Viral: ಮೊಬೈಲ್‌ ಕಸಿದುಕೊಂಡಿದ್ದಕ್ಕೆ ಕೋಪದಲ್ಲಿ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದ ಮಗ

ಈಗಿನ ಕಾಲದ ಮಕ್ಕಳಂತೂ ಯಾವಾಗ ನೋಡಿದ್ರೂ ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡೇ ಕೂರುತ್ತಾರೆ. ಇಲ್ಲೊಬ್ಬ ಬಾಲಕ ಕೂಡಾ ಶಾಲೆಯಿಂದ ಮನೆಗೆ ಬಂದು ಹೋಮ್‌ವರ್ಕ್‌ ಮಾಡದೇ ಮೊಬೈಲ್‌ ನೋಡುತ್ತಾ ಕೂತಿದ್ದು, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್‌ ಕಸಿದುಕೊಂಡಿದ್ದಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದು ನಿಜವಲ್ಲ ಬದಲಿಗೆ ಮಕ್ಕಳು ಮೊಬೈಲ್‌ ಬಳಸದಂತೆ ಜಾಗೃತಿ ಮೂಡಿಸಲು ಮಾಡಿದ ವಿಡಿಯೋ ಎಂದು ನೆಟ್ಟಿಗರು ಹೇಳಿದ್ದಾರೆ.

Viral: ಮೊಬೈಲ್‌ ಕಸಿದುಕೊಂಡಿದ್ದಕ್ಕೆ ಕೋಪದಲ್ಲಿ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದ ಮಗ
ವೈರಲ್​​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 03, 2024 | 11:29 AM

ಈಗೀಗ ದೊಡ್ಡವರಿಗಿಂತ ಈ ಪುಟ್‌ ಪುಟಾಣಿ ಮಕ್ಕಳೇ ಮೊಬೈಲ್‌ ಎನ್ನುವ ಮಾಯಾಜಾಲದಲ್ಲಿ ಸಿಲುಕಿಕೊಂಡಿದ್ದಾರೆ. ಯಾವಾಗ ನೋಡಿದ್ರೂ ಮೊಬೈಲ್‌ ಫೋನ್‌ ನೋಡುತ್ತಾ ಕುಳಿತಿರುತ್ತಾರೆ. ಹೌದು ಊಟ, ಪಾಠ, ಆಟ ಯಾವುದೂ ಬೇಡ ಎನ್ನುತ್ತಾ ಮೊಬೈಲ್‌ಗಾಗಿ ಹಠ ಹಿಡಿದು ಕೂರುತ್ತಾರೆ. ಇದೀಗ ಇಲ್ಲೊಬ್ಬ ಬಾಲಕ ಕೂಡಾ ಶಾಲೆಯಿಂದ ಬಂದ ಕೂಡಲೇ ಹೋಮ್‌ ವರ್ಕ್‌ ಮಾಡದೇ ಮೊಬೈಲ್‌ ಹಿಡಿದು ಕುಳಿತಿದ್ದು, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್‌ ಕಸಿದುಕೊಂಡಿದ್ದಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್‌ನಿಂದ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದು ಮಕ್ಕಳು ಮೊಬೈಲ್‌ ಬಳಸದಂತೆ ಜಾಗೃತಿ ಮೂಡಿಸಲು ಮಾಡಿದ ವಿಡಿಯೋದಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ದಿಲೀಪ್‌ ಕುಮಾರ್‌ (Dilipku24388061) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿಕ್ಕ ಮಕ್ಕಳಿಗೆ ಮೊಬೈಲ್‌ ಕೊಟ್ಟ ಪರಿಣಾಮ, ಈ ಮಗು ಹೇಗೆ ತನ್ನ ತಾಯಿಯ ಪ್ರಾಣಕ್ಕೆ ಕುತ್ತು ತಂದಿದೆ ನೋಡಿʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮೊಬೈಲ್‌ ಪಕ್ಕಕ್ಕಿಟ್ಟು ಓದಿದ್ರೆ ಸರಿ ಇವಾಗ ಎಂದು ತಾಯಿಯೊಬ್ಬರು ತಮ್ಮ ಮಗನಿಗೆ ಗದರುತ್ತಿರುವ ದೃಶ್ಯವನ್ನು ಕಾಣಬಹುದು. ತಾಯಿ ತನ್ನ ಮಗನ ಕೈಯಿಂದ ಮೊಬೈಲ್‌ ಕಸಿದುಕೊಂಡಾಗ ಆತ ಪುಸ್ತಕ ತೆಗೆದುಕೊಂಡು ಓದಲು ಆರಂಭಿಸುತ್ತಾನೆ. ತಾಯಿಯೂ ಅಲ್ಲೇ ಕುಳಿತಿರುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಕೋಪದಿಂದ ಬಾಲಕ ಅಲ್ಲೇ ಇದ್ದ ಬ್ಯಾಟ್‌ನಿಂದ ತಾಯಿಯ ತಲೆಗೆ ಒಂದೇಟು ಕೊಟ್ಟು ತಾಯಿಯಿಂದ ಮೊಬೈಲ್‌ ಕಸಿದುಕೊಳ್ಳುತ್ತಾನೆ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಇದು ನಿಜ ಘಟನೆಯಲ್ಲ, ಸ್ಕ್ರಿಪ್ಟೆಡ್‌ ವಿಡಿಯೋ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಲ್ಯ ಇಲ್ಲ ಅಂತಾ ಚಪಾತಿಗೆ ಸಗಣಿ ಬೆರೆಸಿ ತಿಂದ ಭೂಪ

ಅಕ್ಟೋಬರ್‌ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಡಿಯೋವನ್ನು ಮಕ್ಕಳಿಗೆ ಜಾಗೃತಿಯ ಸಂದೇಶವನ್ನು ಕೊಡಲು ಮಾಡಲಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿನ ಮಕ್ಕಳ ಮೊಬೈಲ್‌ ಚಟವನ್ನು ಬಿಡಿಸುವುದು ಕಷ್ಟಕರವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ