ಸೋಶಿಯಲ್ ಮೀಡಿಯಾಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವಾರು ರೀತಿಯ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಭಯಾನಕವಾಗಿರುತ್ತವೆ. ಹೆಚ್ಚಾಗಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಮುದ್ದಾಗಿರುತ್ತವೆ. ಸದ್ಯ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ಹುಲಿಯೊಂದು ಬೆಕ್ಕಿನಂತೆ ಆಟವಾಡುತ್ತಿರುವುದನ್ನು ಕಾಣಬಹುದು.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಮಡಿಲಲ್ಲಿ ಹುಲಿಯನ್ನು ಮಲಗಿಸಿ ಅದಕ್ಕೆ ಕಚಗುಳಿ ಇಡುತ್ತಿರುವುದನ್ನು ಕಾಣಬಹುದು. ಒಂದು ಕ್ಷಣ ಹುಲಿಯನ್ನು ನೋಡಿದಾಗ ಭಯ ಹುಟ್ಟುವುದು ಖಂಡಿತಾ. ಆದರೆ ಈತ ಹುಲಿಯನ್ನು ಮನೆಯ ಬೆಕ್ಕಿನಂತೆ ಸಾಕಿದ್ದಾನೆ. ಹುಲಿಯೊಂದಿಗೆ ಯುವಕನ ನಂಟು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Belly Rubs 🐯💛 pic.twitter.com/R4ZBaZkXTu
— Nature is Amazing ☘️ (@AMAZlNGNATURE) August 27, 2024
ಇದನ್ನೂ ಓದಿ: ಇದು ಹೊಸ ಶೆಡ್ ಟೀ ಸ್ಟಾಲ್, ಟ್ರೆಂಡ್ ಆಗುತ್ತಿದೆ ಬಾ ಗುರು ಶೆಡ್ ಟೀ ಕುಡಿ
@AMAZlNGNATURE ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 27ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ಎರಡೇ ದಿನದಲ್ಲಿ 5ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ