ಕಾಫಿ ಕಪ್​ನಲ್ಲಿ ಸಿಕ್ತು ಚಿಕನ್​​ ಪೀಸ್; ಕಂಡು ತಬ್ಬಿಬ್ಬಾದ ಗ್ರಾಹಕ; ಪೋಟೊ ವೈರಲ್​

| Updated By: ವಿವೇಕ ಬಿರಾದಾರ

Updated on: Jun 04, 2022 | 11:06 PM

Zomato ಮೂಲಕ ಥರ್ಡ್​ ವೇವ್​ ಆಫ್​​ ಎಂಬ ಹೊಟೆಲ್​​ ನಿಂದ ಕಾಫಿ ಆರ್ಡರ್ ಮಾಡಿದ್ದಾರೆ. ಕಾಫಿಯನ್ನು ಕುಡಿಯಲು ಹೋದಾಗ ಚಿಕ್ಕ ಚಿಕನ್ ತುಂಡ ಪತ್ತೆಯಾಗಿದೆ.

ಕಾಫಿ ಕಪ್​ನಲ್ಲಿ ಸಿಕ್ತು ಚಿಕನ್​​ ಪೀಸ್; ಕಂಡು ತಬ್ಬಿಬ್ಬಾದ ಗ್ರಾಹಕ; ಪೋಟೊ ವೈರಲ್​
ಕಾಫಿ ಕಪ್​ನಲ್ಲಿ ಚಿಕನ್​ ಪೀಸ್​​
Follow us on

ನಿಮ್ಮ ಉತ್ತಮ ಕ್ಷಣಗಳನ್ನು ಕಾಫಿ (Coffee)ಯೊಂದಿಗೆ ಕಳೆಯಲು ಬಹಳ ಇಷ್ಟ ಪಡುತ್ತಿರಿ. ಕಾಫಿ  ಸೇವಿಸುವಾಗ ಚಹಾದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೆ ಸಾಕು ನಿಮಗೆ ಸಾಕಷ್ಟು ನೋವಾಗುತ್ತದೆ. ನಿಮ್ಮ ಉತ್ತಮ ಮೂಡ್ ಹಾಳಾಗುತ್ತದೆ. ಬೇಸರ, ಸಿಟ್ಟು ಸಹಜವಾಗಿ ಬರುತ್ತದೆ. ಇನ್ನು ಕಾಫಿದಲ್ಲಿ ಇರುವೆ, ನೊಣ ಬಿದ್ದಿರುವುದನ್ನು ನೋಡಿದ್ದೇವೆ ಮತ್ತು ಎಷ್ಟೋ ಸಾರಿ ಅದನ್ನು ತಗೆದು ಕುಡಿದಿದ್ದೇವೆ. ಆದರೆ ಇಲ್ಲಿ ಚಹಾದಲ್ಲಿ ಚಿಕನ್​​ ಪೀಸ್​ ದೊರೆತಿದೆ.

ಹೌದು  ಸುಮಿತ್ ಎಂಬ ಟ್ವಿಟರ್ ಬಳಕೆದಾರರಿಗೆ ಅವರ ಕಾಫಿಯಲ್ಲಿ ಚಿಕನ್ ತುಂಡು ಸಿಕ್ಕಿದೆ. ಈ ಕುರಿತು ಸುಮಿತ್ ಸೌರಭ್ ಟ್ವೀಟ್ ಮಾಡಿ  Zomato ಮೂಲಕ ಥರ್ಡ್​ ವೇವ್​ ಆಫ್​​ ಎಂಬ ಹೊಟೆಲ್​​ ನಿಂದ ಕಾಫಿ ಆರ್ಡರ್ ಮಾಡಿದ್ದಾರೆ. ಆದರೆ, ಕಾಫಿಯ ರುಚಿ ನೋಡಿದ ನಂತರ, ಸಸ್ಯಾಹಾರಿಯಾದ ಅವರ ಪತ್ನಿ, ಅದರಲ್ಲಿ ಚಿಕ್ಕ ಚಿಕನ್ ತುಂಡನ್ನು ಪತ್ತೆ ಮಾಡಿದರು. ಸುಮಿತ್ ಕಾಫಿ ಕಪ್‌ನ ಮುಚ್ಚಳದ ಮೇಲೆ ತುಂಡು ಹಾಕಿದ್ದಾರೆ. @zomato, @thirdwaveindia ಅಂತ ಟ್ಯಾಗ್​ ಬಳಸಿದ್ದಾರೆ.

ಇದನ್ನು ಓದಿ: ರೈಲ್ವೆ ಹಳಿ ದಾಟುವಾಗ ವೇಗವಾಗಿ ಬಂದ ರೈಲು; 3 ಮಕ್ಕಳ ಪ್ರಾಣ ಉಳಿದಿದ್ದೇ ಅಚ್ಚರಿ!

ಕಾಫಿಯಲ್ಲಿ ಒಂದು ಚಿಕನ್ ತುಂಡು. ಕರುಣಾಜನಕ. ನಿಮ್ಮೊಂದಿಗಿನ ನನ್ನ ಒಡನಾಟವು ಇಂದು ಅಧಿಕೃತವಾಗಿ ಕೊನೆಗೊಂಡಿದೆ” ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಅವರ ಪೋಸ್ಟ್‌ಗೆ ಕಾಫಿ ಪ್ಲೇಸ್, ಥರ್ಡ್ ವೇವ್ ಇಂಡಿಯಾ ಕೂಡ ಟ್ವಿಟರ್‌ನಲ್ಲಿ ಉತ್ತರಿಸಿದೆ.

“ಹಾಯ್ ಸುಮಿತ್. ಇದಕ್ಕಾಗಿ ನಾವು ಅತ್ಯಂತ ವಿಷಾದಿಸುತ್ತೇವೆ. DM ಮೂಲಕ ನಿಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ವಿನಂತಿಸಲಾಗುತ್ತಿದೆ. ನಮ್ಮ ತಂಡವು ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ. ಧನ್ಯವಾದಗಳು” ಎಂದು ಥರ್ಡ್ ವೇವ್ ಇಂಡಿಯಾ ಬರೆದಿದೆ.

ಇದನ್ನು ಓದಿ: ನಿವೃತ್ತಿ ಹೊಂದಿದ ಶಿಕ್ಷಕಿಗೆ ಇಡೀ ಶಾಲೆ ಹೇಗೆ ಬೀಳ್ಕೊಟ್ಟಿತು ಎಂದು ನೀವೇ ನೋಡಿ

“ನನಗೆ ನಿಜವಾಗಿಯೂ ಕುತೂಹಲವಿದೆ, ಜಗತ್ತಿನಲ್ಲಿ, ವಿಭಿನ್ನವಾದ ಕೌಂಟರ್/ಯಂತ್ರದಲ್ಲಿ ತಯಾರಿಸುವ ಕಾಫಿಯಲ್ಲಿ ಚಿಕನ್ ತುಂಡುಗಳು ಹೇಗೆ ಇರುತ್ತವೆ? ಇದನ್ನು ಉದ್ದೇಶಪೂರ್ವಕವಾಗಿ ಮಾಡದ ಹೊರತು, ತಾನಾಗಿಯೇ ಆಗಲು ಸಾಧ್ಯವಿಲ್ಲ ಎಂದು ”ಒಬ್ಬ ಬಳಕೆದಾರರು ಬರೆದಿದ್ದಾರೆ.

ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ, “ನಾನು ಇದನ್ನು ಅನುಭವಿಸಬಹುದು. ನಾನು ಕೂಡ ಸಸ್ಯಾಹಾರಿ ಮತ್ತು ಇದು ನನಗೆ ಸಂಭವಿಸಿದರೆ. ನಾನು ಈ ಅಂಗಡಿಯಿಂದ ಇನ್ನೂ ಮುಂದೆ ಏನನ್ನೂ ಆರ್ಡರ್ ಮಾಡುವುದಿಲ್ಲ ಎಂದು ಬರೆದಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 pm, Sat, 4 June 22