Viral: ಗರ್ಲ್‌ಫ್ರೆಂಡ್ ಜೊತೆ ಸುತ್ತಾಡುವಾಗ ಹೆಂಡ್ತಿ ಕೈಗೆ ತಗ್ಲಾಕೊಂಡ ಪತಿರಾಯ, ಮುಂದೇನಾಯ್ತು ನೋಡಿ
ಇತ್ತೀಚಿನ ದಿನಗಳಲ್ಲಿ ಈ ವಿವಾಹೇತರ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಾಗಿದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವಿವಾಹಿತ ಪುರುಷನೊಬ್ಬ ಬೇರೊಬ್ಬ ಮಹಿಳೆಯ ಜೊತೆ ಸ್ಕೂಟರ್‌ನಲ್ಲಿ ಸುತ್ತಾಡುತ್ತಿರುವ ವೇಳೆ ಹೆಂಡ್ತಿ ಕೈಲಿ ತಗ್ಲಾಕೊಂಡಿದ್ದು, ಈ ಮೂವರ ಮಧ್ಯೆ ನಡುರಸ್ತೆಯಲ್ಲಿ ಹೈಡ್ರಾಮವೇ ನಡೆದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೆಲವೊಮ್ಮೆ ವಿವಾಹಿತ ಪುರುಷ, ಮಹಿಳೆಯರು ಪರಸ್ತ್ರೀ-ಪರಪುರುಷರ ಸಂಗವನ್ನು ಬಯಸುವುದೂ ಇದೆ. ಇತ್ತೀಚಿಗಂತೂ ವಿವಾಹಿತ ಪುರುಷ ಬೇರೊಂದು ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿರುವ, ವಿವಾಹಿತ ಮಹಿಳೆ ಗಂಡನನ್ನು ಬಿಟ್ಟು ಬೋರೊಬ್ಬ ಪುರುಷನೊಂದಿಗೆ ಸುತ್ತಾಡುವ ಸುದ್ದಿಗಳಂತೂ ಹರಿದಾಡುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವಿವಾಹಿತ ಪುರುಷನೊಬ್ಬ ಬೇರೊಬ್ಬ ಮಹಿಳೆಯ ಜೊತೆ ಸ್ಕೂಟರ್‌ನಲ್ಲಿ ಸುತ್ತಾಡುತ್ತಿರುವ ವೇಳೆ ಹೆಂಡ್ತಿ ಕೈಲಿ ತಗ್ಲಾಕೊಂಡಿದ್ದು, ಗಂಡ, ಹೆಂಡ್ತಿ, ಗರ್ಲ್‌ಫ್ರೆಂಡ್ ಈ ಮೂವರ ಮಧ್ಯೆ ನಡುರಸ್ತೆಯಲ್ಲಿ ಹೈಡ್ರಾಮವೇ ನಡೆದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವೊಂದನ್ನು Gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಬೇರೊಂದು ಮಹಿಳೆಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಹೆಂಡತಿಯ ಕೈಗೆ ಸಿಕ್ಕಿಬಿದ್ದ ಗಂಡ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಂಡ, ಹೆಂಡ್ತಿ, ಗರ್ಲ್‌ಫ್ರೆಂಡ್ ಈ ಮೂವರ ಮಧ್ಯೆ ನಡುರಸ್ತೆಯಲ್ಲಿ ಹೈಡ್ರಾಮ ನಡೆಯುವ ದೃಶ್ಯವನ್ನು ಕಾಣಬಹುದು. ಪತಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿದಿದ್ದ ಮಹಿಳೆ ಆತನನ್ನು ರೆಡ್‌ಹ್ಯಾಂಡ್ ಹಿಡಿಯಬೇಕೇಂದು ರಸ್ತೆಯ ಬದಿಯಲ್ಲಿ ಕಾದು ಕುಳಿತು, ಆ ಇಬ್ಬರೂ ಸ್ಕೂಟರ್‌ನಲ್ಲಿ ಬರುವಾಗ ಅವರನ್ನು ನಿಲ್ಲಿಸಿ ನಡು ರಸ್ತೆಯಲ್ಲಿಯೇ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Extra-Marital Affair Kalesh (Wife Caught her Husband with other Lady on Scooty) 🎥: Insta: @/monupradhan pic.twitter.com/V7k9nOYNO6
— Ghar Ke Kalesh (@gharkekalesh) October 2, 2024
ಅಕ್ಟೋಬರ್ 2 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಈ ವಿವಾಹೇತರ ಸಂಬಂಧಗಳೇ ಹೆಚ್ಚಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಷ್ಟು ಚಂದದ ಹೆಂಡತಿ ಇರುವಾಗ ಇದೆಲ್ಲಾ ಬೇಕಿತ್ತಾ ನಿಮ್ಗೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Thu, 3 October 24