ಯಾರ ಕೈಬರಹಗಳನ್ನು ಬೇಕಾದ್ರೂ ಓದ್ಬೋದು, ಆದ್ರೆ ಈ ವೈದ್ಯರ ಕೈ ಬರಹಗಳನ್ನು ಓದೋದು ತುಂಬಾನೇ ಕಷ್ಟ. ಅದರಲ್ಲೂ ಅವರು ರೋಗಿಗಳಿಗೆ ಬರೆದುಕೊಡುವಂತಹ ಪ್ರಿಸ್ಕ್ರಿಪ್ಷನ್‌ಗಳನ್ನು ಹೆಚ್ಚಿನವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯನೇ ಇಲ್ಲ. ಹೌದು ಈ ವೈದ್ಯರು ಕೊಡುವಂತಹ ಪ್ರಿಸ್ಕ್ರಿಪ್ಷನ್ ಮೆಡಿಕಲ್ ಸ್ಟೋರ್ ಅವರಿಗೆ ಬಿಟ್ಟು ಬೇರೆ ಯಾರಿಗೂ ಅರ್ಥವಾಗದು. ಆದ್ರೆ ಇಲ್ಲೊಬ್ಬ ವೈದ್ಯ ಕೊಟ್ಟ ಪ್ರಿಸ್ಕ್ರಿಪ್ಷನ್ ಸಾಮಾನ್ಯ ಜನರಿಗೆ ಬಿಡಿ, ಮೆಡಿಕಲ್ ಶಾಪ್ ಅವರಿಗೂ ಅರ್ಥವಾಗಿಲ್ಲಂತೆ. ಈ ವೈದ್ಯನ ಕೈ ಬರಹವನ್ನು ಕಂಡು ಇದ್ಯಾವ ಭಾಷೆ ಸ್ವಾಮಿ ಎಂದು ಮೆಡಿಕಲ್ ಶಾಪ್‌ನವರೇ ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಹೊರ ರೋಗಿಗೆ ಬರೆದುಕೊಟ್ಟ ಪ್ರಿಸ್ಕ್ರಿಪ್ಷನ್ ಕಂಡು ಮೆಡಿಕಲ್ ಸ್ಟೋರ್ ಅವರೇ ದಿಗ್ಭ್ರಮೆಗೊಂಡಿದ್ದಾರೆ. ಇಲ್ಲಿನ ನಾಗೌಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ರೋಗಿಯೊಬ್ಬರಿಗೆ ಡಾ. ಅಮಿತ್ ಸೋನಿ ಎಂಬವರು ಒಂದಷ್ಟು ಜೌಷಧಿಗಳ ಪ್ರಿಸ್ಕ್ರಿಪ್ಷನ್ ಬರೆದುಕೊಟ್ಟು ಔಷಧಿಗಳನ್ನು ಮೆಡಿಕಲ್ ಶಾಪ್ ಅಲ್ಲಿ ಖರೀದಿಸುವಂತೆ ಹೇಳಿದ್ದಾರೆ. ಆ ವ್ಯಕ್ತಿ ಅಲ್ಲೇ ಆಸ್ಪತ್ರೆಯ ಪಕ್ಕದಲ್ಲಿದ್ದ ಮೆಡಿಕಲ್ ಸ್ಟೋರ್‌ಗೆ ಸ್ಟೋರ್‌ಗೆ ಹೋಗುತ್ತಾರೆ. ವೈದ್ಯ ಕೊಟ್ಟ ಈ ಪ್ರಿಸ್ಕ್ರಿಪ್ಷನ್ ಲೆಟರ್ ನೋಡಿ ಇದ್ಯಾವ ಭಾಷೆಯಲ್ಲಿ ಔಷಧಿಗಳ ಹೆಸರು ಬರ್ದಿದ್ದಾರೋ ಗೊತ್ತಾಗ್ತಿಲ್ವೇ ಎಂದು ಮೆಡಿಕಲ್ ಶಾಪ್ ಸಿಬ್ಬಂದಿಗಳೇ ದಿಗ್ಭ್ರಮೆಗೊಂಡಿದ್ದಾರೆ. ನಂತರ ಅರ್ಥವಾಗದ ಭಾಷೆಯಲ್ಲಿ ಬರೆದ ಈ ಪ್ರಿಸ್ಕ್ರಿಪ್ಷನ್ ಲೆಟರ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ನಮಗೆ ಯಾರೂ ಗೌರವ ಕೊಡಲ್ಲ, ಗಂಡನ ಕಾಟಕ್ಕೆ ಬೇಸತ್ತು ಮಕ್ಕಳೊಂದಿಗೆ ಹಿಂದೂ ಧರ್ಮ ಸೇರಿದ ಮುಸ್ಲಿಂ ಮಹಿಳೆ
MP Gajab News : सतना के डॉक्टर साब ने ऐसा लिखा पर्चा कि ‘खुद लिखे खुदा बांचे’ वाली कहावत हो गई, देखें वायरल हो रहा Prescription#Satna #Doctor #Viral #Prescription @healthminmp #MPNews #PeoplesUpdate pic.twitter.com/VCoYRoFpRJ
— Peoples Samachar (@psamachar1) September 6, 2024
ಫೋಟೋ ವೈರಲ್ ಆಗುತ್ತಿದ್ದಂತೆ ಆ ವೈದ್ಯನ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಎಲ್.ಕೆ. ತಿವಾರಿ “ಈ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಹೌದು ನಿಜಕ್ಕೂ ಡಾ. ಅಮಿತ್ ಸೋನಿ ಅವರು ಬರೆದಿರುವ ಪ್ರಿಸ್ಕ್ರಿಪ್ಷನ್ ಯಾರಿಗೂ ಓದಲು ಸಾಧ್ಯವಾಗುತ್ತಿಲ್ಲ. ಇದೀಗ ಅವರಿಗೆ ನೋಟಿಸ್ ನೀಡಿದ್ದೇವೆ, ಅವರ ಕಡೆಯಿಂದ ಇದಕ್ಕೆ ಉತ್ತರ ಬಂದ ನಂತರ ಕ್ರಮ ಕೈಗೊಳ್ಳುವುದಾಗಿʼ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ