ತನ್ನನ್ನು ಮಗುವಿನಂತೆ ನೋಡಿಕೊಳ್ಳಲು ಹಾಗೂ ಡೈಪರ್ ಬದಲಿಸಲು ಶಿಶುಪಾಲಕರು ಬೇಕೆಂದು ನೇಮಿಸಿಕೊಂಡ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಮಾನವ ಕಳ್ಳಸಾಗಾಣಿಕೆ ಆರೋಪವನ್ನು ಹೊರಿಸಿದ್ದಾರೆ. ಲುಸಿಯಾನದ ರುಟ್ಲೆಡ್ಜ್ ಡೀಶ್ 4 ಎನ್ನುವ ವ್ಯಕ್ತಿ ತನ್ನನ್ನು ವಿಶೇಷ ಚೇತನ ವ್ಯಕ್ತಿ ಎಂದು ಗುರುತಿಸಿಕೊಂಡು ತನ್ನ ಆರೈಕೆಗಾಗಿ ಹಾಗೂ ಡೈಪರ್ ಬದಲಿಸಲು ಜನರನ್ನು ನೇಮಿಸಿಕೊಂಡಿದ್ದನು. ತಾನು ವಿಶೇಷ ಚೇತನ ವ್ಯಕ್ತಿಯಾಗದ್ದು ತನಗೆ ಪರ್ಯಾಯ ಥೆರಪಿ ಬೇಕು ಹೀಗಾಗಿ ತನ್ನನ್ನು ನೋಡಿಕೊಳ್ಳಲು ಜನರ ಅವಶ್ಯಕತೆ ಇದೆ ಎಂದು ಸಂದೇಶ ಕಳುಹಿಸಿದ್ದನು. ಆದರೆ ಮನೆಗೆ ಬಂದ ಮೇಲೆ ಅವರ ಬಳಿ ತನ್ನ ಡೈಪರ್ ಬದಲಿಸುವಂತೆ ಹೇಳಿದ್ದಾನೆ.
ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಹಾಗೂ ಮಾನವ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿದ ಆರೋಪದ ಮೇಲೆ ಆತನನ್ನು ಜೆಫೊರ್ಸನ್ ಪ್ಯಾರಿಷ್ ಸೆಂಟರ್ನಲ್ಲಿ ಇರಿಸಲಾಗಿದೆ. ಆತ ಇದೇ ರೀತಿ ಹಲವರನ್ನು ಕರೆಸಿಕೊಂಡು ಲೈಂಗಿಕ ದೌರ್ಜನ್ಯವನ್ನೂ ನೀಡಿದ್ದಾನೆ. ಈ ಹಿಂದೆಯೂ ಈತನ ಮೇಲೆ ಮಾನವ ಕಳ್ಳಸಾಗಾಣಿಕೆ ಆರೋಪವಿತ್ತು. ಕಳೆದ ಬಾರಿ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ಆದರೂ ಮತ್ತೆ ಅದೇ ಕೆಲಸವನ್ನು ಮುಂದುವರೆಸಿದ್ದು ಪೊಲೀಸರು ಅತನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿದ ಪೊಲೀಸರು ಈ ಹಿಂದೆ ಈತನ ಸಹೋದರ ಕೋರಿ ಎನ್ನುವಾತನ ಹೆಸರು ಹೇಳಿಕೊಂಡು ಈ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಆಗ ತಪ್ಪು ಒಪ್ಪಕೊಂಡಿದ್ದನು. ಆದರೆ ಈಗ ಮತ್ತೆ ಅದೇ ದಂದೆ ಆರಂಭಿಸಿದ್ದು, ಆತನನ್ನು ಬಂಧಿಸಲಾಗಿದೆ. ಸದ್ಯ ಈ ಜಾಲದಲ್ಲಿ ಸಿಲುಕಿಕೊಂಡವರನ್ನು ರಕ್ಷಿಲಾಗುತ್ತಿದೆ. ಈಗಾಗಲೇ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರ ಹೇಳಿಕೆ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:
Viral Video: ವಿಮಾನದಲ್ಲಿ ಮಾಸ್ಕ್ ತೆಗೆದು ಆಹಾರ ಸೇವಿಸಿದ ವೃದ್ಧನಿಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ
Published On - 4:29 pm, Thu, 30 December 21