Video: ಗಂಡನಿಗೆ ತಾನೇ ಮುಂದೆ ನಿಂತು ಅದ್ಧೂರಿಯಾಗಿ ಮದುವೆ ಮಾಡಿಸಿದ ಹೆಂಡತಿ; ಕಾರಣ ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಯಾವುದೇ ಹೆಣ್ಣಾದ್ರೂ ತನ್ನ ಮುದ್ದಿನ ಗಂಡನನ್ನು ಬೇರೋಬ್ಬರ ಜೊತೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇನ್ನೂ ಪತಿ ಎರಡನೇ ಮದುವೆಯಾಗುತ್ತೇನೆ ಎಂದು ಬಯಸಿದ್ರೆ ಆತನ ಕಥೆ ಮುಗಿಯಿತೆಂದೇ ಅರ್ಥ. ಅಂತದ್ರಲ್ಲಿ ಇಲ್ಲೊಬ್ಳು ತ್ಯಾಗಮಯಿ ಪತ್ನಿ ತಾನೇ ಮುಂದೆ ನಿಂತು ತನ್ನ ಗಂಡನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾಳೆ. ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆ ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

Video: ಗಂಡನಿಗೆ ತಾನೇ ಮುಂದೆ ನಿಂತು ಅದ್ಧೂರಿಯಾಗಿ ಮದುವೆ ಮಾಡಿಸಿದ ಹೆಂಡತಿ; ಕಾರಣ ಕೇಳಿದ್ರೆ ದಂಗಾಗೋದು ಗ್ಯಾರಂಟಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 29, 2024 | 4:28 PM

ಪತಿಯ ವಿಚಾರದಲ್ಲಿ ಪ್ರತಿಯೊಬ್ಬ ಹೆಣ್ಣು ಕೂಡಾ ಪೊಸೆಸಿವ್‌ ಆಗಿರ್ತಾಳೆ. ಹೌದು ತನ್ನ ಗಂಡನನ್ನು ಯಾರಾದ್ರೂ ಬುಟ್ಟಿಗೆ ಹಾಕಿಕೊಂಡರೆ ಅಥವಾ ಗಂಡನೇ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡರೆ ಹೆಂಡತಿಯಾದವಳು ಈ ವಿಚಾರವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ. ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾಳೆ. ಆದ್ರೆ ಇಲ್ಲಿ ಇದಕ್ಕೆ ತದ್ವಿರುದ್ಧವಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಪತ್ನಿಯೇ ತನ್ನ ಮುದ್ದಿನ ಗಂಡನಿಗೆ ಅದ್ಧೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ. ಹೌದು ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಂತಹ ವಿಷಯ ತಿಳಿದ ಈಕೆ ಆ ಯುವತಿಗೆ ತನ್ನ ಪತಿಯೊಂದಿಗೆಯೇ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಅಚ್ಚರಿಯ ಘಟನೆ ತೆಲಂಗಾಣದ ಮಹಬೂಬಾಬಾದ್‌ ಜಿಲ್ಲೆಯ ಚಿನ್ನಗುಡೂರಿನ ಉಗ್ಗಂಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಪತ್ನಿಯೊಬ್ಬಳು ತಾನೇ ಮುಂದೆ ನಿಂತು ತನ್ನ ಮುದ್ದಿನ ಗಂಡನಿಗೆ ಬೇರೊಬ್ಬ ಯುವತಿಯೊಂದಿಗೆ ಎರಡನೇ ಮದುವೆ ಮಾಡಿಸಿದ್ದಾಳೆ. ಬುದ್ಧಿಮಾಂದ್ಯ ಯುವತಿ ತನ್ನ ಗಂಡನನ್ನು ಇಷ್ಟ ಪಡುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಆಸೆಯನ್ನು ಈಡೇರಿಸಲು ಮಹಿಳೆಯೊಬ್ಬಳು ತನ್ನ ಗಂಡನಿಗೆ ಆಕೆಯೊಂದಿಗೆ ಮದುವೆ ಮಾಡಿಸಿದ್ದಾಳೆ.

ಇದನ್ನೂ ಓದಿ: ಕಂಪನಿ ಅಸೆಂಬ್ಲಿಯಲ್ಲಿ ʼಸೆಕ್ಸಿ ಸಾಂಟಾಸ್‌ʼ ತಂಡದಿಂದ ಮಾದಕ ನೃತ್ಯ ಪ್ರದರ್ಶನ, ಟೀಕೆಗೆ ಗುರಿಯಾದ ಸುದ್ದಿ ವಾಹಿನಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಉಗ್ಗಂಪಲ್ಲಿ ಗ್ರಾಮದ ಸುರೇಶ್‌ ಮತ್ತು ಸರಿತಾ ಎಂಬವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರು ಮಗ ಮತ್ತು ಮಗಳೊಂದಿಗೆ ಸುಂದರವಾದ ಜೀವನ ನಡೆಸುತ್ತಿದ್ದರು. ಇತ್ತೀಚಿಗೆ ಮಹಬೂಬಾಬಾದ್‌ ಪಟ್ಟಣದಲ್ಲಿರುವ ಸುರೇಶ್‌ ಸಂಬಂಧಿ ಮಗಳಾದ ಸಂಧ್ಯಾ ಎಂಬವಳು ತನ್ನ ಸೋದರ ಮಾವನಾದ ಸುರೇಶ್‌ ಅವರನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಈ ವಿಷಯ ತಿಳಿದು ಆಕೆಯ ಪೋಷಕರು ದಯವಿಟ್ಟು ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸುವೆಯಾ ಎಂದು ಸರಿತಾ ಬಳಿ ಕೇಳಿಕೊಂಡಿದ್ದಾರೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿಯಾಗಿರುವುದರಿಂದ ಆಕೆಯ ಇಷ್ಟವನ್ನು ನೆರವೇರಿಸಲು ಹಾಗೂ ಆಕೆಗೆ ಒಂದೊಳ್ಳೆ ಜೀವನವನ್ನು ಕಲ್ಪಿಸಬೇಕೆಂದು ಮಾನವೀಯ ದೃಷ್ಟಿಯಿಂದ ಸರಿತಾ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿ, ನಿನ್ನೆ (ಆಗಸ್ಟ್‌ 28) ಹತ್ತಿರದ ದೇವಸ್ಥಾನದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಪತಿ ಸುರೇಶ್‌ ಹಾಗೂ ಸಂಧ್ಯಾಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ. ಈ ಎರಡನೇ ಮದುವೆ ಸುದ್ದಿ ಇದೀಗ ಎಲ್ಲೆಗೆ ವೈರಲ್‌ ಆಗುತ್ತಿದೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ