AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಡಿವೋರ್ಸ್‌ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ, ಕರ್ನಾಟಕ ಹೈಕೋರ್ಟ್​​​ ಮುಂದೆ ಮಕ್ಕಳಿಗಾಗಿ ಅಂಗಲಾಚಿದ ತಂದೆ

ಮೊನ್ನೆಯಷ್ಟೇ ಮಾಜಿ ಹೆಂಡತಿಯೊಬ್ಬಳು ಗಂಡನಿಂದ ತಿಂಗಳಿಗೆ ಆರು ಲಕ್ಷ ಜೀವನಾಂಶ ನೀಡಬೇಕೆಂದು ಕೇಳಿಕೊಂಡು ನ್ಯಾಯಾಧೀಶರ ಮುಂದೆ ಛೀಮಾರಿ ಹಾಕಿಸಿಕೊಂಡ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಡಿವೋರ್ಸ್‌ ಪ್ರಕರಣವೊಂದು ನಡೆದಿದ್ದು, ಮಾಜಿ ಹೆಂಡ್ತಿ ಮಕ್ಳಿಗೆ ತಿಂಗಳಿಗೆ ಲಕ್ಷ ಲಕ್ಷ ಜೀವನಾಂಶ ಕೊಟ್ರೂ ಇಲ್ಲೊಂಬ್ಬ ತಂದೆಗೆ ತನ್ನ ಹೆತ್ತ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವ ಸೌಭಾಗ್ಯವಿಲ್ಲ, ಇದಕ್ಕಾಗಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿ ದಯವಿಟ್ಟು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಒಂದು ಅವಕಾಶ ಕೊಡಿ ಎಂದು ಅಸಹಾಯಕ ತಂದೆ ಬೇಡಿಕೊಂಡಿದ್ದಾರೆ.

Video: ಡಿವೋರ್ಸ್‌ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ, ಕರ್ನಾಟಕ ಹೈಕೋರ್ಟ್​​​ ಮುಂದೆ ಮಕ್ಕಳಿಗಾಗಿ ಅಂಗಲಾಚಿದ ತಂದೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Aug 30, 2024 | 11:40 AM

Share

ಡಿವೋರ್ಸ್‌ ಬಳಿಕ ಗಂಡಸರ ಜೀವನ ಅಂದುಕೊಂಡಷ್ಟು ಸುಲಭವಿಲ್ಲ. ವಿಚ್ಛೇದನದ ಬಳಿ ಮಾಜಿ ಪತ್ನಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳಬೇಕಾಗುತ್ತದೆ. ಹೀಗಿದ್ರೂ ಕೆಲವೊಬ್ಬ ತಂದೆಯರಿಗೆ ತಮ್ಮ ಮಕ್ಕಳ ಜೊತೆ ಸಮಯ ಕಳೆಯುವ ಅವಕಾಶವೇ ಇರುವುದಿಲ್ಲ. ಇಲ್ಲೊಂದು ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಾಜಿ-ಹೆಂಡ್ತಿ ಮಕ್ಳಿಗೆ ತಿಂಗಳಿಗೆ ಲಕ್ಷ ಲಕ್ಷ ಪಾವತಿ ಮಾಡಿದ್ರೂ ಪಾಪ ತಂದೆಯಾದವನಿಗೆ ಮಕ್ಕಳೊಂದಿಗೆ ಸರಿಯಾಗಿ 1 ಗಂಟೆಯೂ ಕೂಡಾ ಸಮಯ ಕಳೆಯುವ ಅವಕಾಶವಿಲ್ಲ. ಇದರಿಂದ ಬೇಸರಗೊಂಡ ಅಸಹಾಯಕ ತಂದೆ ಕರ್ನಾಟಕ ಹೈ ಕೋರ್ಟ್‌ ಮೊರೆ ಹೋಗಿ ದಯವಿಟ್ಟು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಒಂದು ಅವಕಾಶ ಕೊಡಿ ಎಂದು ನ್ಯಾಯಾಧೀಶರ ಮುಂದೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮಕ್ಕಳ ಜೊತೆ ಸಮಯ ಕಳೆಯಲು ಅವಕಾಶ ಕೊಡಿ ಎಂದು ತಂದೆಯೊಬ್ಬರು ಕರ್ನಾಟಕ ಹೈ ಕೋರ್ಟ್‌ ಮೊರೆ ಹೋಗಿದ್ದಾರೆ. ಆ ವ್ಯಕ್ತಿ ತಿಂಗಳಿಗೆ 3.9 ಲಕ್ಷ ಸಂಪಾದನೆ ಮಾಡುತ್ತಾರೆ. ಅದರಲ್ಲಿ 2.35 ಲಕ್ಷ ಹೆಂಡತಿ ಮತ್ತು ಮಕ್ಕಳಿಗೆ ಕೊಡ್ತಿದ್ದಾರೆ. ಮತ್ತು 65 ಸಾವಿರ ಆ ವ್ಯಕ್ತಿಯ ಮನೆಯ ಬಾಡಿಗೆಗೆ ಪಾವತಿಸುತ್ತಿದ್ದಾರೆ. ಒಟ್ಟಾಗಿ ಮಾಜಿ ಪತ್ನಿ ಅವರು ಕಳೆದ ಒಂದು ವರ್ಷದಲ್ಲಿ 3.15 ಕೋಟಿ ಹಣವನ್ನು ಪಾವತಿಸಿದ್ದಾರೆ. ಇಷ್ಟೇಲ್ಲಾ ಖರ್ಚು ವೆಚ್ಚ ನೋಡಿಕೊಂಡರು ಆ ಅಸಹಾಯಕ ತಂದೆಗೆ ಮಕ್ಕಳೊಂದಿಗೆ ವಾರಕ್ಕೆ ಒಂದು ಬಾರಿಯಾದರೂ ಹೆಚ್ಚು ಸಮಯ ಕಳೆಯುವ ಅವಕಾಶ ಇಲ್ಲ. ಇದಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ಕುರಿತ ಪೋಸ್ಟ್‌ ಒಂದನ್ನು ವಿನೀತ್‌ ಕೆ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಅಸಹಾಯಕ ತಂದೆ ಹಾಗೂ ಮಾಜಿ ಪತ್ನಿಯ ಪರ ವಕೀಲರು ವಾದ ಮಂಡಿಸುತ್ತಿರುವ ದೃಶ್ಯವನ್ನು ಕಾಣಬಹುದು. “ವೈರಲ್‌ ವಿಡಿಯೋ ಮಗ ಮಗಳ ಸ್ಕೂಲ್‌ ಫೀಸ್‌ ಪಾವತಿಸುವುದ ಜೊತೆಗೆ ಅವರ ಮನೆಯ 1.5 ಲಕ್ಷ ಬಾಡಿಗೆಯನ್ನು ಸಹ ನಾನೇ ಪಾವತಿಸುತ್ತಿದ್ದೇನೆ. ಆದರೆ ನನ್ಗೆ ಮಕ್ಕಳ ಮುಖ ನೋಡುವ ಅವಕಾಶವೇ ಇಲ್ಲ. ದಯವಿಟ್ಟು ಶನಿವಾರ ಮತ್ತು ಭಾನುವಾರವಾದರೂ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶವನ್ನು ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೀಡಿದ ನ್ಯಾಯಾಧೀಶರು ಸಂಜೆ 3 ರಿಂದ 7 ಗಂಟೆಯವರೆಗೆ ಮಕ್ಕಳನ್ನು ನೋಢಳೂ ಅವಕಾಶವನ್ನು ನೀಡಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿ, ಸ್ಕ್ಯಾಮ್‌ಗಳಿಂದ ಪಾರಾಗಿ; ಸೈಬರ್‌ ಕ್ರೈಮ್‌ಗಳ ಬಗ್ಗೆ ಪೊಲೀಸ್‌ ಅಧಿಕಾರಿಯ ಮಾತು

ಆಗಸ್ಟ್‌ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಷ್ಟೆಲ್ಲಾ ಪರಿಹಾರ ಕೊಟ್ರೂ ಮಕ್ಕಳ ಜೊತೆ ಸಮಯ ಕಳೆಯಲು ತಂದೆ ಬೇಡುವ ಪರಿಸ್ಥಿತಿ ಬಂದಿದೆ ನೋಡಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಡಿವೋರ್ಸ್‌ ತುಂಬಾನೇ ದುಬಾರಿಯಾಗಿದೆʼ ಎಂದು ಹೇಳಿದ್ದಾರೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:39 am, Fri, 30 August 24

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ