ಎಂಥಾ ಪ್ರೀತಿ, ನೀನು ಅಪಘಾತದಲ್ಲಿ ಸಾಯೋದು ನನಗೆ ಇಷ್ಟವಿಲ್ಲ ಎಂದು ಬೈಕ್ ಸುಟ್ಟು ಹಾಕಿದ ತಂದೆ
ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಬಯಸಿದ್ದೆಲ್ಲವನ್ನೂ ಕೊಡಿಸಬೇಕು ಎಂದು ಬಯಸುತ್ತಾರೆ. ಮಕ್ಕಳ ಕನಸನ್ನು ನನಸು ಮಾಡುವುದರಲ್ಲೇ ಖುಷಿ ಕಾಣುತ್ತಾರೆ. ಆದರೆ ಅವರಿಗೆ ನೀಡುರುವ ಸವಲತ್ತುಗಳಿಂದಲೇ ಮಕ್ಕಳಿಗೆ ಕುತ್ತು ಎಂದು ತಿಳಿದಾಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಇಂಥದ್ದೊಂದು ಘಟನೆ ಮಲೇಷ್ಯಾದಲ್ಲಿ ನಡೆದಿದೆ.

ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ತಂದೆಯೇ ಖುಷಿಯಿಂದ ಮಗನಿಗೆ ಬೈಕ್ ಕೊಡಿಸಿದ್ದರು, ಆದರೆ ಆ ಬೈಕ್ ಮಗನಿಗೆ ಕುತ್ತೆಂದು ತಿಳಿದ ಅವರು ಹೆಚ್ಚು ಯೋಚಿಸದೆ ಅದಕ್ಕೆ ಬೆಂಕಿ ಹಚ್ಚಿದ್ದಾರೆ ಅಷ್ಟೇ ಅಲ್ಲದೆ ಮಗನೇ ನೀನು ಅಪಘಾತದಲ್ಲಿ ಸಾಯುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೌಲಾಲಂಪುರದಿಂದ ಸ್ವಲ್ಪ ದೂರದ ಸ್ಥಳದಲ್ಲಿ ಈ ಘಟನೆ ನಡೆದಿದ್ದು ತಂದೆ ತನ್ನ ಮಗನ ಬೈಕ್ ಅನ್ನು ಸುಟ್ಟು ಹಾಕಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ತಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಬೈಕ್ ಸುಟ್ಟು ಹಾಕಿರುವುದು ಕಂಡು ಬಂದಿದೆ.
ಮತ್ತಷ್ಟು ಓದಿ: Viral: ಮನೆಗೆ ನುಗ್ಗಲು ಯತ್ನಿಸಿದ ದರೋಡೆಕೋರರನ್ನು ಏಕಾಂಗಿಯಾಗಿ ತಡೆದು ನಿಲ್ಲಿಸಿದ ದಿಟ್ಟ ಮಹಿಳೆ
ಮಗನೂ ಹಲವು ಮೋಟಾರ್ ಬೈಕ್ ರೇಸ್ ಗಳಲ್ಲಿ ಪಾಲ್ಗೊಂಡು ಸಂಜೆ ತುಂಬಾ ತಡವಾಗಿ ಮನೆಗೆ ಮರಳುತ್ತಿದ್ದ. ಈ ಕಾರಣದಿಂದಾಗಿ, ಅವನ ತಂದೆ ಯಾವಾಗಲೂ ತನ್ನ ಮಗನ ಸುರಕ್ಷತೆಯ ಬಗ್ಗೆ ಹೆದರುತ್ತಿದ್ದರು.
ತಂದೆ ತನ್ನ ಮಗನನ್ನು ಹಲವಾರು ಬಾರಿ ಮನವೊಲಿಸಲು ಪ್ರಯತ್ನಿಸಿದ್ದರು, ಆದರೆ ಅವನು ಪ್ರತಿ ಬಾರಿಯೂ ಅವನನ್ನು ನಿರ್ಲಕ್ಷಿಸುತ್ತಿದ್ದ, ಹೀಗಿರುವಾಗ ಮಗ ಅಪಘಾತದಲ್ಲಿ ಸಾಯುವ ಮುನ್ನವೇ ಬೈಕ್ ಧ್ವಂಸ ಮಾಡಬೇಕು ಎಂದು ನಿರ್ಧರಿಸಿದ್ದರು.
ಈ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದನ್ನು ಸರಿ ಎಂದು ಪರಿಗಣಿಸಿದರೆ, ಇನ್ನೂ ಕೆಲವರು ವಿಧಾನವು ಸರಿಯಲ್ಲ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ