Viral Video: ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ನೋಡಿ ಸೆಲ್ಯೂಟ್ ಎಂದ ನೆಟ್ಟಿಗರು

ಒಂದೇ ಕಾಲಿನಲ್ಲಿ ಸೈಕಲ್​ ತುಳಿಯುತ್ತ ಸಾಗಿದ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಹೃದಯಸ್ಪರ್ಶಿ ವಿಡಿಯೋ ನೀವೂ ನೋಡಿ..

Viral Video: ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ನೋಡಿ ಸೆಲ್ಯೂಟ್ ಎಂದ ನೆಟ್ಟಿಗರು
ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಸಾಗಿದ ವ್ಯಕ್ತಿ
Edited By:

Updated on: Oct 12, 2021 | 1:06 PM

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ದೃಶ್ಯಗಳಲ್ಲಿ ಕೆಲವು ಮನಗೆಲ್ಲುತ್ತವೆ. ತನಗೆ ಕಾಲಿಲ್ಲ ಎಂದು ಚಿಂತಿಸದೇ ಧೈರ್ಯದಿಂದ ಮುನ್ನುಗ್ಗಿದ ನರೇಶ್ ಎಂಬ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈತ ಒಂದೇ ಕಾಲನ್ನು ಹೊಂದಿದ್ದರೂ ಸಹ ದೃತಿಗೆಡದೇ ಛಲದಿಂದ ಸೈಕಲ್ ಏರಿ ಕುಳಿತಿದ್ದಾನೆ. ಒಂದು ಕಾಲಿನಲ್ಲಿ ಪೆಡಲ್ ತುಳಿಯುತ್ತಾ, ಮತ್ತೊಂದು ಪೆಡಲ್ ತುಳಿಯಲು ಸಹಾಯವಾಗುವಂತೆ ಮತ್ತೊಂದು ಕೋಲು ಹಿಡಿದು ಆಗುತ್ತಿದ್ದಾನೆ. ಈತನ ಧೈರ್ಯ ಮೆಚ್ಚಿದ ನೆಟ್ಟಿಗರು ಈತನ ಛಲವನ್ನು ಮೆಚ್ಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಗಮನಿಸುವಂತೆ ನರೇಶ್ ಒಂದೇ ಕಾಲಿನಲ್ಲಿ ಸೈಕಲ್ ತುಳಿಯುತ್ತಿರುವುದನ್ನು ನೋಡಬಹುದು. ಪೆಡಲ್​ಗಳನ್ನು ತುಳಿಯಲು ಕೋಲನ್ನು ಬಳಸುತ್ತಿದ್ದಾನೆ. ಒಂದು ಕಾಲು ಕಳೆದುಕೊಂಡ ಈತ ನೊಂದದೇ ಧೈರ್ಯದಿಂದ ಜೀವನದಲ್ಲಿ ಮುನ್ನುಗ್ಗುತ್ತಿದ್ದಾನೆ. ಈತನ ಛಲಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಎಂದಿಗೂ ಬಿಟ್ಟುಕೊಡಬೇಡಿ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ನರೇಶ್ ಎಂಬ ವ್ಯಕ್ತಿಯ ಧೈರ್ಯವನ್ನು ಮತ್ತು ಛಲವನ್ನು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

Viral News: ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ! ಹೃದಯಸ್ಪರ್ಶಿ ಸ್ಟೋರಿ ಓದಿ

Viral News: ಶಾಲೆಯ ಮಕ್ಕಳೊಂದಿಗೆ ಸ್ನೇಹ ಬೆಳೆಸಿದ ಕಾಡು ಗಿಳಿ; ಹೃದಯಸ್ಪರ್ಶಿ ಕಥೆಯಿದು