ಗೂಗಲ್​​ನಲ್ಲಿ ಕೆಲಸಕ್ಕಾಗಿ 39 ಬಾರಿ ಪ್ರಯತ್ನಿಸಿದ; ಮರಳಿ ಯತ್ನವ ಮಾಡಿ ಕೆಲಸ ಗಿಟ್ಟಿಸಿಕೊಂಡ ಯುವಕನ ಕತೆ ಇಲ್ಲಿದೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 27, 2022 | 5:31 PM

ಗೂಗಲ್​​ಗೆ ಕಳುಹಿಸಿರುವ ಇಮೇಲ್​​ಗಳ ಸ್ಕ್ರೀನ್​​ಶಾಟ್ ನೋಡಿದರೆ ಕೋಹೆನ್ 2019 ಆಗಸ್ಟ್ 25ರಂದು ಮೊದಲ ಬಾರಿ ಇಮೇಲ್ ಕಳುಹಿಸಿದ್ದು, ಅದು ತಿರಸ್ಕೃತವಾಗಿತ್ತು. ಇದಾದನಂತರ ಅವರು 2019 ಸೆಪ್ಟೆಂಬರ್​​ನಲ್ಲಿ ಎರಡು ಬಾರಿ ಇಮೇಲ್ ಕಳುಹಿಸಿದ್ದು ಅದೆರಡೂ ತಿರಸ್ಕೃತವಾಗಿದೆ.

ಗೂಗಲ್​​ನಲ್ಲಿ ಕೆಲಸಕ್ಕಾಗಿ 39 ಬಾರಿ ಪ್ರಯತ್ನಿಸಿದ; ಮರಳಿ ಯತ್ನವ ಮಾಡಿ ಕೆಲಸ ಗಿಟ್ಟಿಸಿಕೊಂಡ ಯುವಕನ ಕತೆ ಇಲ್ಲಿದೆ
ಲಿಂಕ್ಡ್ ಇನ್ ಪೋಸ್ಟ್
Follow us on

ಗೂಗಲ್​​ನಲ್ಲಿ (Google) ಕೆಲಸ ಗಿಟ್ಟಿಸಬೇಕೆಂಬ ಅದಮ್ಯ ಆಸೆಯಿಂದ ಟೈಲರ್ ಕೋಹೆನ್ (Tyler Cohen ) ಎಂಬ ಯುವಕ ಮತ್ತೆ ಮತ್ತೆ ಗೂಗಲ್​​ಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದ. ಅದು ಒಂದು ಅಥವಾ ಎರಡು ಬಾರಿ ಅಲ್ಲ ಬರೋಬ್ಬರಿ 39 ಬಾರಿ. ಅಂತೂ ಕೊನೆಗೆ ಆತನ ಕನಸು ಈಡೇರಿದ್ದು ಗೂಗಲ್​​ನಲ್ಲಿ ಕೆಲಸ ಸಿಕ್ಕಿದೆ. ಗೂಗಲ್ ಜತೆ ಇಮೇಲ್ ಸಂವಹನ ಮಾಡಿದ್ದರ ಸ್ಕ್ರೀನ್ ಶಾಟ್​​ನ್ನು ಲಿಂಕ್ಡ್​​ಇನ್​​ನಲ್ಲಿ ಶೇರ್ ಮಾಡಿರುವ ಟೈಲರ್ ಕೋಹೆನ್ , ಜುಲೈ 19ರಂದು ನನಗೆ ಗೂಗಲ್​​ ನಲ್ಲಿ ಕೆಲಸ ಸಿಕ್ಕಿದೆ ಎಂದಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ವಾಸಿಸುತ್ತಿರುವ ಕೋಹೆನ್, ಗೂಗಲ್​​ನಲ್ಲಿ ಕೆಲಸ ಸಿಗುವುದಕ್ಕಿಂತ ಮುನ್ನ ಡೋರ್​​ಡಾಶ್​​ನಲ್ಲಿ ಸ್ಟ್ರಾಟಜಿ ಆಂಡ್ ಓಪರೇಷನ್ ವಿಭಾಗದಲ್ಲಿ ಅಸೋಸಿಯೇಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಪರಿಶ್ರಮ ಮತ್ತು ಹುಚ್ಚುತನ ನಡುವೆ ತೆಳುವಾದ ಗೆರೆಯೊಂದಿದೆ. ನನ್ನಲ್ಲಿ ಇರುವುದು ಯಾವುದು ಎಂಬುದನ್ನು ನಾನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇನೆ. 39 ನಿರಾಕರಣೆ, 1 ಸ್ವೀಕೃತಿ ಎಂದು ಲಿಂಕ್ಡ್ ಇನ್ ನಲ್ಲಿ ಈತ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಜತೆ #acceptedoffer, #application ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದು 36,000ಕ್ಕಿಂತಲೂ ಹೆಚ್ಚು ಜನ ಲೈಕ್ ಮಾಡಿದ್ದು 259 ಮಂದಿ ಶೇರ್ ಮಾಡಿದ್ದಾರೆ.

ಗೂಗಲ್​​ಗೆ ಕಳುಹಿಸಿರುವ ಇಮೇಲ್​​ಗಳ ಸ್ಕ್ರೀನ್​​ಶಾಟ್ ನೋಡಿದರೆ ಕೋಹೆನ್ 2019 ಆಗಸ್ಟ್ 25ರಂದು ಮೊದಲ ಬಾರಿ ಇಮೇಲ್ ಕಳುಹಿಸಿದ್ದು, ಅದು ತಿರಸ್ಕೃತವಾಗಿತ್ತು. ಇದಾದನಂತರ ಅವರು 2019 ಸೆಪ್ಟೆಂಬರ್​​ನಲ್ಲಿ ಎರಡು ಬಾರಿ ಇಮೇಲ್ ಕಳುಹಿಸಿದ್ದು ಅದೆರಡೂ ತಿರಸ್ಕೃತವಾಗಿದೆ. ಆಮೇಲೆ 2002 ಜೂನ್ ತಿಂಗಳಲ್ಲಿ ಮತ್ತೆ ಇಮೇಲ್ ಕಳುಹಿಸಿದ್ದು, ಹೀಗೆ ಹಲವಾರು ಇಮೇಲ್ ಕಳುಹಿಸಿದ ನಂತರ 2022 ಜುಲೈ 19 ರಂದು ಗೂಗಲ್ ಅವರಿಗೆ ಕೆಲಸ ನೀಡಿದೆ.