Trending : ಇತ್ತೀಚೆಗಷ್ಟೇ ಆನ್ಲೈನ್ನಲ್ಲಿ ಲ್ಯಾಪ್ಟಾಪ್ ಆರ್ಡರ್ ಮಾಡಿದ್ದವರಿಗೆ ಘಡಿ ಸೋಪ್, ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಒಂದು ಕೇಜಿ ಆಲೂಗಡ್ಡೆ ತಲುಪಿದ ವಿಷಯವನ್ನು ಓದಿದ್ದೀರಿ, ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ವಿಷಯ ಮಾತ್ರ ಸ್ವಲ್ಪ ಭಿನ್ನವಾಗಿದೆ. ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದು ಐಫೋನ್13, ಆದರೆ ಅವರಿಗೆ ಫ್ಲಿಪ್ಕಾರ್ಟ್ ಮೂಲಕ ತಲುಪಿದ್ದು ಐಫೋನ್14! ಯಾರಿಗೆ ತಾನೆ ಅಚ್ಚರಿಯಾಗದು ಇಂಥ ವಿಷಯ. ರಸೀದಿಯ ಸ್ಕ್ರೀನ್ ಶಾಟ್ ಈಗ ಅಂತರ್ಜಾಲದ ಪೂರ್ತಿ ಹರಿದಾಡುತ್ತಿದೆ. ಭಾರತೀಯ ಹಬ್ಬಗಳ ನೆಪದಲ್ಲಿ ಎಲ್ಲ ಆನ್ಲೈನ್ ಮಳಿಗೆಗಳು ರಿಯಾಯ್ತಿ ದರದಲ್ಲಿ ಮಾರಾಟಮೇಳ ನಡೆಸಿರುವುದರ ಫಲ ಮತ್ತು ಮಾಯೆ ಇದು!
One of my follower ordered iPhone 13 from Flipkart but he recieved iPhone 14 instead of 13 ? pic.twitter.com/FDxi0H0szJ
ಇದನ್ನೂ ಓದಿ— Ashwin Hegde (@DigitalSphereT) October 4, 2022
ಅದೃಷ್ಟ ಎನ್ನುವುದು ಇದಕ್ಕೇ. ಬಯಸಿದವರಿಗೆ ಅದು ಸಿಗುವುದಿಲ್ಲ. ಅನಿರೀಕ್ಷಿತಾಗಿ ಅದು ಇನ್ನ್ಯಾರನ್ನೋ ದೊರಕಿರುತ್ತದೆ. ಅಶ್ವಿನ್ ಹೆಗಡೆ ಎಂಬುವವರು ಆ ದಿನ ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡರು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅನೇಕರು ಇದನ್ನು ಮೊದಮೊದಲಿಗೆ ನಂಬಲಿಲ್ಲ. ಒಬ್ಬ ವ್ಯಕ್ತಿ ಆಪಲ್ ಸಂಸ್ಥೆಗೆ ತಮಾಷೆ ಮಾಡಿದ್ದಾರೆ- ‘ಐಫೋನ್13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ’.
ಇನ್ನೊಬ್ಬರು, ‘ಐಫೋನ್ 13 ಬದಲಿಗೆ ಐಫೋನ್14 ಪಡೆದ ವ್ಯಕ್ತಿ ಅದೃಷ್ಟವಂತ. ನಾನು ಇಂಥ ಅದೃಷ್ಟಶಾಲಿಯಾಗಲು ಬಯಸುತ್ತೇನೆ’ ಎಂದಿದ್ದಾರೆ. ಇನ್ನೂ ಕೆಲವರು, ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದಿದ್ದಾರೆ. ಮಗದೊಬ್ಬರು, ‘ಹಿಂದಿರುಗಿಸುವುದು ಒಳಿತು, ಯಾವುದೇ ರೀತಿಯ ವಾರೆಂಟಿಯನ್ನು ಕ್ಲೈಮ್ ಮಾಡಿಕೊಳ್ಳುವಾಗ ಸಮಸ್ಯೆ ಎದುರಾಗಬಹುದು’ ಎಂದಿದ್ದಾರೆ.
ಈ ಅದೃಷ್ಟ ನಿಮ್ಮದಾಗಿದ್ದರೆ ನೀವೇನು ಮಾಡುತ್ತಿದ್ದಿರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ