ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ

Dog : ಗೆಳೆಯನೊಂದಿಗೆ ತಿರುಗಾಟಕ್ಕೆ ಹೋಗಿದ್ದಾಳೆ ರೋಸಿ. ಗೆಳೆಯ ತನ್ನ ಮನೆಗೆ ಹೋಗಿದ್ದಾನೆ. ರೋಸಿಗೆ ವಾಪಸ್​ ಮನೆಗೆ ಬರುವುದು ಗೊತ್ತಾಗಿಲ್ಲ. ಆದರೂ ಧೃತಿಗೆಡದೆ ನೇರ ಪೊಲೀಸ್​ ಠಾಣೆಗೆ ಹೋಗಿದ್ದಾಳೆ. ಮುಂದೆ?

ಎಂಥಾ ಶಾಣ್ಯಾ ನಾಯಿ! ತಪ್ಪಿಸಿಕೊಂಡಿದ್ದ ನಾಯಿ ಬಂದಿದ್ದು ಪೊಲೀಸ್​ ಠಾಣೆಗೆ
Lost dog in UK enters police station
Updated By: ಶ್ರೀದೇವಿ ಕಳಸದ

Updated on: Nov 17, 2022 | 6:09 PM

Viral Video : ಲಂಡನ್​ನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಎಲ್ಲೋ ಕಳೆದುಹೋಗಿದ್ದ ನಾಯಿ ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಅಚ್ಚರಿ ಮೂಡಿಸಿದೆ. ಆನ್​ಲೈನ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿ ನೆಟ್ಟಿಗರೆಲ್ಲ ಎಂಥ ಶಾಣ್ಯಾ ನಾಯಿ ಇದು ಎನ್ನುತ್ತಿದ್ದಾರೆ. ಈ ನಾಯಿಯ ಹೆಸರು ರೋಸಿ. ಇನ್ನೊಂದು ನಾಯಿಯೊಂದಿಗೆ ತಿರುಗಾಡಿಕೊಂಡು ಹೋಗುವಾಗ ಈ ನಾಯಿ ತಪ್ಪಿಸಿಕೊಂಡಿದೆ. ಆಮೇಲೆ ತನ್ನಷ್ಟಕ್ಕೆ ತಾನೇ ಪೊಲೀಸ್​ ಠಾಣೆಯೊಳಗೆ ಬಂದು ಕುಳಿತುಕೊಂಡಿದೆ. ಹೀಗೆ ಬಂದು ಕುಳಿತ ನಾಯಿಯ ಕೊರಳಿನಲ್ಲಿದ್ದ ಕಾಲರ್​ನಿಂದ ಪೋಷಕರನ್ನು ಪತ್ತೆ ಹಚ್ಚಿದ್ದಾರೆ ಪೊಲೀಸರು.

 

ಈ ವಿಡಿಯೋ ಅನ್ನು 60,000 ಜನರು ನೋಡಿದ್ದಾರೆ. ಅನೇಕರು ರೋಸಿಯನ್ನು ಹೊಗಳಿದ್ದಾರೆ. ಇಷ್ಟೊಂದು ಬುದ್ಧಿ ನಿನಗೆ ಹೇಗೆ ಬಂತು ಹುಡುಗಿ ಎಂದಿದ್ದಾರೆ ಅನೇಕರು. ಎಂಥ ಜಾಣ ನಾಯಿ ನೀನು, ಜಗತ್ತಿನಲ್ಲಿರುವ ನಾಯಿಗಳಿಗೆ ಇಂಥ ಬುದ್ಧಿ ಬರಲಿ, ಆಗ ನಾಯಿಗಳನ್ನು ಕಳೆದುಕೊಂಡು ಬೇಸರಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ಆದರೂ ಬಹಳೇ ಅಚ್ಚರಿ ಇದು ಎಲ್ಲಾ ಬಿಟ್ಟು ಪೊಲೀಸ್​ ಠಾಣೆಗೆ ಬಂದು ಕುಳಿತಿದೆ ಎಂದರೆ!

ಅಲ್ಲವೆ ಅಚ್ಚರಿಯೇ ತಾನೆ ಇದು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ