ಪುಟ್ಟ ಬಾಲಕಿಯು ತಾನು ಸಾಕಿದ ನಾಯಿಮರಿಗಾಗಿ ಹಾಡು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಮಗು ಹಾಡು ಹೇಳುತ್ತಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳು ಮನುಷ್ಯನನ್ನು ಹಚ್ಚಿಕೊಂಡಷ್ಟು ಮನುಷ್ಯರೇ ಮನುಷ್ಯರನ್ನು ಹಚ್ಚಿಕೊಳ್ಳುವುದಿಲ್ಲ. ಮೂಕ ಪ್ರಾಣಿಗಳಾದರೂ ಮನುಷ್ಯನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಸಾಕು ಪ್ರಾಣಿಗಳು ಮಾನವರನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು ಎಂಬುದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.
ಪ್ರಾಣಿಗಳ ವಿಡಿಯೋಗಳು ಹೆಚ್ಚು ಮನಸೆಳೆಯುತ್ತವೆ. ಮತ್ತೆ ಮತ್ತೆ ವಿಡಿಯೋ ನೋಡಿ ಬಿಡೋಣ ಅನ್ನುವಷ್ಟರ ಮಟ್ಟಿಗೆ ಕಾಡುತ್ತದೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಪುಟ್ಟ ಮುಖ, ಕೆಂಪಾದ ಕೆನ್ನೆ, ಸುಮಧುರ ಕಂಠ. ತಾನು ಪ್ರೀತಿಯಿಂದ ಸಾಕಿದ ನಾಯಿ ಮರಿಗೆ ಮುದ್ದಾಗಿ ಕಾಡು ಹೇಳುತ್ತಾಳೆ ಆ ಕಂದಮ್ಮ. ಮನೆಯ ಸುತ್ತಲು ಹಸಿರು ಹುಲ್ಲು, ಮಧ್ಯೆ ಆ ಪುಟ್ಟ ಬಾಲಕಿ ನಾಯಿ ಮರಿಯನ್ನು ಮುದ್ದಿಸುತ್ತಾಳೆ. ‘ಮಗು ತುಂಬಾ ಸುಮಧುರವಾಗಿ ಹಾಡು ಹೇಳುತ್ತಿದ್ದಾಳೆ’ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದರೆ. ‘ಆ ಪುಟ್ಟ ಮಗು ನಾಯಿ ಮರಿಯನ್ನು ಮಲಗಿಸಿಕೊಂಡಿರುವುದು ಅಪಾಯಕಾರಿ, ಏಕೆಂದರೆ ನಾಯಿ ಮರಿಗೆ ಉದ್ದಾದ ಉಗುರುಗಳಿವೆ’ ಎಂದು ಹೇಳಿದ್ದಾರೆ.
18 ಸೆಂಕೆಂಡುಗಳ ವಿಡಿಯೋದಲ್ಲಿ ಮಗು, ನಾಯಿ ಮರಿಗಾಗಿ ಹಾಡು ಹಾಡುತ್ತಿರುವುದನ್ನು ನೋಡಬಹುದು. ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 94,000ಕ್ಕೂ ಹೆಚ್ಚು ವೀಕ್ಷಣೆಯನ್ನು ಗಳಿಸಿಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು, ನಾಯಿ ಉದ್ದದ ಉಗುರುಗಳನ್ನು ಹೊಂದಿದೆ. ಮುದ್ದಾದ ಮಗುವಿಗೆ ಅಪಾಯವಾಗಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಗು ತುಂಬಾ ಚೆನ್ನಾಗಿ ಹಾಡು ಹೇಳುತ್ತಿದೆ ಎಂದು ಇನ್ನೋರ್ವರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:
Published On - 4:19 pm, Mon, 31 May 21