ಹಾವುಗಳೆಂದರೆ ಎಲ್ಲರಿಗೂ ಭಯನೇ, ಎಲ್ಲದರೂ ಅಪ್ಪಿತಪ್ಪಿ ಹಾವು ಕಾಣಿಸಿಕೊಂಡರೆ ತಕ್ಷಣ ನಾವು ಓಡಿ ಹೋಗುತ್ತೇವೆ. ಕೆಲವರಂತೂ ಆ ಕ್ಷಣದಲ್ಲಿ ಏನು ಮಾಡಬೇಕು ಎಂದೇ ತಿಳಿಯದೇ ಕಕ್ಕಾಬಿಕ್ಕಿಯಾಗುತ್ತಾರೆ. ಈ ಹೆಬ್ಬಾವು ಎಂದರೆ ಈ ಭಯವು ದುಪ್ಪಟ್ಟೆ ಆಗಿರುತ್ತದೆ. ದೂರದಲ್ಲಿ ಒಂದು ಹೆಬ್ಬಾವು ಕಂಡರೂ ಕೈಕಾಲು ನಡುಗಿ ಏನು ಮಾಡಬೇಕೆಂದು ತಿಳಿಯುವುದೇ ಇಲ್ಲ. ಈ ಹೆಬ್ಬಾವುಗಳು ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯರನ್ನು ಕೂಡಾ ಜೀವಂತವಾಗಿ ನುಂಗಿ ನೀರು ಕುಡಿದು ಬಿಡುತ್ತವೆ. ಇದೀಗ ವ್ಯಕ್ತಿಯೊಬ್ಬನು ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡುತ್ತಿರುವ ವಿಡಿಯೋ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬಾತ್ ರೂಮ್ ನಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡುತ್ತಿದ್ದಾನೆ. ಈ ವಿಡಿಯೋವನ್ನು @world_of_snakes Instagram ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬಾತ್ ರೂಮ್ ನಲ್ಲಿ ಶವರ್ ಗೆ ಮೈಯೊಡ್ಡಿ ನಿಂತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ ಆತನು ಸ್ನಾನ ಮಾಡುವುದಲ್ಲದೆ, ಮೈ ಮೇಲೆ ದೈತ್ಯಾಕಾರದ ಹೆಬ್ಬಾವಿದ್ದು ಅದರ ಮೈಯನ್ನು ತೊಳೆಯುತ್ತಿದ್ದಾನೆ. ಈ ವೇಳೆಯಲ್ಲಿ ಆತನ ಮುಖದಲ್ಲಿ ಯಾವುದೇ ಭಯವು ಕಾಣಿಸುತ್ತಿಲ್ಲ.
ಇದನ್ನೂ ಓದಿ: ಊರಿಗೆ ಮೊದಲ ಮಳೆ, ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ಭಯಾನಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ 10,000 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಆತನ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, “ಎಷ್ಟು ಬಲಶಾಲಿಯಾದ ಹೆಬ್ಬಾವು, ತುಂಬಾ ಭಾರವಾಗಿವೆ” ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು,”ಭಯಾನಕ, ಈ ವಿಡಿಯೋ ಇದು ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ