Viral Video: ಅಬ್ಬಬ್ಬಾ! ಮಿರ್ಚಿ ಬಜ್ಜಿ ತಿಂದಂಗೆ ಜಿರಳೆ ಫ್ರೈ ಸವಿದ ಯುವತಿ…

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 16, 2024 | 4:31 PM

ನಮ್ಮಲ್ಲಿ ಯುವತಿಯರು ಒಂದು ಸಣ್ಣ ಜಿರಳೆಯನ್ನು ಕಂಡರೂ ಕಾಲ್ಕಿತ್ತು ಓಡಿಯೇ ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಆ ಜಿರಳೆಯನ್ನೇ ಫ್ರೈ ಮಾಡಿ ತಿಂದಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇಂತಹ ಆಹಾರಗಳನ್ನೂ ತಿನ್ನುತ್ತಾರೆಯೇ?, ಇದನ್ನು ನೋಡಿದ್ರೆ ವಾಕರಿಕೆ ಬರುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Viral Video: ಅಬ್ಬಬ್ಬಾ! ಮಿರ್ಚಿ ಬಜ್ಜಿ ತಿಂದಂಗೆ ಜಿರಳೆ ಫ್ರೈ ಸವಿದ ಯುವತಿ…
ವೈರಲ್​​​ ವಿಡಿಯೋ
Follow us on

ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಆದ್ರೆ ಕೆಲವು ದೇಶಗಳಲ್ಲಿ ತಿನ್ನುವ ಆಹಾರಗಳನ್ನು ನೋಡಿದ್ರೆ ವಾಕರಿಕೆ ಬರುತ್ತದೆ. ಇನ್ನೂ ಈ ಚಿತ್ರ ವಿಚಿತ್ರ ಅಡುಗೆ, ಆಹಾರ ಎಂದ ಕೂಡಲೇ ಚೀನಾ, ಕೊರಿಯಾ ದೇಶಗಳು ನೆನಪಾಗುತ್ತವೆ. ಅವರು ಜಿರಳೆಯಿಂದ ಹಿಡಿದು ಹಾವು, ಚೇಳುಗಳವರೆಗೆ ಎಲ್ಲವನ್ನೂ ತಿನ್ನುತ್ತಾರೆ. ಹೌದು ನಮಗೆಲ್ಲರಿಗೂ ಸ್ಟ್ರೀಟ್ ಫುಡ್ ಎಂದಾಕ್ಷಣ ಸಪೋಸಾ, ಪಾನೀಪುರಿ, ಬಜ್ಜಿ, ಬೋಂಡಾ, ವಡಪಾವ್ ನೆನಪಾಗುತ್ತದೆ. ಆದರೆ ಇವರುಗಳು ಜಿರಳೆ ಫ್ರೈ, ಚೇಳು ಫ್ರೈಗಳನ್ನೇ ಫ್ರೆಂಚ್ ಫ್ರೈಸ್ ತಿಂದಂಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದ್ದು, ಕಾಂಬೋಂಡಿಯಾದಲ್ಲಿ ಸ್ಟ್ರೀಟ್ ವ್ಯಾಪಾರ ಮಾಡುವಂತಹ ಸುಂದರ ಯುವತಿಯೊಬ್ಬಳು ಬಾಯಿ ಚಪ್ಪರಿಸಿಕೊಂಡು ಗರಿಗರಿಯಾದ ಜಿರಳೆ ಫ್ರೈ ಸವಿದಿದ್ದಾಳೆ. ಈ ವಿಡಿಯೋ ನೋಡಿದ ಅನೇಕರು ಅಯ್ಯೋ ದೇವ್ರೇ ಇದನ್ನು ನೋಡಿದ್ರೆ ವಾಕರಿಗೆ ಬರುತ್ತೆ ಹೇಳಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬೀದಿ ಬದಿಯಲ್ಲಿ ಕುಳಿತು ಯುವತಿಯೊಬ್ಬಳು ಜಿರಳೆ ಫ್ರೈ ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು @streetfoodjourn3y ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಕಾಂಬೋಡಿಯಾದ ಅತ್ಯಂತ ಸುಂದರ ಸ್ಟ್ರೀಟ್ ಫುಡ್ ವ್ಯಾಪಾರಿ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಸುಂದರ ಯುವತಿಯೊಬ್ಬಳು ಕಾಂಬೋಡಿಯಾದ ಬೀದಿ ಬದಿಯಲ್ಲಿ ಕುಳಿತುಕೊಂಡು ಜಿರಳೆ ಫ್ರೈ ಮಾರಾಟ ಮಾಡುತ್ತಿರುವುದು ಮಾತ್ರವಲ್ಲದೆ, ಆಕೆಯೂ ಬಜ್ಜಿ, ಫ್ರೆಂಚ್ ಫ್ರೈಸ್ ತಿಂದಂತೆ ಜಿರಳೆ ಫ್ರೈಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಐಸ್ ಕ್ರೀಮ್ ಜೊತೆಗೆ ಸ್ಪೂನ್ ಮತ್ತು ಕಪ್​​ನ್ನು ತಿನ್ಬೋದಂತೆ; ಇದು ಮಂಗಳೂರಿನ ಬಿಸ್ಕೆಟ್ ಕಪ್ ಸ್ಟೋರಿ 

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 44 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕದಾರರು ʼಛೀ ಛೀ.. ಏನಿದು ಅಸಹ್ಯʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಸಸ್ಯಹಾರಿಯಾಗಿ ಜನಿಸಿರುವುದು ನನ್ನ ಪುಣ್ಯʼ ಎಂಬ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಚೀನಾದಲ್ಲಿ ಜನರು ಪ್ರತಿನಿತ್ಯ ಇದನ್ನೆಲ್ಲಾ ತಿನ್ನುತ್ತಾರೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಯ್ಯೋ ದೇವ್ರೆ ಇದನ್ನು ನೋಡಿ ವಾಕರಿಕೆ ಬಂದಂತಾಯಿತು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ