ಮದುವೆಯಾಗಲು ವಧು ಹುಡುಕಾಟಕ್ಕಾಗಿ ಜಾಹೀರಾತಿಗೆ 1.25 ಲಕ್ಷ ರೂ. ಖರ್ಚು ಮಾಡಿದ 70ರ ವೃದ್ಧ

ಗಿಲ್ಬರ್ಟಿ ಅವರ ಫೋಟೋವನ್ನು ರಸ್ತೆಬದಿಯಲ್ಲಿ 20 ಅಡಿ ಎತ್ತರದ ಜಾಹೀರಾತು ಫಲಕದಲ್ಲಿ ಹಾಕಲಾಗಿದೆ, ಅದರ ಮೇಲೆ ಮದುವೆಯಾಗಲು ವಧುವನ್ನು ಹುಡುಕುವುದಾಗಿ ಬರೆಯಲಾಗಿದೆ. ಆದರೆ ಈ ಜಾಹೀರಾತು ನೀಡಿದ ಕೇವಲ ಎರಡು ವಾರಗಳಲ್ಲಿ, ಅವರು 400 ಕ್ಕೂ ಹೆಚ್ಚು ಕರೆಗಳು ಬಂದಿದೆ ಎಂದು ಗಿಲ್ಬರ್ಟಿ ಹೇಳಿದ್ದಾರೆ.

ಮದುವೆಯಾಗಲು ವಧು ಹುಡುಕಾಟಕ್ಕಾಗಿ ಜಾಹೀರಾತಿಗೆ 1.25 ಲಕ್ಷ ರೂ. ಖರ್ಚು ಮಾಡಿದ 70ರ ವೃದ್ಧ
Follow us
ಅಕ್ಷತಾ ವರ್ಕಾಡಿ
|

Updated on: Apr 30, 2024 | 5:24 PM

ಪತ್ನಿಯ ಮರಣದ 70ರ ವೃದ್ಧರೊಬ್ಬರು ಕಳೆದ ಕೆಲ ವರ್ಷಗಳಿಂದ ಒಬ್ಬಂಟಿಯಾಗಿದ್ದಾರೆ. ಇದೀಗ ತನಗೊಂದು ಉತ್ತಮವಾದ ಸಂಗಾತಿಯನ್ನು ಪಡೆಯಲು ಲಕ್ಷ ಲಕ್ಷ ಕೊಟ್ಟು ಜಾಹೀರಾತು ನೀಡಿದ್ದಾರೆ. ಈ ವ್ಯಕ್ತಿಯ ಹೆಸರು ಅಲ್ ಗಿಲ್ಬರ್ಟಿ, ಒಂಟಿತನದಿಂದ ಬೇಸತ್ತಿದ್ದೇನೆ ಮತ್ತು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ ಇವರು ತನ್ನದೇ ಜಾಹಿರಾತುಗಳ ಮೂಲಕ ಹುಡುಗಿಯನ್ನು ಹುಡುಕುತ್ತಿದ್ದು, ಜಾಹೀರಾತಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ.

ಮಿರರ್ ವರದಿಯ ಪ್ರಕಾರ, ಗಿಲ್ಬರ್ಟಿ ಅವರ ಫೋಟೋವನ್ನು ರಸ್ತೆಬದಿಯಲ್ಲಿ 20 ಅಡಿ ಎತ್ತರದ ಜಾಹೀರಾತು ಫಲಕದಲ್ಲಿ ಹಾಕಲಾಗಿದೆ, ಅದರ ಮೇಲೆ ಮದುವೆಯಾಗಲು ವಧುವನ್ನು ಹುಡುಕುವುದಾಗಿ ಬರೆಯಲಾಗಿದೆ. ಆದರೆ ಈ ಜಾಹೀರಾತು ನೀಡಿದ ಕೇವಲ ಎರಡು ವಾರಗಳಲ್ಲಿ, ಅವರು 400 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಇದಲ್ಲದೇ 40-50 ಇಮೇಲ್​ಗಳು ಕೂಡ ಬಂದಿದೆ. ಅದರಲ್ಲಿರುವ ಹುಡುಗಿಯರ ಪೈಕಿ ಒಬ್ಬರನ್ನು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.

ಗಿಲ್ಬರ್ಟಿ ಅವರು ನಿಷ್ಠಾವಂತ ಮತ್ತು ಪ್ರಾಮಾಣಿಕ ಮತ್ತು ಸರಿಯಾದ ಸಂಗಾತಿಯನ್ನು ಕಂಡುಕೊಂಡರೆ, ಅವರು ಅವಳಿಗಾಗಿ ಅಮೆರಿಕದಲ್ಲಿ ಎಲ್ಲಿಯಾದರೂ ಹೋಗುತ್ತಾರೆ ಎಂದು ಹೇಳುತ್ತಾರೆ. ಅವರು ತಮ್ಮ ಜೀವನದ ಪ್ರೀತಿಯನ್ನು ಕಂಡುಕೊಂಡರೆ, ಅವರು ಬ್ರಿಟನ್‌ಗೆ ಹೋಗುವುದಾಗಿಯೂ ಹೇಳುತ್ತಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ ರೀಲ್ಸ್ ವಿಚಾರವಾಗಿ ನಡು ಬೀದಿಯಲ್ಲೇ ಹೆಣ್ಮಕ್ಕಳ ಬಿಗ್​​​ ಫೈಟ್​​; ವಿಡಿಯೋ ವೈರಲ್

ಗಿಲ್ಬರ್ಟಿ ಹೇಳುವಂತೆ ನನಗೆ ಸ್ಲಿಮ್, ಬುದ್ಧಿವಂತ, ನಿಷ್ಠಾವಂತ ಮತ್ತು ಪ್ರಾಮಾಣಿಕ ಸಂಗಾತಿ ಬೇಕು. ಆಕೆ ನನ್ನ ಮಾತು ನೋವುಗಳನ್ನು ಕೇಳುವ ಮತ್ತು ಮುಕ್ತ ಮನಸ್ಸಿನಿಂದ ಮಾತನ್ನು ಕೇಳುವ ಸಂಗಾತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ. ಸ್ವತಃ ವಿವರಿಸುತ್ತಾ, ನಿವೃತ್ತಿಯ ಆದಾಯವಿದೆ, ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನನ್ನ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಗಿಲ್ಬರ್ಟಿ ಜಾಹೀರಾತು ಫಲಕದ ಜಾಹೀರಾತುಗಳಿಗಾಗಿ ವಾರದಲ್ಲಿ 320 ಪೌಂಡ್‌ಗಳನ್ನು ಅಂದರೆ ಸುಮಾರು 33 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಇದರ ಪ್ರಕಾರ ಜಾಹೀರಾತಿಗೆ ಮಾತ್ರ ತಿಂಗಳಿಗೆ ಅಂದಾಜು 1.25 ಲಕ್ಷ ರೂ. ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ