Dinosaur Footprint : ರೆಸ್ಟೊರೆಂಟ್‌ನಲ್ಲಿ ತನ್ನ ಮೇಜಿನ ಕೆಳಗೆ 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆಗುರುತನ್ನು ವ್ಯಕ್ತಿಯೊಬ್ಬ ಕಂಡಿದ್ದಾನೆ ಎನ್ನುವ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓವ್ ಹೊಂಗ್ಟಾವೋ ಎಂಬ ಗ್ರಾಹಕ ಸಿಚುವಾನ್ ಪ್ರಾಂತ್ಯದ ಲೆಶಾನ್ ನಗರದ ರೆಸ್ಟೋರೆಂಟ್‌ಗೆ ಹೋಗುತ್ತಾನೆ. ತಾನು ಕುಳಿತ ಟೇಬಲ್ನಡಿ ಗಮನಿಸುತ್ತಿದ್ಧಾಗ, ಅವನ ಸೂಕ್ಷ್ಮ ಕಣ್ಣಿಗೆ 100 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಡೈನೋಸಾರ್ ಹೆಜ್ಜೆ ಕಂಡಿದೆ. ಡಾ. ಲಿಡಾ ಝಿಂಗ್ ನೇತೃತ್ವದ ತಜ್ಞರ ತಂಡವು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿ ಇವು ಸೌರೋಪಾಡ್‌ಗಳ ಹೆಜ್ಜೆಗುರುತುಗಳು ಎಂದು ತ್ರಿಡಿ ಸಹಾಯದಿಂದ ದೃಢಪಡಿಸಿದೆ.
ಹೆಜ್ಜೆಗುರುತುಗಳು ಎರಡು ಜಾತಿಯ ಸೌರೋಪಾಡ್‌ಗಳಿಗೆ ಸೇರಿವೆ. ಬ್ರಾಂಟೊಸಾರಸ್‌ಗಳನ್ನು ಅತಿದೊಡ್ಡ ಭೂನಿವಾಸಿ ಪ್ರಾಣಿ ಎಂದು ಪರಿಗಣಿಸಲಾಗಿದೆ. 145ರಿಂದ 66 ಮಿಲಿಯನ್ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಈ ಪ್ರಾಣಿಗಳು ಎಂಟು ಮೀಟರ್ ಉದ್ದ, ಚಿಕ್ಕ ತಲೆ ಮತ್ತು ಉದ್ದ ಕತ್ತನ್ನು ಹೊಂದಿದ್ದವು ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ.
If you need an excuse to head out to brunch this weekend, consider the possibility that your meal may cause you to expand scientific discovery and research.
A diner discovered 100 million-year-old dinosaur footprint in a restauranthttps://t.co/4hyFOBHvtN pic.twitter.com/CCvEsaK8ag
— MU-Peter Shimon ? (@MU_Peter) July 23, 2022
ಚೀನಾ ಯೂನಿವರ್ಸಿಟಿ ಆಫ್ ಜಿಯೋಸೈನ್ಸ್‌ನ ಸಹ ಪ್ರಾಧ್ಯಾಪಕ ಝಿಂಗ್, ‘ಇದು ಅಪರೂಪದ ವಿಷಯ. ಏಕೆಂದರೆ ನಗರಗಳಲ್ಲಿನ ಕಟ್ಟಡ ನಿರ್ಮಾಣ ಕಾರ್ಯಗಳಿಂದಾಗಿ ಪಳೆಯುಳಿಕೆಗಳನ್ನು ಅಧ್ಯಯನ ಮಾಡಲು ತಜ್ಞರಿಗೆ ಕಷ್ಟವಾಗುತ್ತಿದೆ. ಈ ಸುದ್ದಿ ತಿಳಿದು ನಾವು ಸ್ಥಳಕ್ಕೆ ಹೋದಾಗ, ಈ ಪ್ರಾಣಿಯ ಹೆಜ್ಜೆಗುರುತುಗಳು ತುಂಬಾ ಆಳ ಮತ್ತು ಸ್ಪಷ್ಟವಾಗಿ ಗೋಚರಿಸಿದವು’ ಎಂದು ಸಿಎನ್‌ಎನ್‌ಗೆ ಹೇಳಿದ್ದಾರೆ.
ಈ ಬೆಳವಣಿಗೆಯ ನಂತರ ಡೈನೋಸಾರ್ ಹೆಜ್ಜೆಗುರುತುಗಳನ್ನು ಗುರುತು ಮಾಡಿ ಆ ಸ್ಥಳವನ್ನು ಸಂರಕ್ಷಿಸಲು ಬೇಲಿಯನ್ನು ನಿರ್ಮಿಸಲಾಗಿದೆ. ಪ್ರಸ್ತುತ ರೆಸ್ಟೋರೆಂಟ್ ರೂಪುಗೊಳ್ಳುವ ಮೊದಲು ಕೋಳಿ ಫಾರ್ಮ್ ಆಗಿತ್ತು.
ಇನ್ನಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:23 pm, Tue, 16 August 22