ಜಗತ್ತಿನ ಅತಿ ಹೆಚ್ಚು ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್​ ದಾಖಲೆ ಮಾಡಿದ ವ್ಯಕ್ತಿ

| Updated By: Pavitra Bhat Jigalemane

Updated on: Feb 18, 2022 | 9:40 AM

ಈ ಮೊದಲು ಜಪಾನಿನ ಕೋಜಿ ನಕಾವೋ ಎನ್ನುವವರು 250 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್​ ದಾಖಲೆ ಮಾಡಿದ್ದರು ಇದೀಗ ಅವರ ದಾಖಲೆಯನ್ನು ಮುರಿದು  ಏರಿಯಲ್​ ಜಾಹಿ 299 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಜಗತ್ತಿನ ಅತಿ ಹೆಚ್ಚು ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್​ ದಾಖಲೆ ಮಾಡಿದ ವ್ಯಕ್ತಿ
ಸ್ಟ್ರಾಬೆರಿ
Follow us on

ಇಸ್ರೇಲ್​ನ (Israel)ವ್ಯಕ್ತಿಯೋಬ್ಬರು ಜಗತ್ತಿನ ಅತೀ ಹೆಚ್ಚು ತೂಕದ ಸ್ಟ್ರಾಬೆರಿ(Strawberry) ಹಣ್ಣನ್ನು ಬೆಳೆದು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್(Guinness World Record)​ ಮಾಡಿದ್ದಾರೆ. ಈ ವ್ಯಕ್ತಿ ಬೆಳೆಸಿದ ಸ್ಟ್ರಾಬೆರಿ ಹಣ್ಣು  ಬರೋಬ್ಬರಿ 299 ಗ್ರಾಂ ತೂಕವಿದೆ ಎಂದು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​ ಸಂಸ್ಥೆ ತಿಳಿಸಿದೆ. ಇದರ ವಿಡಿಯೋವನ್ನು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​ ತನ್ನ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.

ಇಸ್ರೇಲ್​ನ ಕಡಿಮಾ ಜೊರಾನ್​ ಎನ್ನುವ ಪ್ರದೇಶದ ಏರಿಯಲ್​ ಜಾಹಿ ಎನ್ನುವ ವ್ಯಕ್ತಿ 289 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದಿದ್ದಾರೆ. ಇದು ಕಾಂಡವನ್ನೂ ಸೇರಿಸಿ 299 ಗ್ರಾಂ ತೂಕವಿದೆ ಎಂದು ಹೇಳಲಾಗಿದೆ.  ಈ ಅತಿ ದೊಡ್ಡ ಸ್ಟ್ರಾಬೆರಿಯನ್ನು ಇಲಾನ್​​ ಕುಟುಂಬಕ್ಕೆ  ಸೇರಿದ ಹಣ್ಣು ಎಂದು ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​ ತಿಳಿಸಿದೆ.

ಜಗತ್ತಿನ ಅತೀ ಭಾರದ ಸ್ಟ್ರಾಬೆರಿ ಹಣ್ಣನ್ನು ತೋರಿಸುವಾಗ ಮೊದಲು ಐಫೋನ್​ ತೂಕವನ್ನು ನೋಡಲಾಯಿತು ಅದು 294 ಗ್ರಾಂ ತೂಕವನ್ನು ತೋರಿಸಿತ್ತು ನಂತರ ಸ್ಟ್ರಾಬೆರಿಯ ಉದ್ದ, ಅಗಲ,  ಮತ್ತು ಎತ್ತರವನ್ನು ಅಳತೆ ಮಾಡಿದರು. ಸದ್ಯ  299 ಗ್ರಾಂ ತೂಕದ ಸ್ಟ್ರಾಬೆರಿ ಗಿನ್ನಿಸ್​ ವಲ್ರ್ಡ್​ ರೆಕಾರ್ಡ್​ ಮಾಡುವ ಮೂಲಕ ಜಗತ್ತಿನಾದ್ಯಂತ ಸುದ್ದಿಯಾಗಿದೆ, ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್​ ಆಗಿದೆ.

ಈ ಮೊದಲು ಜಪಾನಿನ ಕೋಜಿ ನಕಾವೋ ಎನ್ನುವವರು 250 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್​ ದಾಖಲೆ ಮಾಡಿದ್ದರು ಇದೀಗ ಅವರ ದಾಖಲೆಯನ್ನು ಮುರಿದು  ಏರಿಯಲ್​ ಜಾಹಿ 299 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ

Published On - 9:39 am, Fri, 18 February 22