Viral Video: ಉಕ್ರೇನ್ ಸೈನ್ಯದಿಂದ ಸುರಕ್ಷಿತವಾಗಿ ಬಂದ ಮೊಮ್ಮಗನನ್ನು ಕಂಡು ಖುಷಿಯಿಂದ ಅತ್ತು, ತಬ್ಬಿದ ಅಜ್ಜಿ; ವಿಡಿಯೋ ಇಲ್ಲಿದೆ

ಯುದ್ಧ ಮುಗಿಸಿ ಮನೆಗೆ ಸುರಕ್ಷಿತವಾಗಿ ಬಂದ ಉಕ್ರೇನ್ ಸೈನಿಕನಾಗಿರುವ ತನ್ನ ಮೊಮ್ಮಗನನ್ನು ನೋಡಿ ಅಜ್ಜಿಯೊಬ್ಬರು ಸಂತೋಷದಿಂದ ಅಳುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Viral Video: ಉಕ್ರೇನ್ ಸೈನ್ಯದಿಂದ ಸುರಕ್ಷಿತವಾಗಿ ಬಂದ ಮೊಮ್ಮಗನನ್ನು ಕಂಡು ಖುಷಿಯಿಂದ ಅತ್ತು, ತಬ್ಬಿದ ಅಜ್ಜಿ; ವಿಡಿಯೋ ಇಲ್ಲಿದೆ
ಉಕ್ರೇನ್ ಸೈನ್ಯದಿಂದ ಸುರಕ್ಷಿತವಾಗಿ ಬಂದ ಮೊಮ್ಮಗನನ್ನು ಕಂಡು ಖುಷಿಯಿಂದ ಅತ್ತು, ತಬ್ಬಿದ ಅಜ್ಜಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 14, 2022 | 9:00 AM

ರಷ್ಯಾದ ಸೇನಾಪಡೆ (Russian Army) ಉಕ್ರೇನ್​ನ ಖೆರ್ಸನ್ ನಗರವನ್ನು ಬಿಟ್ಟುಹೋಗಿವೆ. ಈ ಹಿನ್ನೆಲೆಯಲ್ಲಿ ಉಕ್ರೇನ್​ನಲ್ಲಿ ಸಂಭ್ರಮ ಮನೆಮಾಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskiy) ಖೆರ್ಸನ್ (Kherson) ಜನರು ಇನ್ನುಮುಂದೆ ನಮ್ಮವರು ಎಂದು ಘೋಷಿಸಿದ್ದಾರೆ. ಯುದ್ಧ ಮುಗಿಸಿ ಮನೆಗೆ ಸುರಕ್ಷಿತವಾಗಿ ಬಂದ ಉಕ್ರೇನ್ ಸೈನಿಕನಾಗಿರುವ ತನ್ನ ಮೊಮ್ಮಗನನ್ನು ನೋಡಿ ಅಜ್ಜಿಯೊಬ್ಬರು ಸಂತೋಷದಿಂದ ಅಳುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಶನಿವಾರ ಯೂಟ್ಯೂಬ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೃದ್ಧೆಯೊಬ್ಬರು ಮಹಿಳೆಯೊಬ್ಬರು ಮನೆಯಿಂದ ಹೊರಬಂದು ಗೇಟ್ ಬಳಿ ಮಂಡಿಯೂರಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಗ ತನ್ನ ತೋಳಿನ ಮೇಲೆ ಹಳದಿ ರಿಬ್ಬನ್‌ ಕಟ್ಟಿಕೊಂಡು, ಉಕ್ರೇನ್​ನ ಮಿಲಿಟರಿ ಯೂನಿಫಾರಂ ಧರಿಸಿದ ವ್ಯಕ್ತಿ ತನ್ನನ್ನು ಸ್ವಾಗತಿಸಲು ಅಳುತ್ತಾ, ನೆಲದ ಮೇಲೆ ಕುಳಿತಿದ್ದ ಅಜ್ಜಿಯನ್ನು ತಬ್ಬಿಕೊಳ್ಳಲು ತನ್ನ ಕೈಯಲ್ಲಿದ್ದ ಮೆಷಿನ್ ಗನ್ ಅನ್ನು ನೆಲದ ಮೇಲೆ ಹಾಕಿ ರಸ್ತೆಯುದ್ದಕ್ಕೂ ಓಡಿ ಬರುವ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ.

ಇದನ್ನೂ ಓದಿ: Russia Ukraine War: ಉಕ್ರೇನ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ರಷ್ಯಾ ಯೋಧರ ಸಾವು; ಅಮೆರಿಕ ಸೇನಾಧಿಕಾರಿ ಅಂದಾಜು

ರಷ್ಯಾದ ಪಡೆಗಳು ಶುಕ್ರವಾರ ಖೇರ್ಸನ್ ನಗರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ ನಂತರ ಖೆರ್ಸನ್‌ನಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

ಶುಕ್ರವಾರ ರಷ್ಯಾದ ಸೇನಾ ಪಡೆಗಳು ಉಕ್ರೇನ್‌ನ ಖೆರ್ಸನ್‌ ನಗರವನ್ನು ಕೈ ಬಿಟ್ಟು ಹಿಂದೆ ಸರಿದಿವೆ. ಖೆರ್ಸನ್‌ ನಗರವನ್ನು ಬಿಟ್ಟು ರಷ್ಯಾ ಹಿಂದೆ ಸರಿದುಕೊಳ್ಳುತ್ತಿದ್ದಂತೆ ಖೆರ್ಸನ್‌ ಪ್ರಜೆಗಳು ಸಂಭ್ರಮ ಪಟ್ಟು ಉಕ್ರೇನ್‌ ಸೈನ್ಯಕ್ಕೆ ಸಂಭ್ರಮದ ಶುಭಾಶಯ ಹಂಚಿಕೊಂಡು ಉಕ್ರೇನ್‌ ದೇಶದ ಧ್ವಜ ಹಾರಿಸಿ ಸಂಭ್ರಮ ಆಚರಿಸಿದ್ದಾರೆ. ರಸ್ತೆ, ಸರ್ಕಲ್‌, ಪ್ರತಿಮೆಗಳ ಬಳಿ ಉಕ್ರೇನ್‌ ಪ್ರಜೆಗಳು ಧ್ವಜ ಹಾರಿಸಿದ್ದಾರೆ. ರಷ್ಯಾ ಸೈನ್ಯ ಸೆಪ್ಟೆಂಬರ್ ಅಂತ್ಯದಲ್ಲಿ ಅಧಿಪತ್ಯ ಸಾಧಿಸಿದ ಉಕ್ರೇನ್​ನ 4 ಪ್ರದೇಶಗಳಲ್ಲಿ ಖೆರ್ಸನ್ ಪ್ರಾಂತ್ಯ ಕೂಡ ಒಂದಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್