Viral: ಪ್ರೀತಿಸಿ ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿದ ಪೊಲೀಸಪ್ಪ; ವಿಡಿಯೋ ವೈರಲ್
ಪ್ರೀತಿಸಿ ವಿವಾಹವಾದ ಕೆಲ ಹೊತ್ತಲ್ಲೇ ನವ ದಂಪತಿಗಳಿಬ್ಬರು ಹೊಡೆದಾಡಿಕೊಂಡಂತಹ ಪ್ರಕರಣವೊಂದು ಈ ಹಿಂದೆ ನಡೆದಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಕಲವೇ ಕ್ಷಣದಲ್ಲಿ ಪೊಲೀಸಪ್ಪ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿ ಹೈಡ್ರಾಮ ಸೃಷ್ಟಿಸಿದ್ದಾನೆ. ಪತಿಯ ವಿರುದ್ಧ ವಧು ಠಾಣೆಯ ಮೆಟ್ಟಿಲೇರಿದ್ದು, ದೂರಿನ ಆಧಾರದ ಮೇಲೆ ಹೆಂಡ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಮದುವೆಯಲ್ಲಿ ತಾಳಿ ಕಟ್ಟಿದ ಬಳಿಕ ವಧು ವರರು ಬಹಳ ಖುಷಿ ಖುಷಿಯಾಗಿ ನವ ಜೀವನಕ್ಕೆ ಕಾಲಿಡುತ್ತಾರೆ. ಅದರಲ್ಲೂ ಪ್ರೀತಿಸಿ ವಿವಾಹವಾದವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸಿ ವಿವಾಹವಾದ ಕೆಲವೇ ಹೊತ್ತಲ್ಲೇ ಪೊಲೀಸಪ್ಪ ನವವಧು ಅಂದ್ರೆ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿ ಹೈ ಡ್ರಾಮ ಸೃಷ್ಟಿಸಿದ್ದಾನೆ. ಹೌದು ಈ ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದು, ಆದ್ರೆ ಸ್ವಲ್ಪ ಹೊತ್ತಲ್ಲೇ ಆತ ಹೆಂಡತಿಯ ಮೇಲೆ ಕೈ ಮಾಡಿದ್ದಾನೆ. ಪತಿಯ ವಿರುದ್ಧ ವಧು ಠಾಣೆಯ ಮೆಟ್ಟಿಲೇರಿದ್ದು, ದೂರಿನ ಆಧಾರದ ಮೇಲೆ ಹೆಂಡ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಬಿಹಾರದ ನವಾಡದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಮದುವೆಯಾದ ಕೆಲವೇ ಹೊತ್ತಲ್ಲೇ ತನ್ನ ಪತ್ನಿಯ ಕೆನ್ನೆಗೆ ಬಾರಿಸಿ ಹೈಡ್ರಾಮ ಸೃಷ್ಟಿಸಿದ್ದಾನೆ. ಮಾಹಿತಿಯ ಪ್ರಕಾರ, ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮುಂಗೇರ್‌ನ ಧರ್ಹರ ಗ್ರಾಮದ ಸಬ್ ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ಮತ್ತು ಕತಿಹಾರ್‌ನ ಕುರ್ಸೇಲಾದ ಮಹಿಳಾ ಕಾನ್‌ಸ್ಟೆಬಲ್ ದೇವಸ್ಥಾನದಲ್ಲಿ ಸರಳವಾಗಿ ಪ್ರೇಮ ವಿವಾಹ ಆಗಿದ್ದಾರೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ, ವಿವಾಹ ನೆರವೇರಿದ ಕೆಲವೇ ಹೊತ್ತಿಗೆ ದೇವಸ್ಥಾನದಲ್ಲಿಯೇ ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿ ದೊಡ್ಡ ರಂಪಾಟ ಸೃಷ್ಟಿಸಿದ್ದಾನೆ. ಈ ಬಗ್ಗೆ ವಧು ಅಂದ್ರೆ ಮಹಿಳಾ ಕಾನ್‌ಸ್ಟೆಬಲ್ ದೂರನ್ನು ದಾಖಲಿಸಿದ್ದು, ಆಕೆಯ ದೂರಿನ ಮೇರೆಗೆ ಎಸ್‌ಪಿ ಅಭಿನವ್ ಧಿಮಾನ್ ತಕ್ಷಣ ಪತ್ನಿಯ ಕಪಾಳಕ್ಕೆ ಬಾರಿಸಿದ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ ( ಕೃಪೆ: Ghar Ke Kalesh)
In Nawada, Bihar, A policeman slapped his newly-wed bride immediately after marriage in a temple, The woman lodged a complaint after which SP Abhinav immediately suspended the inspector. pic.twitter.com/h7a3GXhbPY
— Ghar Ke Kalesh (@gharkekalesh) February 4, 2025
ಪೊಲೀಸಪ್ಪನ ರಂಪಾಟಕ್ಕೆ ಸಂಬಂಧಿಸಿದ ವಿಡಿಯೋವನ್ನು Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ದೇವಾಲಯದಲ್ಲಿ ಸರಳವಾಗಿ ವಿವಾಹವಾಗುವ ದೃಶ್ಯವನ್ನು ಕಾಣಬಹುದು. ಹೀಗೆ ಮದುವೆಯಾಗಿ ದೇವಾಲಯದಿಂದ ಹೊರ ಬರುತ್ತಿದ್ದಂತೆ ಇನ್ಸ್‌ಪೆಕ್ಟರ್ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿದ್ದಾನೆ.
ಇದನ್ನೂ ಓದಿ: ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಪ್ರಯಾಣಿಕರಿಗೆ ಬಿಸ್ಕತ್ ಹಂಚಿದ ಬೆಂಗಳೂರು ಆಟೋ ಡ್ರೈವರ್!
ಫೆಬ್ರವರಿ 04 ರಂದು ಶೇರ್ ಮಾಡಲಾದ ಈ ವಿಡಿಯೋ 3.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತನನ್ನು ಅಮಾನತುಗೊಳಿಸಿ ಒಳ್ಳೆಯ ಕೆಲಸ ಮಾಡಿದ್ರುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪೊಲೀಸ್ ವಿರುದ್ಧ ತಕ್ಷಣ ಕ್ರಮ ಕೈಗೊಂಡಿರುವುದು ಸಂತಸ ತಂದಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟೇ ಅಲ್ಲ ಆ ಮಹಿಳೆ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




