ತನ್ನನ್ನು ಸ್ವೀಟ್ ಬೇಬಿ ಎಂದು ಕರೆದುಕೊಂಡ ಪಕ್ಷಿ: ಮನುಷ್ಯರಂತೆ ಮಾತನಾಡುವ ಪಕ್ಷಿಯ ಕ್ಯೂಟ್​ ವೀಡಿಯೋ ವೈರಲ್​

ಇಲ್ಲೊಂದು ನೀಲಿ ಬಣ್ಣದ ಗಿಳಿ ಅಥವಾ ಬೀಟ್​ಬಾಕ್ಸಿಂಗ್​ ಎನ್ನುವ ಪಕ್ಷಿ ಮುದ್ದಾಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಪಕ್ಷಿ ಸ್ಪಷ್ಟವಾಗಿ ಮಾತನಾಡುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತನ್ನನ್ನು ಸ್ವೀಟ್ ಬೇಬಿ ಎಂದು ಕರೆದುಕೊಂಡ ಪಕ್ಷಿ: ಮನುಷ್ಯರಂತೆ ಮಾತನಾಡುವ ಪಕ್ಷಿಯ ಕ್ಯೂಟ್​ ವೀಡಿಯೋ ವೈರಲ್​
ವೀಡಿಯೋದಿಂದ ಸೆರೆಹಿಡಿದ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 29, 2021 | 1:05 PM

ಪಕ್ಷಿಗಳು ಯಾವುದೇ ಇರಲಿ ಅವು ನೋಡಲು ತುಂಬಾ ಮುದ್ದಾಗಿ ಕಾಣುತ್ತವೆ. ಅವುಗಳು ಮಾತನಾಡಿದರೆ? ಹೌದು ನೀವು ಓದುತ್ತಿರುವುದು ನಿಜ ಪಕ್ಷಿಗಳು ಕೂಡ ಮಾನವರಂತೆ ಮಾತನಾಡಬಲ್ಲವು. ಅಂತಹ ಪಕ್ಷಿಗಳು ನೋಡಲು ಇನ್ನೂ ಚೆಂದ. ಇಲ್ಲೊಂದು ನೀಲಿ ಬಣ್ಣದ ಗಿಳಿ ಅಥವಾ ಬೀಟ್​ಬಾಕ್ಸಿಂಗ್​ ಎನ್ನುವ ಪಕ್ಷಿ ಮುದ್ದಾಗಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಪಕ್ಷಿ ಸ್ಪಷ್ಟವಾಗಿ ಮಾತನಾಡುವುದನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಬಲ್ಸ್​ ಎನ್ನುವ ಹೆಸರಿನ ಈ ಪಕ್ಷಿ ಮಾತನಾಡುವ ವೀಡಿಯೋವನ್ನು ಪಾರೋಟ್ಸ್​ ಹಾವ್​ ಫನ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 8 ರಂದು ಹಂಚಿಕೊಂಡ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವೀಡಿಯೋ 6.9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು ನೆಟ್ಟಿಗರ ಮನಸೆಳೆದಿದೆ.

ವೀಡಿಯೋದಲ್ಲಿ ಪಕ್ಷಿಯು ವ್ಯಕ್ತಿಯ ಭುಜದ ಮೇಲೆ ಕುಳಿತಿರುತ್ತದೆ. ನಂತರ ಅದರ ಬಳಿ ಆ ವ್ಯಕ್ತಿ ಸಣ್ಣ ಮೈಕ್​ಅನ್ನು ಹಿಡಿಯುತ್ತಾನೆ ಆಗ ಪಕ್ಷಿ ಒಹ್​ ಹಾಯ್​ !ಎಂದು ಮೊದಲು ಸ್ಪಷ್ಟವಾಗಿ ಮನುಷ್ಯರಂತೆ ಉಚ್ಚರಿಸುತ್ತದೆ. ನಂತರ ಮುಂದುವರೆದು ಮಾತನಾಡಿ, ನಾನು ಅತ್ಯಂತ ಖುಷಿಯ ಪಕ್ಷಿ, ಸ್ವೀಟ್​ ಬಬಲ್ಸ್​ ಎಂದು ಹೇಳಿಕೊಳ್ಳುತ್ತದೆ. ಪಕ್ಷಿಯು ಅಕ್ಷರಗಳನ್ನು ಸ್ಪಷ್ವವಾಗಿ ಉಚ್ಚರಿಸುತ್ತದೆ. ಇದು ನೋಡುಗರನ್ನು ಸೆಳೆದಿದೆ.

ಮಾತನಾಡುವ ಗಿಳಿಗಳನ್ನು ನೋಡಿದ್ದೇವೆ ಆದರೆ ಇಷ್ಟು ಸ್ಪಷ್ಟವಾಗಿ ಮಾತನಾಡುವ ಪಕ್ಷಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ವಾವ್​ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪಕ್ಷಿಯ ಧ್ವನಿಗೆ ಮೈಕ್​ ಹಿಡಿದ ಕಾರಣ ಧ್ವನಿ ಇನ್ನಷ್ಟು ಸ್ಪಷ್ಟವಾಗಿ ಕೇಳಿಸುತ್ತಿದ್ದು, ಮತ್ತೆ ಮತ್ತೆ ಕೇಳಬೇಕಿನಿಸುವಷ್ಟು ಮಧುರ ಧ್ವನಿ ಪಕ್ಷಿಯದ್ದಾಗಿದೆ.

ಇದನ್ನೂ ಓದಿ:

ತಮಿಳುನಾಡಿನ ಪಕ್ಷಿಧಾಮಗಳಲ್ಲೀಗ ಫ್ಲೆಮಿಂಗೋ ವಲಸೆ ಹಕ್ಕಿಗಳ ಕಲರವ: ವೀಡಿಯೋ ವೈರಲ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ