Viral Video: ಮಾಧುರಿ ದೀಕ್ಷಿತ್​ ಜತೆ ಹೆಜ್ಜೆ ಹಾಕಿದ ಧನುಶ್ರೀ ವರ್ಮ; ಡ್ಯಾನ್ಸ್​ ನೋಡಿ ವಾವ್​ ಎಂದ ನೆಟ್ಟಿಗರು

ಡಿಜಿಟಲ್​ ಕ್ರಿಯೇಟರ್​ ಧನುಶ್ರೀ ವರ್ಮ ಜತೆ ಸಖತ್​ ಆಗಿ ಮಾಧುರಿ ದೀಕ್ಷಿತ್​ ಡ್ಯಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Viral Video: ಮಾಧುರಿ ದೀಕ್ಷಿತ್​ ಜತೆ ಹೆಜ್ಜೆ ಹಾಕಿದ ಧನುಶ್ರೀ ವರ್ಮ; ಡ್ಯಾನ್ಸ್​ ನೋಡಿ ವಾವ್​ ಎಂದ ನೆಟ್ಟಿಗರು
Edited By:

Updated on: Mar 18, 2022 | 3:08 PM

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕೆಲವು ವಿಡಿಯೋಗಳು ನೆಟ್ಟಿಗರನ್ನು ಸೆಳೆಯುತ್ತಲೇ ಇರುತ್ತವೆ. ಇದೀಗ ಧನುಶ್ರೀ ವರ್ಮ (Dhanashree Verma) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಡಿಜಿಟಲ್​ ಕ್ರಿಯೇಟರ್​ ಆಗಿರುವ ಧನುಶ್ರೀ ವರ್ಮ ಅವರ ಡ್ಯಾನ್ಸ್​ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. ಅದಕ್ಕೆ ಒಂದು ವಿಶೇಷತೆ ಕೂಡ ಇದೆ. ಅದೇನು ಅಂತೀರಾ ಇಲ್ಲಿದೆ ನೋಡಿ ಪೂರ್ತಿ ಸ್ಟೋರಿ. ಧನುಶ್ರೀ ವರ್ಮ ಡ್ಯಾನ್ಸ್ (Dance)​ ಮಾಡಿದ್ದು ಬಾಲಿವುಡ್​ ನ ಎವರ್​ಗ್ರೀನ್​ ಬ್ಯೂಟಿ ಮಾಧುರಿ ದೀಕ್ಷಿತ್ ( Madhuri Dixit)​ ಜೊತೆ. ಹೀಗಾಗಿ ವಿಡಿಯೋ ಮತ್ತಷ್ಟು ತೂಕ ಪಡೆದುಕೊಂಡಿದೆ.

ವಿಡಿಯೋದಲ್ಲಿಆರ್‌ಜೆ ಅಭಿನವ್, ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮತ್ತು ಲೇಖಕಿ ಐಶ್ವರ್ಯಾ ಮೋಹನ್‌ರಾಜ್ ಮತ್ತು ಕಂಟೆಂಟ್ ಕ್ರಿಯೇಟರ್ ಮಿಥಿಲೇಶ್ ಪಾಟಂಕರ್ ಜೊತೆಗೆ ಬ್ರದರ್‌ಸ್ಟ್ವಿನ್ಜ್ ಅವರ ಹಾಡಿಗೆ ಧನಶ್ರೀ ವರ್ಮಾ ಮತ್ತು ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ್ದಾರೆ. ಇದರ ಕಿರು ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಧನುಶ್ರೀ ವರ್ಮ ವಿಡಿಯೋವನ್ನು ಹಂಚಿಕೊಂಡು “ಸೋಮವಾರ ಮಾತ್ರವಲ್ಲ, ಇದು ಜೀವಮಾನದ ಪ್ರೇರಣೆಯಾಗಿದೆ. ನಮ್ಮ ನೆಚ್ಚಿನ @madhuridixitnene ಜೊತೆ ಡ್ಯಾನ್ಸ್ ಮಾಡಿದ್ದೇನೆ,” ಎಂದು ಬರೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಇಂಡಿಯಾಗಾಗಿ “ಫನ್ ಶೂಟ್” ಸಮಯದಲ್ಲಿ ಅವರು ವೀಡಿಯೊವನ್ನು ಸೆರೆಹಿಡಿದಿದ್ದಾರೆ ಎಂದು ಅವರು ತಮ್ಮ ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ವೆಡ್ಡಿಂಗ್ ಫೋಟೋಗ್ರಾಫರ್ ರೋಹಿತ್ ಸುಲಾಖೆ ಅವರು ಕ್ಲಿಪ್ ಅನ್ನು ಸೆರೆಹಿಡಿದಿದ್ದಾರೆ  ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಸದ್ಯ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಟ ಅಪರಶಕ್ತಿ ಖುರಾನಾ ಅವರೂ ಸೇರಿದಂತೆ ಹಲವು ನಟ ನಟಿಯರೂ ಕೂಡ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಹೋಳಿ ಆಟದ ನಡುವೆ ಪರಸ್ಪರ ಚಪ್ಪಲಿ ಎಸೆದುಕೊಂಡ ಜನತೆ: ವಿಚಿತ್ರ ಹೋಳಿ ಆಚರಣೆಯ ವಿಡಿಯೋ ವೈರಲ್​