Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

|

Updated on: Jul 13, 2023 | 5:17 PM

Food : ಬಟಾಣಿ! ಬಣ್ಣಬಣ್ಣದಾ ಬಟಾಣಿ, ಕೆಂಪು ಬಟಾಣಿ ಹಸಿರು ಬಟಾಣಿ. ಈತನಕವೂ ತಿಂದ ಇಂಥ ಬಟಾಣಿಯಿಂದಾಗಿ ಎಷ್ಟು ಕೇಜಿ ಬಣ್ಣ ನಿಮ್ಮ ಹೊಟ್ಟೆಯನ್ನು ಹೊಕ್ಕಿರಬಹುದು? ನೆಟ್ಟಿಗರಂತೂ ಮುಖ ಹುಳ್ಳಗೆ ಮಾಡಿಕೊಂಡಿದ್ಧಾರೆ.

Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?
ಬಟಾಣಿಗೆ ಹಸಿರು ಬಣ್ಣ ಹಾಕುತ್ತಿರುವುದು
Follow us on

Green Peas : ಕಚ್ಚಾಹಾಳೆಗಳ ಪೊಟ್ಟಣಗಳಲ್ಲಿ ಅಥವಾ ಪ್ಲಾಸ್ಟೀಕಿನ ಪುಟ್ಟ ಚೀಟಿನಲ್ಲಿರುತ್ತಿದ್ದ ಈ ಬಣ್ಣದ ಬಟಾಣಿಗಳನ್ನು ತಿಂದು ಮುಗಿಸಿ ಕೈಗೆ ಹತ್ತಿದ ಒಂದೊಂದು ಉಪ್ಪಿನ ಕಣಗಳನ್ನು ನೆಕ್ಕಿ, ಟೀಚರ್​ ಕ್ಲಾಸಿನೊಳಗೆ ಬರುವುದಕ್ಕೇ ಮೊದಲು ಸಮವಸ್ತ್ರಕ್ಕೆ ಚೆನ್ನಾಗಿ ಒರೆಸಿಕೊಂಡು ಸಂಭಾವಿತರಂತೆ ಕುಳಿತುಕೊಳ್ಳುತ್ತಿದ್ದ ಆ ದಿನಗಳು ಕಣ್ಮುಂದೆ ಬರುತ್ತಿರಬೇಕಲ್ಲ? ಶಾಲೆಯ ಬಳಿಯ ತಳ್ಳುಗಾಡಿಗಳಿಂದ ಮತ್ತು ಕಾಕಾ ಅಂಗಡಿಗಳಿಂದ ಈ ಹಸಿರು ಮತ್ತು ಕೆಂಪು ಬಟಾಣಿಗಳನ್ನು ಖರೀದಿಸಿ ತಿನ್ನುತ್ತಿದ್ದದ್ದು ಬಾಲ್ಯದ (Childhood) ಸಂಭ್ರಮಗಳಲ್ಲಿ ಒಂದು. ಆದರೆ ಈ ಬಣ್ಣದ ಬಟಾಣಿಗಳನ್ನು ಹೇಗೆ ತಯಾರಿಸುತ್ತಾರೆ ಎಂದು ಈತನಕ ಗೊತ್ತಿತ್ತೆ? ಇಲ್ಲವಾದಲ್ಲಿ ಈ ಕೆಳಗಿನ ವಿಡಿಯೋ ನೋಡಿ.

ಅಸ್ಸಾಮ್​ನ ಡಿಜಿಟಲ್​ ಕ್ರಿಯೇಟರ್​​ ಮತ್ತು ಫುಡ್​ ವ್ಲಾಗರ್​​ ಸಲೋನಿ ಬೋತ್ರಾ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೂ. 21ರಂದು ಹಂಚಿಕೊಂಡ ಈ ವಿಡಿಯೋ ಸುಮಾರು ಏಳು ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. 3 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಇಷ್ಟು ವರ್ಷಗಳ ಕಾಲ ತಿಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಇನ್ನೂ ಕೆಲವರು ಇನ್ನ್ಯಾವತ್ತೂ ಈ ಬಣ್ಣದ ಬಟಾಣಿಯನ್ನು ತಿನ್ನುವುದಿಲ್ಲ ಎಂದು ಪ್ರಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ : Viral Video: ಜನರೆಲ್ಲ ಬದುಕುಳಿದದ್ದಕ್ಕೆ ಈ ಕಾರಿನ ಗುಣಮಟ್ಟ ಕಾರಣವೋ, ಅವರ ಅದೃಷ್ಟವೋ?

ಅಯ್ಯೋ ನನ್ನ ಬಾಲ್ಯದಲ್ಲಿ ಈ ಬಟಾಣಿಯಿಂದಲೇ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ ಎಂದು ಒಬ್ಬರು. ಬಾಲ್ಯದಲ್ಲಿಯಷ್ಟೇ ಯಾಕೆ ದೊಡ್ಡವನಾದ ಮೇಲೂ ಎಂದು ಮತ್ತೊಬ್ಬರು. ಹಾಗಿದ್ದರೆ ನಮ್ಮೆಲ್ಲರ ಹೊಟ್ಟೆಯೊಳಗೆ ಅದೆಷ್ಟು ಕೇಜಿ ಬಣ್ಣ ಹೋಗಿರಬಹುದು ಎಂದು ಮಗದೊಬ್ಬರು. ನನ್ನ ಗ್ಯಾಸ್ಟ್ರಿಕ್​ ಮತ್ತು ಎಸಿಡಿಟಿ ಸಮಸ್ಯೆಗೆ ಈ ಬಟಾಣಿಯೂ ಕಾರಣವಾಗಿರಬಹುದೆ? ಎಂದು ಇನ್ನೂ ಒಬ್ಬರು. ಏನೇ ಆಗಲಿ ಸೀಝನ್​ ಬಂದಾಗ ತಾಜಾ ಬಟಾಣಿಗಳನ್ನು ತಿನ್ನುವುದೇ ಒಳ್ಳೆಯದು, ಇನ್ನ್ಯಾವತ್ತೂ ಪ್ಯಾಕ್ ಮಾಡಿದ ಹಸಿರು ಬಟಾಣಿಯನ್ನು ತಿನ್ನುವುದೇ ಇಲ್ಲ ಎನ್ನುತ್ತಿದ್ದಾರೆ ಸಾಕಷ್ಟು ಜನರು.

ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ