Viral Video: ವರ್ಷಗಳ ಬಳಿಕ ಅಮ್ಮನನ್ನು ಕಂಡಾಗ ಮುದ್ದು ಕಂದಮ್ಮನ ಖುಷಿ ಹೇಗಿತ್ತು ನೋಡಿ

ಒಂದು ವರ್ಷದ ಬಳಿಕ ಅಮ್ಮನನ್ನು ಕಂಡಾಗ ಮಗುವಿನ ಮುಖದಲ್ಲಿರುವ ಖುಷಿ ನೆಟ್ಟಿಗರ ಮನಸ್ಸು ಗೆದ್ದಿದೆ. ಸದ್ಯ ಈ ವಿಡಿಯೋ ಮೂರೇ ದಿನದಲ್ಲಿ 2 ಮಿಲಿಯನ್​​​ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ. ಮಗುವಿನ ಮುಗ್ಧ ನಗು, ಖುಷಿ ನಿಮ್ಮ ಕಣ್ಣಲ್ಲಿ ಕಣ್ಣೀರು ಬರಿಸುವುದಂತೂ ಖಂಡಿತಾ

Viral Video: ವರ್ಷಗಳ ಬಳಿಕ ಅಮ್ಮನನ್ನು ಕಂಡಾಗ ಮುದ್ದು ಕಂದಮ್ಮನ ಖುಷಿ ಹೇಗಿತ್ತು ನೋಡಿ
Video viral on social media
Image Credit source: instagram

Updated on: Oct 07, 2023 | 10:57 AM

ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಪ್ರತೀ ದಿನ ಲಕ್ಷಾಂತರ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳ ಮಾತ್ರ ಭಾರೀ ವೈರಲ್​​ ಆಗುವುದುಂಟು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಈ ಮುದ್ದು ಕಂದಮ್ಮನ ವಿಡಿಯೋ. ಒಂದು ವರ್ಷದ ಬಳಿಕ ಅಮ್ಮನನ್ನು ಕಂಡಾಗ ಮಗುವಿನ ಮುಖದಲ್ಲಿರುವ ಖುಷಿ ನೆಟ್ಟಿಗರ ಮನಸ್ಸು ಗೆದ್ದಿದೆ. ಸದ್ಯ ಈ ವಿಡಿಯೋ ಮೂರೇ ದಿನದಲ್ಲಿ 2 ಮಿಲಿಯನ್​​​ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ.

ವಿಡಿಯೋದಲ್ಲಿ ವಿದೇಶದಲ್ಲಿರುವ ಅಮ್ಮನ ಬರುವಿಕೆಗಾಗಿ ಮಗು ಅಪ್ಪ ಹಾಗೂ ಸಂಬಂಧಿಕರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವುದನ್ನು ಕಾಣಬಹುದು. ದೂರದಲ್ಲಿ ಅಮ್ಮ ಬರುವುದು ಕಾಣುತ್ತಿದ್ದಂತೆ ಮಗುವಿನ ಖುಷಿಗೆ ಪಾರವೇ ಇಲ್ಲ. ಮಗುವಿನ ಮುಗ್ಧ ನಗು, ಖುಷಿ ನಿಮ್ಮ ಕಣ್ಣಲ್ಲಿ ಕಣ್ಣೀರು ಬರಿಸುವುದಂತೂ ಖಂಡಿತಾ. ವಿಡಿಯೋ ಹಂಚಿಕೊಂಡ ಕೇವಲ ಮೂರೇ ದಿನದಲ್ಲಿ 2ಮಿಲಿಯನ್​​ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವ ಮುದ್ದು ಕಂದಮ್ಮನ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

ಈ ವಿಡಿಯೋವನ್ನು ಜೆರಿನ್ ಜೇಮ್ಸ್ ಎಂಬವರ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಮೂರೇ ದಿನಕ್ಕೆ 334,915 ಲೈಕುಗಳನ್ನು ಪಡೆದುಕೊಂಡಿದೆ. ‘ಈ ವಿಡಿಯೋ ನನ್ನ ಕಣ್ಣಲ್ಲಿ ನೀರು ತರಿಸಿತು’ ಎಂದು ಸಾಕಷ್ಟು ನೆಟ್ಟಿಗರು ಬರೆದುಕೊಂಡಿದ್ದಾರೆ. ಈ ವಿಡಿಯೋ ಎಷ್ಟು ನೋಡಿದರೂ ಸಾಲುವುದಿಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: