Russia Ukraine War: ಉಕ್ರೇನ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ರಷ್ಯಾ ಯೋಧರ ಸಾವು; ಅಮೆರಿಕ ಸೇನಾಧಿಕಾರಿ ಅಂದಾಜು

ಈ ಲೆಕ್ಕಾಚಾರಂತೆ ಈ ಸಂಘರ್ಷದಿಂದ ಮೃತಪಟ್ಟವರ ಒಟ್ಟು ಸಂಖ್ಯೆಯು ಸುಮಾರು 2.40 ಲಕ್ಷವಾಗುತ್ತದೆ. ಇದು ಈವರೆಗೆ ಬಿಡುಗಡೆಯಾಗಿರುವ ಜೀವಹಾನಿ ಅಂಕಿಅಂಶಗಳಲ್ಲಿಯೇ ಅತ್ಯಂತ ಹೆಚ್ಚು.

Russia Ukraine War: ಉಕ್ರೇನ್​ನಲ್ಲಿ 1 ಲಕ್ಷಕ್ಕೂ ಹೆಚ್ಚು ರಷ್ಯಾ ಯೋಧರ ಸಾವು; ಅಮೆರಿಕ ಸೇನಾಧಿಕಾರಿ ಅಂದಾಜು
ಸಾಂದರ್ಭಿಕ ಚಿತ್ರImage Credit source: AP
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 10, 2022 | 11:39 AM

ವಾಷಿಂಗ್​ಟನ್: ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾ ಸೇನೆಯಲ್ಲಿ (Russia Ukraine War) ಜೀವಹಾನಿ ಆಘಾತಕಾರಿ ಮಟ್ಟಕ್ಕೆ ತಲುಪಿದೆ ಎಂದು ಅಮೆರಿಕ ಸೇನೆಯ (American Military) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಫೆಬ್ರುವರಿಯಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಈವರೆಗೆ ರಷ್ಯಾ ಸೇನೆಯ ಸುಮಾರು 1 ಲಕ್ಷ ಸೈನಿಕರು ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಉಕ್ರೇನ್ ಸೇನೆಯು ಹೆಚ್ಚೂ ಕಡಿಮೆ ಇಷ್ಟೇ ಪ್ರಮಾಣದ ಜೀವಹಾನಿ ಅನುಭವಿಸಿರಬಹುದು ಎಂದು ವಿಶ್ಲೇಷಿಸಲಾಗಿದೆ.

‘ಸುಮಾರು 1 ಲಕ್ಷ ರಷ್ಯಾ ಯೋಧರು ಸತ್ತಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಉಕ್ರೇನ್ ಪಾಳಯದಲ್ಲಿಯೇ ಇಷ್ಟೇ ನಷ್ಟಗಳಾಗಿವೆ. ಲೆಕ್ಕವಿಲ್ಲದಷ್ಟು ನಾಗರಿಕರು ಕಷ್ಟ-ನಷ್ಟ ಅನುಭವಿಸಿದ್ದಾರೆ ಎಂದು ಅಮೆರಿಕ ಸೇನೆಯ ಜನರಲ್ ಮಾರ್ಕ್ ಮಿಲೆ ನ್ಯೂಯಾರ್ಕ್​ನ ಎಕನಾಮಿಕ್ ಕ್ಲಬ್​ ಸಂವಾದದಲ್ಲಿ ಹೇಳಿದ್ದಾರೆ. ಕಳೆದ 8 ತಿಂಗಳುಗಳಿಂದ ರಷ್ಯಾ-ಉಕ್ರೇನ್ ಸಂಘರ್ಷ ನಡೆಯುತ್ತಿದ್ದು, ಈವರೆಗೆ ಸುಮಾರು 40,000 ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು. ಈ ಲೆಕ್ಕಾಚಾರಂತೆ ಈ ಸಂಘರ್ಷದಿಂದ ಮೃತಪಟ್ಟವರ ಒಟ್ಟು ಸಂಖ್ಯೆಯು ಸುಮಾರು 2.40 ಲಕ್ಷವಾಗುತ್ತದೆ. ಇದು ಈವರೆಗೆ ಬಿಡುಗಡೆಯಾಗಿರುವ ಜೀವಹಾನಿ ಅಂಕಿಅಂಶಗಳಲ್ಲಿಯೇ ಅತ್ಯಂತ ಹೆಚ್ಚು.

ಇಷ್ಟು ಜೀವಹಾನಿಯ ನಂತರವೂ ಉಕ್ರೇನ್ ದಾಳಿಯಿಂದ ಏನು ಸಾಧಿಸಬೇಕಿತ್ತೋ ಅದನ್ನು ಸಾಧಿಸಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಇನ್ನೂ ಎಷ್ಟು ದಿನ ಈ ಆಕ್ರಮಣವನ್ನು ಮುಂದುವರಿಸಲು ಸಾಧ್ಯ ಎನ್ನುವ ಬಗ್ಗೆ ಗೊಂದಲಗಳಿವೆ ಎಂದು ಅಮೆರಿಕ ಸೇನಾಧಿಕಾರಿ ಹೇಳಿದ್ದಾರೆ. ನಿನ್ನೆಯಷ್ಟೇ (ನ 9) ರಷ್ಯಾ ಸೇನೆಯು ಉಕ್ರೇನ್​ನ ಪ್ರಮುಖ ನಗರ ಖೆರ್​ಸೋನ್​ನಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಿಸಿತ್ತು. ಇದು ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಆದ ದೊಡ್ಡ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಉಕ್ರೇನ್​ ಪಡೆಗಳು ಖಾರ್ಕಿವ್ ಉತ್ತರ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿದ ಬಳಿಕ ನಡೆದ ಅತಿಪ್ರಮುಖ ಸೇನಾ ಬೆಳವಣಿಗೆ ಇದು ಎಂದು ವಿಶ್ಲೇಷಿಸಲಾಗಿತ್ತು.

ಕಳೆದ ಸೆಪ್ಟೆಂಬರ್​ನಲ್ಲಿ ರಷ್ಯಾ ಪಡೆಗಳು ಖೆರ್​ಸೊನ್ ನಗರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದವು. ಈ ಪ್ರದೇಶದಿಂದ ರಷ್ಯಾ ಸಂಪೂರ್ಣವಾಗಿ ಸೇನೆ ಹಿಂಪಡೆದರೆ ಸಾವಿರಾರು ಕಿಲೋಮೀಟರ್​ ವಿಸ್ತೀರ್ಣದ ಪ್ರದೇಶದಿಂದ ರಷ್ಯಾ ಹಿಂದೆ ಸರಿದಂತೆ ಅಗುತ್ತದೆ. ಇದು ಉಕ್ರೇನ್ ಯುದ್ಧದಲ್ಲಿ ನಡೆದ ಪ್ರಮುಖ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?