Viral Video: ಪ್ರೇಯಸಿಯ ಹೆಸರನ್ನು ತುಟಿಯ ಒಳಗೆ ಹಚ್ಚೆ ಹಾಕಿಸಿಕೊಂಡ ಆಸಾಮಿ

ಈ ಪ್ರೀತಿಯಲ್ಲಿ ಬಿದ್ದಿರುವ ಜನರು ಅಥವಾ ಮದುವೆಯಾಗಿರುವಂತಹ ಜೋಡಿ ಹಕ್ಕಿಗಳು ತಮ್ಮ ಸಂಗಾತಿಯ ಹೆಸರನ್ನು ಅಥವಾ ಅವರ ಹೆಸರಿನ ಮೊದಲ ಅಕ್ಷರವನ್ನು ಎದೆಯಲ್ಲಿ ಅಥವಾ ಕೈ ಯಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇಂತಹದ್ದನ್ನೆಲ್ಲಾ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಬ್ಬ ಆಸಾಮಿ, ನಮ್ದು ಸ್ವಲ್ಪ ಡಿಫರೆಂಟ್ ಆಗಿರ್ಲಿ ಅಂತ ಪ್ರೇಯಸಿಯ ಹೆಸರನ್ನು ಒಳ ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.

Viral Video: ಪ್ರೇಯಸಿಯ ಹೆಸರನ್ನು ತುಟಿಯ ಒಳಗೆ  ಹಚ್ಚೆ ಹಾಕಿಸಿಕೊಂಡ ಆಸಾಮಿ
Updated By: ಅಕ್ಷತಾ ವರ್ಕಾಡಿ

Updated on: Feb 28, 2024 | 6:47 PM

ಪ್ರೀತಿಯ ಬಲೆಯಲ್ಲಿ ಬಿದ್ದವರು ತಮ್ಮ ಪ್ರೇಮಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ, ಎಂತಹ ಸಾಹಸಕ್ಕೂ ಕೈ ಹಾಕುತ್ತಾರೆ. ಹೆಚ್ಚಿನವರು ಪ್ರೇಮಿಗಳಿಗಾಗಿ ತಮ್ಮ ಸ್ವಭಾವ, ಫ್ಯಾಶನ್ ಬದಲಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರೇಮಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ನೀವು ಕೂಡಾ ಇಂತಹ ಪ್ರೇಮಿಗಳನ್ನು ನೋಡಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ಜನರು ತಮ್ಮ ಪ್ರೇಮಿ ಅಥವಾ ಸಂಗಾತಿಯ ಹೆಸರನ್ನು ಅಥವಾ ಹೆಸರಿನ ಮೊದಲ ಅಕ್ಷರವನ್ನು ಎದೆಯಲ್ಲಿ ಅಥವಾ ಕೈಯಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಭೂಪ ತನ್ನ ಪ್ರೇಯಸಿಯ ಹೆಸರನ್ನು ಒಳ ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈತನ ಈ ಹುಚ್ಚು ಸಾಹಸವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಹಚ್ಚೆ (Tattoo) ಹಾಕಿಸಿಕೊಳ್ಳುವುದು ಈಗ ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ಜನರು ಕೈ, ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಪ್ರೇಮಿಗಳಂತೂ ತಮ್ಮ ಪ್ರಿಯಕರ ಅಥವಾ ಪ್ರಿಯತಮನ ಹೆಸರನ್ನು ಹೆಚ್ಚಾಗಿ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಪ್ರೇಯಸಿಯ ಹೆಸರನ್ನು ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಒಳತುಟಿಯ ಮೇಲೆ ತನ್ನ ಪ್ರೇಯಸಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಟ್ಯಾಟೂ ಕಲಾವಿದ ಅಭಿಶೇಕ್ ಸಪ್ಕಲ್ (@tatto_abhishek_sapkal_4949_) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಲವ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಮೊದಲು ಟ್ಯಾಟೂ ಕಲಾವಿದ ಯುವಕ ತುಟಿಯ ಒಳಭಾಗದಲ್ಲಿ ಅಮೃತ ಅನ್ನೋ ಹಸರನ್ನು ಬರೆದು, ನಂತರ ಆ ಹೆಸರಿನ ಮೇಲೆ ಹಚ್ಚೆಯನ್ನು ಬಿಡಿಸುತ್ತಿರುವಂತಹ ದೃಶ್ಯವನ್ನು ಕಾಣಬಬಹುದು.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 69 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಬಲೇ ಬುದ್ಧಿವಂತ ಇವನು, ಬ್ರೇಕ್ ಆದ್ರೆ ಏನ್ ಗತಿ ಅಂತ ತುಟಿ ಒಳಭಾಗದಲ್ಲಿ ಹಚ್ಚೆ ಹಾಕಿಸಿದ್ದಾನೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತೆಂತಹ ಹುಚ್ಚರಿದ್ದಾರಲ್ಲವೇʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಓ ಮಾರಾಯ ಮೊದ್ಲು ಹಲ್ಲುಗಳನ್ನು ಸ್ವಚ್ಛಗೊಳಿಸು, ನಂತ್ರ ಟ್ಯಾಟು ಹಾಕಿಸುವಂತೆʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಈತನ ಹುಚ್ಚುತನವನ್ನು ಕಂಡು ನಕ್ಕಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ