Viral : ‘ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್’ ಮಲಾಲಾ ಟ್ವೀಟ್

|

Updated on: Jul 31, 2023 | 4:54 PM

Malala Yousafzai : 'ಸಿನೆಮಾ ನೋಡಿದ್ದು ಸಂತೋಷ. ಆದರೆ ಪಾಕಿಸ್ತಾನದ ಸಾವಿರಾರು ಹುಡುಗಿಯರ, ಮಹಿಳೆಯರ ದೌರ್ಜನ್ಯ ಪ್ರಕರಣಗಳನ್ನೊಮ್ಮೆ ನೋಡಿ. ನ್ಯಾಯಾಧೀಶರ ಪತ್ನಿಯಿಂದ ದೌರ್ಜನ್ಯಕ್ಕೆ ಒಳಗಾದ ಈ ಹೆಣ್ಣುಮಗುವಿಗೂ ನ್ಯಾಯ ಕೊಡಿಸಿ'

Viral : ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್ ಮಲಾಲಾ ಟ್ವೀಟ್
ಬಾರ್ಬ ಸಿನೆಮಾ ನೋಡಲು ಗಂಡನೊಂದಿಗೆ ಹೋಗಿದ್ದ ಮಲಾಲಾ ಯುಸೂಫ್​
Follow us on

Barbie : ಎಐ ಕಲಾವಿದರು ಮಲಾಲಾಗೂ ಪಿಂಕ್​ ಫಿವರ್ ಅಂಟಿಸಿದರೋ ಏನೋ? ಖಂಡಿತ ಇಲ್ಲ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯುಸೂಫ್​ (Malala Yousafzai) ವಾರಾಂತ್ಯದಲ್ಲಿ ತಮ್ಮ ಪತಿ ಅಸರ್ ಮಲಿಕ್​ರೊಂದಿಗೆ ಬಾರ್ಬಿ ಸಿನೆಮಾ ನೋಡಿಬಂದಿದ್ದಾರೆ; ‘ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್’ ಎಂದು ಟ್ವೀಟ್ ಮಾಡಿದ್ದಾರೆ ಆಕೆ. ಈ ಪೋಸ್ಟ್ ಅನ್ನುಈತನಕ 31.2 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 9 ಲಕ್ಷ ಜನರು ಲೈಕ್ ಮಾಡಿದ್ದಾರೆ. 85,000 ಜನರು ರೀಟ್ವೀಟ್ ಮಾಡಿದ್ದಾರೆ.

ಸಾವಿರಾರು ಜನರು ಈ ಟ್ವೀಟಿನಡಿ ಪ್ರತಿಕ್ರಿಯಿಸಿದ್ದಾರೆ. ನಾನು ಕೆನಫ್​ ಎಂದು ತಮಾಷೆ ಮಾಡಿದ್ದಾರೆ ಒಬ್ಬರು.  ಈತನ ನೋಡಿದ ಬಾರ್ಬಿ ವರ್ಷನ್​ಗಳಿಗಿಂತ ಇದು ಭಿನ್ನವಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮಿಬ್ಬರ ಈ ಫೋಟೋ ಅದ್ಭುತ ಎಂದಿದ್ಧಾರೆ ಕೆಲವರು. ಹೌದು ಈ ಸಿನೆಮಾ ನನಗೂ ಇಷ್ಟವಾಯಿತು ಎಂದು ಅನೇಕರು ಹೇಳಿದ್ದಾರೆ. ‘ಮಲಾಲಾ ಬಾರ್ಬಿ’ ಯನ್ನೂ ಸೃಷ್ಟಿಸಬೇಕು ಎಂದಿದ್ದಾರೆ ಮತ್ತೊಬ್ಬರು. ನೀವೀಗ ನೊಬೆಲ್ ಬ್ರೈಡ್​ ಎಂದಿದ್ದಾರೆ ಇನ್ನೊಬ್ಬರು. ಈ ಹೊಗಳಿಕೆಯ ಥ್ರೆಡ್​ನಲ್ಲಿಯೇ ಒಬ್ಬರು ಈ ಕೆಳಗಿನ ಬಾರ್ಬಿಗೆ ನ್ಯಾಯ ಬೇಕು, ಅದನ್ನು ನೀವು ಕೊಡಿಸಿ ಮಲಾಲಾ ಎಂದಿದ್ದಾರೆ ಒಬ್ಬರು.


ಪಾಕಿಸ್ತಾನದ ನ್ಯಾಯಾಧೀಶರ ಪತ್ನಿ ಅಸೀಮ್ ಹಫೀಜ್ 14 ವರ್ಷದ ತನ್ನ ಮನೆಗೆಲಸದಾಕೆ ರಿಜ್ವಾನಾಳನ್ನು ಚಿನ್ನಾಭರಣ ಕದ್ದಿದ್ದಕ್ಕಾಗಿ ಚಿತ್ರಹಿಂಸೆ ನೀಡಿದ್ದಾಳೆ. ಹೀಗೆ ಪಾಕಿಸ್ತಾನದಾದ್ಯಂತ ಸಾವಿರಾರು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳಿವೆ. ಆದರೂ ಸರ್ಕಾರ ದುರ್ಬಲರಿಗೆ ನ್ಯಾಯ ಒದಗಿಸುವುದನ್ನು ನಿರಾಕರಿಸುತ್ತಾರೆ. ಮಲಾಲಾ ನೀವು ಈ ಮಗುವಿಗೆ ದಯವಿಟ್ಟು ಸಹಾಯ ಮಾಡಿ ಎಂದಿದ್ದಾರೆ. ಈ ಟ್ವೀಟ್ ಬಗ್ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿ ಮಲಾಲಾ ಈ ವಿಷಯವಾಗಿ ಗಮನ ಹರಿಸಬೇಕು ಎಂದಿದ್ದಾರೆ.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 4:51 pm, Mon, 31 July 23