ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಬಿಗ್ ಫೈಟ್ , ಇಲ್ಲಿದೆ ವಿಡಿಯೋ

ಕೆಲವೊಂದು ಬಾರಿ ವಿದ್ಯಾರ್ಥಿಗಳಿಗೆ ಪಾಠ, ಸಂಸ್ಕಾರ ಹೇಳಿಕೊಡಬೇಕಾದ ಶಿಕ್ಷಕರು ಕೆಲವೊಮ್ಮೆ ಅತೀರೇಕವಾಗಿ ವರ್ತಿಸುತ್ತಾರೆ. ಶಾಲಾ ಕಾಲೇಜಿನಲ್ಲಿ ಶಿಕ್ಷಕರು ಅಥವಾ ಸಿಬ್ಬಂದಿಗಳ ನಡುವೆ ಮಾತಿಗೆ ಮಾತು ಬೆಳೆದು ಜಗಳಗಳು ಏರ್ಪಟ್ಟಿರುವ ಘಟನೆಗಳ ಬಗ್ಗೆ ನೀವು ಕೇಳಿರಬಹುದು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆ ಆವರಣದಲ್ಲಿ ಮಹಿಳಾ ಪ್ರಾಂಶುಪಾಲರು ಮತ್ತು ಮಹಿಳಾ ಲೈಬ್ರೆರಿಯನ್ ಇಬ್ಬರೂ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಬಿಗ್ ಫೈಟ್ , ಇಲ್ಲಿದೆ ವಿಡಿಯೋ
ವೈರಲ್ ವಿಡಿಯೋ
Image Credit source: Twitter

Updated on: May 06, 2025 | 4:45 PM

ಮಧ್ಯ ಪ್ರದೇಶ ಮೇ 6: ಶಾಲೆ (school) ಯೆಂದರೆ ಮಕ್ಕಳಿಗೆ ಒಂದೊಳ್ಳೆ ಸಂಸ್ಕಾರ ಕಲಿಸಿಕೊಡುವ ದೇಗುಲ. ಹೀಗಾಗಿ ಶಾಲೆಯಲ್ಲಿ ಓದುವ ಮಕ್ಕಳು ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ನೋಡಿ ಕಲಿಯುವುದೇ ಹೆಚ್ಚು. ಆದರೆ ಇಂತಹವರೇ ಮಕ್ಕಳ ಎದುರು ಜುಟ್ಟು ಜುಟ್ಟು ಹಿಡಿದು ಜಗಳವಾಡಿದರೆ ಹೇಗಿರಬಹುದು ಎಂದು ಒಮ್ಮೆ ಊಹಿಸಿ. ಆದರೆ ಇಲ್ಲೊಂದು ಕಡೆ ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಜಗಳವು ಏರ್ಪಟ್ಟಿದೆ. ಇಬ್ಬರ ನಡುವೆ ಶುರುವಾದ ವಾಗ್ವಾದವು ಜುಟ್ಟು ಹಿಡಿದು ಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಈ ಘಟನೆಯೂ ಭೋಪಾಲ್ (bhopal) ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಮಧ್ಯಪ್ರದೇಶ (madhya pradesh) ದ ಖಾರ್ಗೋನ್‍ನ ಸರ್ಕಾರಿ ಏಕಲವ್ಯ ಆದರ್ಶ ಶಾಲೆ (government ekalavya adarsh ​​school of khargone) ಯಲ್ಲಿ ನಡೆದಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಈ ವಿಡಿಯೋವನ್ನು formenindia ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ಶಾಲೆಯ ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಈ ಜಗಳವನ್ನು ಲೈಬ್ರೆರಿಯನ್ ತನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಪ್ರಾಂಶುಪಾಲರು ಸಿಟ್ಟುಗೊಂಡಿದ್ದು, ಲೈಬ್ರೆರಿಯನ್ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಸಹ ಒಡೆದುಹಾಕಿರುವುದನ್ನು ನೋಡಬಹುದು. ಆ ಬಳಿಕ ಇಬ್ಬರ ನಡುವೆ ಮಾತಿನ ಚಕಾಮಕಿಯೂ ಏರ್ಪಟ್ಟಿದ್ದು, ತದನಂತರದಲ್ಲಿ ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. ಜುಟ್ಟು ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ಇದನ್ನೂ ಓದಿ : ಮಸಾಲೆ ದೋಸೆ ಸೀರೆ, ಇಡ್ಲಿ ಶರ್ಟ್‌, ಫ್ಯಾಷನ್ ಪ್ರಿಯರಿಗೆ ಹೊಸ ಲುಕ್​​ ಪರಿಚಯಿಸಿದ ಎಐ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಇಬ್ಬರೂ ಮಹಿಳೆಯರನ್ನು ಪ್ರಾಂಶುಪಾಲ ಪ್ರವೀಣ್ ದಹಿಯಾ ಮತ್ತು ಲೈಬ್ರೆರಿಯನ್ ಮಧುರಾಣಿ ಎಂದು ಗುರುತಿಸಲಾಗಿದ್ದು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ. ಈ ವಿಡಿಯೋ ಒಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರ ಪ್ರತಿಕ್ರಿಯೆಗಳು ಹೀಗಿವೆ. ಬಳಕೆದಾರರೊಬ್ಬರು, ‘ಇದು ಬೆಕ್ಕಿನ ಕಾದಾಟ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಲೈಬ್ರೆರಿಯನ್ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಅತಿಯಾಗಿ ಬುದ್ಧಿವಂತಿಕೆಯಿಂದ ವರ್ತಿಸಿದ್ದಾರೆ. ಆಕೆಗೆ ಅರ್ಹವಾದದ್ದು ಸಿಕ್ಕಿದ್ದು, ಟಿಕ್ ಟಾಕ್ ಸಂಸ್ಕೃತಿ ಜನರನ್ನು ಸಾಕಷ್ಟು ಹಾಳು ಮಾಡಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಯಾರ ಜಗಳವನ್ನಾದರೂ ಈ ಜಡೆ ಜಗಳವನ್ನು ಬಿಡಿಸಲು ಸಾಧ್ಯವಿಲ್ಲ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ