Viral Video: ಸ್ಕೂಟಿ ಮೇಲೆಯೇ ಪ್ರೇಮಿಗಳ ರೊಮ್ಯಾನ್ಸ್, ಈ ಜೋಡಿ ಕುಳಿತುಕೊಂಡ ಭಂಗಿ ಅಬ್ಬಬ್ಬಾ…!

ಪ್ರೇಮಿಗಳಿಬ್ಬರು ಸಾರ್ವಜನಿಕವಾಗಿ ರಸ್ತೆಯಲ್ಲಿ ಮೇಲೆ ಬೈಕ್ ಚಲಾಯಿಸುತ್ತಾ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Viral Video: ಸ್ಕೂಟಿ ಮೇಲೆಯೇ ಪ್ರೇಮಿಗಳ ರೊಮ್ಯಾನ್ಸ್, ಈ ಜೋಡಿ ಕುಳಿತುಕೊಂಡ ಭಂಗಿ ಅಬ್ಬಬ್ಬಾ...!
ಸ್ಕೂಟಿ ಮೇಲೆಯೇ ಪ್ರೇಮಿಗಳ ರೊಮ್ಯಾನ್ಸ್
Edited By:

Updated on: Jan 18, 2023 | 11:13 PM

ಲಖನೌ: ಈ ಪ್ರೀತಿ-ಪ್ರೇಮದ(Love) ಹೆಸರಲ್ಲಿ ಕೆಲವರು ಎಲ್ಲಿ ಏನು ಮಾಡುತ್ತಿದ್ದೇವೆ ಎನ್ನವುದು ಪರಿಜ್ಞಾನವೇ ಇರುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಲವರ್ಸ್ ಸಾರ್ವಜನಿಕ ಸ್ಥಳಗಳಲ್ಲಿ ಅದು ಚಲಿಸುವ ಸ್ಕೂಟಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಹೌದು…ಪ್ರೇಮಿಗಳು ಚಲಿಸುತ್ತಿರುವ ಬೈಕ್ (Bike) ಮೇಲೆಯೇ ರೊಮ್ಯಾನ್ಸ್ (Romance) ಮಾಡಿದ್ದಾರೆ.  ಪ್ರೇಮಿಗಳ ಈ ರೊಮ್ಯಾನ್ಸ್ ವಿಡಿಯೋ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಅದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರೇಮಿಗಳ ಅಸಭ್ಯ ವರ್ತನೆ ನೋಡಿ ನೆಟ್ಟಿಗರು ಛೀ, ಥೂ ಅಂತ ಉಗೀತಾ ಇದ್ದಾರೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದಲ್ಲಿ.

ಇದನ್ನೂ ಓದಿ: ಹೆಂಡತಿಯನ್ನು ಕೊಲ್ಲಲು ಆಕೆಯ ಮನೆಗೆ ಟ್ರಕ್​ ನುಗ್ಗಿಸಿದ ಗಂಡ; ವೈರಲ್ ಆದ ವಿಡಿಯೋ

ಲಖನೌನ ಹಜರತ್‌ಗಂಜ್ ವ್ಯಾಪ್ತಿಯ ಜನಸಂದಣಿ ರಸ್ತೆಯಲ್ಲಿ ಸ್ಕೂಟಿ ಮೇಲೆ ಯುವಕ-ಯುವತಿ ತೆರಳುತ್ತಿದ್ದು, ಇದೇ ವೇಳೆ ಬೈಕ್ ಚಲಾಯಿಸುತ್ತಿದ್ದ ಯುವಕ, ಯುವತಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಒಬ್ಬರಿಗೊಬ್ಬರು ತಬ್ಬಿಕೊಂಡು ಮುತ್ತಿಕ್ಕುತ್ತಾ ಜಾಲಿ ರೈಡ್ ಹೊರಟ್ಟಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಲಖನೌ ಪೊಲೀಸರು ಈ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ತೀವ್ರ ಹುಡುಕಾಟ ನಡೆಸಿದ್ದಾರೆ. ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದ್ದಾರೆ. ಲಖನೌ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ ಅಪರ್ಣಾ ರಜತ್ ಕೌಶಿಕ್, ಈ ವಿಡಿಯೋ ಹಜರತ್‌ಗಂಜ್ ಪ್ರದೇಶದಲ್ಲಿದ್ದು ಎಂದು ಖಚಿತಪಡಿಸಿದ್ದಾರೆ. ಪ್ರೇಮಿಗಳ ಪತ್ತೆಗೆ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ ಅವರನ್ನು ಹಿಡಿಯಲು ಪೊಲೀಸರು ಹತ್ತಿರದ ಕ್ಯಾಮೆರಾಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆಯಡಿ ಮತ್ತು ಅಶ್ಲೀಲತೆಯನ್ನು ಹರಡಿದ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Published On - 11:11 pm, Wed, 18 January 23