Shocking News: ನಾಯಿಗೆ ನೇಣು ಹಾಕಿ ಸಾಯಿಸಿದ ದುಷ್ಟರ ವಿಡಿಯೋ ವೈರಲ್

ಈ ವಿಡಿಯೋದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪುರುಷರು ನಾಯಿಯ ಕುತ್ತಿಗೆಯನ್ನು ಸರಪಳಿಯಿಂದ ಕಟ್ಟಿ ಗೋಡೆಗೆ ನೇತು ಹಾಕುತ್ತಿರುವುದನ್ನು ಕಾಣಬಹುದು. ನಂತರ ಅವರಲ್ಲಿ ಒಬ್ಬರು ಆ ಸರಪಳಿಯನ್ನು ಕೆಳಗೆ ಎಳೆಯುತ್ತಾರೆ.

Shocking News: ನಾಯಿಗೆ ನೇಣು ಹಾಕಿ ಸಾಯಿಸಿದ ದುಷ್ಟರ ವಿಡಿಯೋ ವೈರಲ್
ನಾಯಿಗೆ ನೇಣು ಹಾಕುತ್ತಿರುವ ದೃಶ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 14, 2022 | 1:47 PM

ಘಜಿಯಾಬಾದ್: ನಾಯಿಯೊಂದಕ್ಕೆ ಹಿಂಸೆ ಕೊಟ್ಟು, ಮೂವರು ವ್ಯಕ್ತಿಗಳು ಸೇರಿ ನೇಣು ಹಾಕಿ ಕೊಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆ ಮೂವರು ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದಾರೆ. ಈ ಹೃದಯ ವಿದ್ರಾವಕ ವಿಡಿಯೋವನ್ನು ಘಜಿಯಾಬಾದ್‌ನ (Ghaziabad)  ಲೋನಿ ಬಳಿಯ ಎಲೈಚಿಪುರ ಪ್ರದೇಶದ ಟ್ರೋನಿಕಾ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ.

ಈ ವಿಡಿಯೋದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪುರುಷರು ನಾಯಿಯ ಕುತ್ತಿಗೆಯನ್ನು ಸರಪಳಿಯಿಂದ ಕಟ್ಟಿ ಗೋಡೆಗೆ ನೇತು ಹಾಕುತ್ತಿರುವುದನ್ನು ಕಾಣಬಹುದು. ನಂತರ ಅವರಲ್ಲಿ ಒಬ್ಬರು ಆ ಸರಪಳಿಯನ್ನು ಕೆಳಗೆ ಎಳೆಯುತ್ತಾರೆ. ಆಗ ನಾಯಿ ನೋವಿನಿಂದ ಹಾಗೂ ಉಸಿರಾಡಲಾಗದೆ ಜೋರಾಗಿ ಕಿರುಚಾಡುತ್ತದೆ. ಅದರಿಂದ ಇನ್ನಷ್ಟು ಖುಷಿಯಾದ ಆ ಮೂವರು ನಾಯಿಗೆ ಚಿತ್ರಹಿಂಸೆ ನೀಡಿ, ಅದರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಆ ನಾಯಿಯನ್ನು ಕೊಲ್ಲುತ್ತಾರೆ.

ಇದನ್ನೂ ಓದಿ: Viral Video: ಉಕ್ರೇನ್ ಸೈನ್ಯದಿಂದ ಸುರಕ್ಷಿತವಾಗಿ ಬಂದ ಮೊಮ್ಮಗನನ್ನು ಕಂಡು ಖುಷಿಯಿಂದ ಅತ್ತು, ತಬ್ಬಿದ ಅಜ್ಜಿ; ವಿಡಿಯೋ ಇಲ್ಲಿದೆ

ಈ ವೀಡಿಯೋ 3 ತಿಂಗಳು ಹಳೆಯದಾಗಿದ್ದು, ಈ ವಿಡಿಯೋದಲ್ಲಿರುವವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಹೆಚ್ಚು ಸಾಮಾನ್ಯವಾಗುತ್ತಿದೆ. 2 ದಿನಗಳ ಹಿಂದೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಶುಕ್ರವಾರ ಒಬ್ಬ ವ್ಯಕ್ತಿ ತನ್ನ ನೆರೆಯ ಮನೆಯ ಹೆಣ್ಣು ನಾಯಿ ಬೊಗಳಿತು ಎಂಬ ಕಾರಣಕ್ಕೆ ಅದನ್ನು ಕೊಂದು ಹಾಕಿದ್ದ. ಬನ್ಸೋಡೆಯ ಬಿಯರ್ ಬಾರ್‌ನಲ್ಲಿನ ಸಿಬ್ಬಂದಿಯೊಬ್ಬರು ಆರೋಪಿ ಆ ನಾಯಿಗೆ ಗುಂಡು ಹಾರಿಸುತ್ತಿರುವುದನ್ನು ಕಂಡು ನಾಯಿಯ ಮಾಲೀಕರಿಗೆ ಈ ವಿಷಯ ತಿಳಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ