ಮೇಕಪ್​ ಮೂಲಕ ಬಾಲಿವುಡ್​ ನಟ ಶಾರುಖ್​ ಖಾನ್​ರಂತೆ ಕಾಣಿಸಿಕೊಂಡ ಮೇಕಪ್​ ಆರ್ಟಿಸ್ಟ್​: ವೀಡಿಯೋ ವೈರಲ್​

| Updated By: Pavitra Bhat Jigalemane

Updated on: Dec 29, 2021 | 3:50 PM

ದೆಹಲಿ ಮೂಲದ ಮೇಕಪ್​ ಆರ್ಟಿಸ್ಟ್​ ಒಬ್ಬರು ಮೇಕಪ್​ ಮೂಲಕ ತಮ್ಮ ಮುಖವನ್ನು ಬಾಲಿವುಡ್​ ನಟ ಶಾರುಖ್​ ಖಾನ್​ನಂತೆಯೇ ಕಾಣುವಂತೆ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೇಕಪ್​ ಮೂಲಕ ಬಾಲಿವುಡ್​ ನಟ ಶಾರುಖ್​ ಖಾನ್​ರಂತೆ ಕಾಣಿಸಿಕೊಂಡ ಮೇಕಪ್​ ಆರ್ಟಿಸ್ಟ್​: ವೀಡಿಯೋ ವೈರಲ್​
ಶಾರುಕ್​ ಖಾನ್​ರಂತೆ ಮೇಕಪ್​ ಮಾಡಿಕೊಂಡ ದೀಕ್ಷಿತಾ
Follow us on

ಮೇಕಪ್​ ಎಂತಹವರನ್ನೂ ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ. ಅದೇ ರೀತಿ ಇತ್ತೀಚೆಗೆ ಮೇಕಪ್​ ಮೂಲಕ ಬೇರೆಯವರಂತೆ ಕಾಣಿಸಕೊಳ್ಳಲೂ ಸಾಧ್ಯ. ಹೌದು ದೆಹಲಿ ಮೂಲದ ಮೇಕಪ್​ ಆರ್ಟಿಸ್ಟ್​ ಒಬ್ಬರು ಮೇಕಪ್​ ಮೂಲಕ ತಮ್ಮ ಮುಖವನ್ನು ಬಾಲಿವುಡ್​ ನಟ ಶಾರುಖ್​ ಖಾನ್​ರಂತೆಯೇ ಕಾಣುವಂತೆ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ. 

ದೆಹಲಿಯ ದೀಕ್ಷಿತಾ ಎನ್ನುವ ಮೇಕಪ್​ ಆರ್ಟಿಸ್ಟ್ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇವರು ಶಾರುಖ್​ ಖಾನ್​ ಮಾತ್ರವಲ್ಲ ಈಗಾಗಲೇ ಆಲಿಯಾ ಭಟ್ ​,ರಾಜ್​ಕುಮಾರ್​ ರಾವ್​ ಸೇರಿದಂತೆ ಹಲವು ನಟ, ನಟಿಯರ ಹಾಗೆ ಕಾಣಿಸಿಕೊಳ್ಳುವ  ಮೇಕಪ್ ಮಾಡಿಕೊಂಡು ಅದರ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಮೇಕಪ್​ ಟ್ರಾನ್ಸ್ಪಾಮೇಶನ್​ ನಿಜಕ್ಕೂ ನೋಡುಗರನ್ನು ಅಚ್ಚರಿಗೊಳಿಸುತ್ತಿದೆ.

ವೀಡಿಯೋದಲ್ಲಿ ದೀಕ್ಷಿತಾ ಮೊದಲು ಬ್ಲೆಂಡರ್​, ಬ್ರಷ್ ಮತ್ತು ಸ್ಟೀಪ್​ಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ನಿಧಾನವಾಗಿ ಒಂದೊಂದು ರೀತಿಯ ಕ್ರೀಮ್​, ಕಾಜಲ್​ಗಳನ್ನು ಹಚ್ಚುತ್ತಾರೆ. ಕ್ಷಣ ಮಾತ್ರದಲ್ಲಿ ನಂಬಲಸಾಧ್ಯವಾಗದ ಹಾಗೆ ಶಾರುಖ್​ ಖಾನ್​ ಅವರನ್ನೇ ಹೋಲುವ ಮುಖದೊಂದಿಗೆ ಕ್ಯಾಮರಾ ಮುಂದೆ ನಿಲ್ಲುತ್ತಾರೆ. ದೀಕ್ಷಿತಾ ವೀಡಿಯೋಗೆ ಶಾರುಖ್​ ಖಾನ್​ ಅವರ ಚಮಕ್​ ಚಲ್ಲೋ ಹಾಡನ್ನು ಹಿನ್ನಲೆಯಾಗಿ ಹಾಕಿದ್ದಾರೆ. ವೀಡಿಯೋ ನೋಡದೆ ಕೇವಲ ಫೋಟೋ ನೋಡಿದರೆ ಮೇಕಪ್​ ಮೂಲಕ ಮಾಡಿಕೊಂಡ ರೂಪಾಂತರ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ದೀಕ್ಷಿತಾ ಅವರ ಶಾರುಖ್​ ಖಾನ್​​ ರೂಪ  ಸಖತ್​ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವೀಡಿಯೋ  ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.

ಇದನ್ನೂ ಓದಿ:

Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್