ಮೇಕಪ್ ಮೂಲಕ ಬಾಲಿವುಡ್ ನಟ ಶಾರುಖ್ ಖಾನ್ರಂತೆ ಕಾಣಿಸಿಕೊಂಡ ಮೇಕಪ್ ಆರ್ಟಿಸ್ಟ್: ವೀಡಿಯೋ ವೈರಲ್
ದೆಹಲಿ ಮೂಲದ ಮೇಕಪ್ ಆರ್ಟಿಸ್ಟ್ ಒಬ್ಬರು ಮೇಕಪ್ ಮೂಲಕ ತಮ್ಮ ಮುಖವನ್ನು ಬಾಲಿವುಡ್ ನಟ ಶಾರುಖ್ ಖಾನ್ನಂತೆಯೇ ಕಾಣುವಂತೆ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೇಕಪ್ ಎಂತಹವರನ್ನೂ ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ. ಅದೇ ರೀತಿ ಇತ್ತೀಚೆಗೆ ಮೇಕಪ್ ಮೂಲಕ ಬೇರೆಯವರಂತೆ ಕಾಣಿಸಕೊಳ್ಳಲೂ ಸಾಧ್ಯ. ಹೌದು ದೆಹಲಿ ಮೂಲದ ಮೇಕಪ್ ಆರ್ಟಿಸ್ಟ್ ಒಬ್ಬರು ಮೇಕಪ್ ಮೂಲಕ ತಮ್ಮ ಮುಖವನ್ನು ಬಾಲಿವುಡ್ ನಟ ಶಾರುಖ್ ಖಾನ್ರಂತೆಯೇ ಕಾಣುವಂತೆ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೆಹಲಿಯ ದೀಕ್ಷಿತಾ ಎನ್ನುವ ಮೇಕಪ್ ಆರ್ಟಿಸ್ಟ್ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇವರು ಶಾರುಖ್ ಖಾನ್ ಮಾತ್ರವಲ್ಲ ಈಗಾಗಲೇ ಆಲಿಯಾ ಭಟ್ ,ರಾಜ್ಕುಮಾರ್ ರಾವ್ ಸೇರಿದಂತೆ ಹಲವು ನಟ, ನಟಿಯರ ಹಾಗೆ ಕಾಣಿಸಿಕೊಳ್ಳುವ ಮೇಕಪ್ ಮಾಡಿಕೊಂಡು ಅದರ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಮೇಕಪ್ ಟ್ರಾನ್ಸ್ಪಾಮೇಶನ್ ನಿಜಕ್ಕೂ ನೋಡುಗರನ್ನು ಅಚ್ಚರಿಗೊಳಿಸುತ್ತಿದೆ.
View this post on Instagram
ವೀಡಿಯೋದಲ್ಲಿ ದೀಕ್ಷಿತಾ ಮೊದಲು ಬ್ಲೆಂಡರ್, ಬ್ರಷ್ ಮತ್ತು ಸ್ಟೀಪ್ಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ನಿಧಾನವಾಗಿ ಒಂದೊಂದು ರೀತಿಯ ಕ್ರೀಮ್, ಕಾಜಲ್ಗಳನ್ನು ಹಚ್ಚುತ್ತಾರೆ. ಕ್ಷಣ ಮಾತ್ರದಲ್ಲಿ ನಂಬಲಸಾಧ್ಯವಾಗದ ಹಾಗೆ ಶಾರುಖ್ ಖಾನ್ ಅವರನ್ನೇ ಹೋಲುವ ಮುಖದೊಂದಿಗೆ ಕ್ಯಾಮರಾ ಮುಂದೆ ನಿಲ್ಲುತ್ತಾರೆ. ದೀಕ್ಷಿತಾ ವೀಡಿಯೋಗೆ ಶಾರುಖ್ ಖಾನ್ ಅವರ ಚಮಕ್ ಚಲ್ಲೋ ಹಾಡನ್ನು ಹಿನ್ನಲೆಯಾಗಿ ಹಾಕಿದ್ದಾರೆ. ವೀಡಿಯೋ ನೋಡದೆ ಕೇವಲ ಫೋಟೋ ನೋಡಿದರೆ ಮೇಕಪ್ ಮೂಲಕ ಮಾಡಿಕೊಂಡ ರೂಪಾಂತರ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ದೀಕ್ಷಿತಾ ಅವರ ಶಾರುಖ್ ಖಾನ್ ರೂಪ ಸಖತ್ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ.
ಇದನ್ನೂ ಓದಿ:
Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್