ್ನು ಕಂಡುಕೊಂಡರು. ಮಾರಾಟವಾಗಿದ್ದ ಎಲ್ಲಾ ಆಭರಣಗಳು ಆಕೆಗೆ ಸಿಕ್ಕಿವೆ.

ಕೆಲವರು ಅಷ್ಟು ದುಬಾರಿ ಆಭರಣಗಳನ್ನು ಹುಡುಗಿಯ ಕೈಗೆಟುಕುವಂತೆ ಏಕೆ ಇಟ್ಟಿದ್ದಾರೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಅವಳಿಗೆ ಅಗತ್ಯವಾದ ಪಾಕೆಟ್ ಮನಿ ಏಕೆ ನೀಡುತ್ತಿಲ್ಲ ಎಂದು ಕೇಳಿದರು. ಒಬ್ಬ ಹದಿಹರೆಯದ ಹುಡುಗಿ ಒಂದು ಮಿಲಿಯನ್ ಯುವಾನ್ ಮೌಲ್ಯದ ಆಭರಣಗಳನ್ನು 60 ಯುವಾನ್‌ಗೆ ಮಾರಾಟ ಮಾಡುತ್ತಿದ್ದರೆ, ಆಕೆಯ ಪೋಷಕರು ಎಚ್ಚೆತ್ತುಕೊಳ್ಳಬೇಕಿತ್ತು. ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ