Viral: ಪ್ಲಾಸ್ಟಿಕ್‌ ಚೀಲದಲ್ಲಿ ಮೂತ್ರ ವಿಸರ್ಜನೆ ಮಾಡಿ, ಕೈ ತೊಳೆಯದೆ ಹಣ್ಣು ಮಾರುತ್ತಿದ್ದ ಆಸಾಮಿಯ ಬಂಧನ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 23, 2024 | 12:29 PM

ಈ ಹಿಂದೆ ವ್ಯಾಪಾರಿಯೊಬ್ಬ ಎಂಜಲು ಉಗಿದು ಹಣ್ಣು ಮಾರಾಟ ಮಾಡಿದ ಸುದ್ದಿಯೊಂದು ವೈರಲ್‌ ಆಗಿತ್ತು. ಇದೀಗ ಅಂತಹದ್ಧೇ ಘಟನೆಯೊಂದು ನಡೆದಿದ್ದು, ಹಣ್ಣು ವ್ಯಾಪಾರಿಯೊಬ್ಬ ಪ್ಲಾಸ್ಟಿಕ್‌ ಚೀಲದಲ್ಲಿ ಮೂತ್ರ ವಿಸರ್ಜನೆ ಮಾಡಿ ಬಳಿಕ ಕೈ ತೊಳೆಯದೆ, ಅದೇ ಕೊಳಕು ಕೈಯಲ್ಲಿ ಹಣ್ಣು ಮಾರಾಟ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನೈರ್ಮಲ್ಯದ ದೃಷ್ಟಿಯಿಂದ ಮೂತ್ರ ವಿಸರ್ಜನೆ ಮಾಡಿದ ಬಳಿಕ ಸರಿಯಾಗಿ ಕೈಗಳನ್ನು ತೊಳೆದುಕೊಳ್ಳಬೇಕು. ಇಲ್ಲಾಂದ್ರೆ ಕೆಟ್ಟ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರುವ ಸಂಭವವಿರುತ್ತದೆ. ಇದರಿಂದ ರೋಗರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೂತ್ರ ವಿಸರ್ಜಿಸಿದ ಬಳಿಕ ಕಡ್ಡಾಯವಾಗಿ ಕೈಗಳನ್ನು ತೊಳೆಯಬೇಕು. ಆದ್ರೆ ಇಲ್ಲೊಬ್ಬ ವ್ಯಾಪಾರಿ ತನ್ನ ತಳ್ಳೋ ಗಾಡಿಯ ಪಕ್ಕದಲ್ಲಿಯೇ ನಿಂತು ಪ್ಲಾಸ್ಟಿಕ್‌ ಚೀಲದಲ್ಲಿ ಮೂತ್ರ ವಿಸರ್ಜನೆ ಮಾಡಿ, ಕೈ ತೊಳೆಯದೆ ಅದೇ ಕೊಳಕು ಕೈಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಿದ್ದಾನೆ. ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಇಲ್ಲಿನ ನಿಲ್ಜೆ ಪ್ರದೇಶದಲ್ಲಿ ಹಣ್ಣಿನ ವ್ಯಾಪಾರಿ ಅಲಿ ಖಾನ್‌ (20) ತನ್ನ ತಳ್ಳೋ ಗಾಡಿಯ ಪಕ್ಕದಲ್ಲಿಯೇ ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಮೂತ್ರ ವಿಸರ್ಜನೆ ಮಾಡಿ ಬಳಿಕ ಕೈಗಳನ್ನು ಸ್ವಚ್ಛಗೊಳಿಸದೆ ಅದೇ ಕೊಳಕು ಕೈಗಳಲ್ಲಿ ಹಣ್ಣು ಮಾರಾಟ ಮಾಡಿದ್ದಾನೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಳಿಕ ಭಾನುವಾರ (ಸೆಪ್ಟೆಂಬರ್‌ 22) ಥಾಣೆಯ ಡೊಂಬಿವಲಿಯಲ್ಲಿ ಪೊಲೀಸರು ಅಲಿ ಖಾನ್‌ನನ್ನು ಬಂಧಿಸಿದ್ದಾರೆ. ಅಲಿಖಾನ್‌ ವಿರುದ್ಧ ಸೆಕ್ಷನ್‌ 271, ಸೆಕ್ಷನ್‌ 272 ಮತ್ತು 296 ಅಡಿಯಲ್ಲಿ ಎಫ್.‌ಐ.ಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ