Viral Video : ಒಂದೊಂದು ಮಗುವೂ ವಿಶಿಷ್ಟ. ಎಳವೆಯಲ್ಲಿ ನೀವು ಯಾವುದರತ್ತ ಆಕರ್ಷಿಸುತ್ತೀರೋ ಅದರತ್ತ ಅದು ಆಸಕ್ತಿ ಬೆಳೆಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಈ ಪುಟ್ಟ ಬಾಲಕಿ 38 ಸೆಕೆಂಡುಗಳಲ್ಲಿ 75 ಜಿಲ್ಲೆಗಳ ಹೆಸರುಗಳನ್ನು ಒಂದೇ ಉಸಿರಿನಲ್ಲಿ ಒಪ್ಪಿಸಿ ನೆಟ್ಟಿಗರಲ್ಲಿ ಅಚ್ಚರಿ ಹುಟ್ಟಿಸಿದ್ದಾಳೆ. ಈಕೆಯ ಸ್ಮರಣಶಕ್ತಿಗೆ ಬೆರಗಾದ ನೆಟ್ಟಿಗರು ಈ ವಿಡಿಯೋ ವೈರಲ್ ಮಾಡಿದ್ದಾರೆ. ಶುಭಂಕರ್ ಮಿಶ್ರಾ ಎನ್ನುವ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಆದರ್ಶ ಪ್ರಾತ್ಮಿಕ್ ವಿದ್ಯಾಲಯದಲ್ಲಿ ಓದುತ್ತಿರುವ ಈ ಬಾಲಕಿಯ ಹೆಸರು ಮೌನ್ವಿ ಚೌರಾಸಿಯಾ.
कमाल की बच्ची है। इस बच्ची के हुनर को आप भी करेंगे सलाम
ಇದನ್ನೂ ಓದಿउत्तर प्रदेश के देवरिया की इस बच्ची ने बिना रुके सिर्फ 38 सेकंड में यूपी के 75 जिलों के नाम गिना दिए, वो भी अक्षरों के क्रम के हिसाब से। #Deoria pic.twitter.com/lNto24lpQ7
— Shubhankar Mishra (@shubhankrmishra) September 13, 2022
ಅದ್ಭುತ ಪ್ರತಿಭೆಯ ಬಾಲಕಿ ಹೀಗೆ ನಿರಂತರವಾಗಿ 75 ಜಿಲ್ಲೆಗಳ ಹೆಸರುಗಳನ್ನು ವರ್ಣಮಾಲಿಕೆಯ ಕ್ರಮದಲ್ಲಿ ಹೇಳುವುದನ್ನು ಕೇಳಿದರೆ ಯಾರಿಗೂ ಸಂಚಲನ ಮೂಡದೇ ಇರದು. ಈತನಕ 36,000 ವೀಕ್ಷಣೆ, ಸುಮಾರು 4,000 ಲೈಕ್ಸ್, 700ಕ್ಕೂ ಹೆಚ್ಚು ರೀಟ್ವೀಟ್ ಪಡೆದಿದೆ ಈ ವಿಡಿಯೋ.
ಈಕೆಯ ನೆನಪಿನ ಶಕ್ತಿ ಬಗ್ಗೆ ನೆಟ್ಟಿಗರು ಪ್ರಶಂಸಿಸಿದ್ದಾರೆ. ‘ಇಂಥ ಅದ್ಭುತ ಸ್ಮರಣಶಕ್ತಿ ಹೊಂದಿರುವ ಈ ಬಾಲೆಗೆ ಅತ್ಯುತ್ತಮ ಭವಿಷ್ಯವಿದೆ’ ಎಂದು ಹಾರೈಸಿದ್ದಾರೆ.
ಮಕ್ಕಳಿಗೆ ಬಾಲ್ಯದಲ್ಲಿ ಹೀಗೆ ಒಂದಿಲ್ಲಾ ಒಂದು ಗುಂಗು, ಕೌಶಲವನ್ನು ಹೊಕ್ಕಿಸಿಬಿಟ್ಟರೆ, ಅವರದೇ ಪ್ರಪಂಚದಲ್ಲಿ ಆಸಕ್ತಿಗಳಲ್ಲಿ ಕಲಿಕೆಯಲ್ಲಿ ಅವರು ಬೆಳೆಯುತ್ತ ಹೋಗುತ್ತಾರೆ. ಪ್ರತಿಯೊಂದಕ್ಕೂ ಸ್ಪೂನ್ ಫೀಡ್ ಮಾಡಬೇಕಿಲ್ಲ. ಮುಖ್ಯವಾಗಿ, ಸುಲಭವಾಗಿ ಹೊರಪ್ರಭಾವಕ್ಕೆ ಒಳಗಾಗಲಾರರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ