ಒಂದು ಮದುವೆಗಾಗಿ ನೂರು ಸುಳ್ಳು ಹೇಳಿ ಎಂಬ ನಮ್ಮ ಹಿರಿಯರ ಮಾತಿನಂತೆ, ಕೆಲವೊಂದು ಬಾರಿ ಮದುವೆ ಸಮಯದಲ್ಲಿ ಸುಳ್ಳು ಹೇಳುವ ಅನಿವಾರ್ಯತೆ ಬರುತ್ತದೆ. ಅದು ಆ ಸನ್ನಿವೇಶಕ್ಕೆ ಆಧಾರವಾಗಿ. ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರ ಕ್ಷಣ ಮತ್ತು ಅದು ಜೀವನದಲ್ಲಿ ಒಂದೇ ಬಾರಿ ಬರುವುದು. ಆ ಮದುವೆ ಇಬ್ಬರ ಜೀವನಕ್ಕೆ ಮುನ್ನಡಿಯಾಗಿರುತ್ತದೆ. ಆದರೆ ಇಲ್ಲೊಂದು ಅಚ್ಚರಿಯ ಮದುವೆ ಒಂದು ನಡೆದಿದೆ. ಹೌದು ಬಿಹಾರದ ಬೇಗುಸರಾಯ್ ಜಿಲ್ಲೆಯ ಪಶುವೈದ್ಯರನ್ನು ಮದುವೆಗಾಗಿ ಅಪಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ತೆಘ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿಧೌಲಿ ಗ್ರಾಮದ ಪಶುವೈದ್ಯ ಸತ್ಯಂ ಕುಮಾರ್ ಝಾ ಅವರು ಸೋಮವಾರ ಮಧ್ಯಾಹ್ನ ದನಗಳ ಚಿಕಿತ್ಸೆಗೆಂದು ಹೋಗಿದ್ದರು ಮತ್ತು ಜನರ ಗುಂಪೊಂದು ಅವರನ್ನು ಅಪಹರಿಸಿ ಹುಡುಗಿಯನ್ನು ಬಲವಂತವಾಗಿ ವಿವಾಹ ಮಾಡಿಸಿದ್ದಾರೆ.
ಪಶುವೈದ್ಯ ಸತ್ಯಂ ಕುಮಾರ್ ಅವರ ತಂದೆ ಸುಬೋಧ್ ಕುಮಾರ್ ಝಾ ಹೇಳಿರುವ ಪ್ರಕಾರ ”ಸತ್ಯಂ ಸಂಜೆಯವರೆಗೂ ಮನೆಗೆ ಬಾರದಿದ್ದಾಗ ಆತನಿಗಾಗಿ ಹುಡುಕಾಟ ಆರಂಭಿಸಿದ್ದೆವು, ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಮಂಗಳವಾರ ಬೆಳಗ್ಗೆ ನನ್ನ ಮೊಬೈಲ್‌ನಲ್ಲಿ ವಿಡಿಯೋ ಕ್ಲಿಪ್ ಬಂದಿತ್ತು. ಕ್ಲಿಪ್ ನೋಡಿದಾಗ ನನ್ನ ಮಗ ಒಂದು ಹುಡುಗಿಯ ಪಕ್ಕದಲ್ಲಿ ಮದುವೆಗಾಗಿ ಕುಳಿತಿದ್ದ. ಇದನ್ನು ನೋಡಿ ನಮಗೂ ಶಾಕ್ ಆಗಿದೆ. ನಾವು ಆರೋಪಿಗಳನ್ನು ಹೆಸರಿಸಿ ಲಿಖಿತ ದೂರನ್ನು ತೇಗ್ರಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದೇವೆ” ಎಂದು ಝಾ ಹೇಳಿದರು.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನಿಮ್ಮ ಜಾಣತನಕ್ಕೊಂದು ಸವಾಲು, ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ ಗುರುತಿಸಿ !
ಈ ಬಗ್ಗೆ ನಮಗೂ ದೂರ ಬಂದಿದೆ, ಎಲ್ಲಾ ದೃಷ್ಟಿಗಳಿಂದಲ್ಲೂ ತನಿಖೆ ನಡೆಯುತ್ತಿದೆ. ಪ್ರೇಮ ಪ್ರಕರಣಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ತೇಗ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಹೇಳಿದರು. ಅವರು ಯಾಕೆ ಆ ಹುಡುಗಿಯ ಜೊತೆಗೆ ಮದುವೆ ಮಾಡಿದ್ದಾರೆ ಎಂದು ನಮಗೂ ತಿಳಿದಿಲ್ಲ. ಇದರ ಬಗ್ಗೆ ಸಂಪೂರ್ನ ತನಿಖೆ ನಡೆಯುತ್ತದೆ,. ನಾವು ಈ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಾಗಿದೆ ಎಂದು ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Wed, 15 June 22