ಇಲ್ಲೊಬ್ಬ ವ್ಯಕ್ತಿ ಮರವನ್ನು ಕಾಲಿನಿಂದ ಒದೆಯುತ್ತಲೇ ಇದ್ದಾನೆ! ಮುಂದೇನಾಯ್ತು? ವಿಡಿಯೋ ಭಯಂಕರವಾಗಿದೆ ನೋಡಿ

| Updated By: shruti hegde

Updated on: Jul 02, 2021 | 12:58 PM

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 14 ಸೆಕೆಂಡುಗಳ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಧಾ ರಮೆನ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಲೇಬೇಕು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇಲ್ಲೊಬ್ಬ ವ್ಯಕ್ತಿ ಮರವನ್ನು ಕಾಲಿನಿಂದ ಒದೆಯುತ್ತಲೇ ಇದ್ದಾನೆ! ಮುಂದೇನಾಯ್ತು? ವಿಡಿಯೋ ಭಯಂಕರವಾಗಿದೆ ನೋಡಿ
ಇಲ್ಲೊಬ್ಬ ವ್ಯಕ್ತಿ ಮರವನ್ನು ಕಾಲಿನಿಂದ ಒದೆಯುತ್ತಲೇ ಇದ್ದಾನೆ!
Follow us on

ಪೃಕೃತಿಗೆ ನಾವು ಏನುನ್ನು ನೀಡುತ್ತವೋ ಅದು ನಮಗೆ ಹಿಂತಿರುಗಿ ನೀಡುತ್ತದೆ.. ಒಳ್ಳೆಯದೇ ಆಗರಲಿ ಅಥವಾ ಕೆಟ್ಟದ್ದೇ ಆಗರಲಿ.. ಎಂಬುದಕ್ಕೆ ವೈರಲ್​ ಆಗುತ್ತಿರುವ ಈ ವಿಡಿಯೋ ಸಾಕ್ಷಿ. ಮರ-ಗಿಡಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಂಡರೆ ಅದು ನಮಗೆ ಒಳ್ಳೆಯ ಗಾಳಿ, ಮಳೆಯನ್ನು ನೀಡುತ್ತದೆ. ಮನುಷ್ಯ ಮಾಡುತ್ತಿರುವ ತಪ್ಪುಗಳೇ ಪ್ರಕೃತಿಯ ನಾಶಕ್ಕೆ ಕಾರಣವಾಗುತ್ತಿದೆ. ಇದರಿಂದಲೇ ಕಾಲಕಾಲಕ್ಕೆ ಮಳೆಯಾಗದೇ ವಿಕೋಪ ಸಂಭವಿಸುತ್ತಿರುವುದು. ಮನಷ್ಯ ತನ್ನ ಸ್ವಾರ್ಥಕ್ಕಾಗಿ ಮರ-ಗಿಡಗಳನ್ನು ನಾಶಪಡಿಸುತ್ತಿದ್ದಾನೆ. ಆತನ ದುರಾಲೋಚನೆಗೆ ಪ್ರಕೃತಿಯೂ ಕೂಡಾ ಮುನಿಸಿಕೊಳ್ಳುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಂತಿದೆ.

ಇಲ್ಲೋರ್ವ ವ್ಯಕ್ತಿ ಕಾಡಿನಲ್ಲಿದ್ದ ಸುಂದರವಾಗಿ ಬೆಳೆದು ನಿಂತಿದ್ದ ಮರವನ್ನು ನೆಲಕ್ಕುರುಳಿಸಲು ನಿರಂತವಾಗಿ ಕಾಲಿನಿಂದ ಒಡೆಯುತ್ತಲೇ ಇದ್ದಾನೆ. ಮರವನ್ನು ನೆಲಕ್ಕೆ ಕೆಡಗಬೇಕು ಎಂಬುದು ಆತನ ಉದ್ದೇಶ. ಕಾಲಿನಲ್ಲಿ ಒದೆಯುತ್ತಿದ್ದಾಗಲೇ ಮರ ಅತನ ತಲೆಯ ಮೇಲೆ ಬಿದ್ದಿದೆ. ಗಾಯಗೊಂಡ ವ್ಯಕ್ಕಿ ನೆಲಕ್ಕುರುಳಿದ್ದಾನೆ. ನಾವು ಪ್ರಕೃತಿಗೆ ಮಾಡುವ ನೋವು ನಮಗೆ ಪಾಠ ಕಲಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 14 ಸೆಕೆಂಡುಗಳ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಧಾ ರಮೆನ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳಲೇಬೇಕು ಎಂದು ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೀವು ಒಳ್ಳೆಯ ಕೆಲಸ ಮಾಡಿದರೆ ನಿಮಗೂ ಒಳ್ಳೆಯದೇ ಆಗುತ್ತದೆ. ಜೀವನದಲ್ಲಿ ಕೆಟ್ಟ ಕೆಲಸವನ್ನೇ ಮಾಡುತ್ತಿದ್ದರೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆಯೂ ನಿಮ್ಮಲ್ಲಿ ಬೇಡ! ಎಂದು ಇನ್ನೋರ್ವರು ಅಭಿಪ್ರಾಯ ಹೇಳಿದ್ದಾರೆ.

ಪ್ರಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಮನುಷ್ಯರ ಕೈಯಲ್ಲಿಯೇ ಇದೆ. ಮನುಷ್ಯರ ದುರಾಸೆಯ ಫಲವಾಗಿ ಪ್ರಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ಅಸಮತೋಲನ ಹೆಚ್ಚುತ್ತಿರಲು ಕಾರಣ ಜಲಸಂಪನ್ಮೂಲ, ಮರ-ಗಿಡಗಳನ್ನು ನಾಶಪಡಿಸುವುದು. ಅರಣ್ಯ ನಾಶದಿಂದಲೇ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅರಣ್ಯ ಸಂಪತ್ತನ್ನು ವೃದ್ಧಿಸುವ ಗುರಿ ಎಲ್ಲರ ಮನೋಭಾವದಲ್ಲಿ ಬೆಳೆಯಬೇಕು. ಹಾಗಿದ್ದಾಗಲೇ ಪರಿಸರದ ಸಮತೋಲನವನ್ನು ಕಾಪಾಡಲು ಸಾಧ್ಯ.

ಇದನ್ನೂ ಓದಿ:

Viral Video: ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಮಿಂಚಿನ ಹೊಡೆತ; ಎಂಟು ತಿಂಗಳ ಮಗು ಪ್ರಾಣಾಪಾಯದಿಂದ ಪಾರು!

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು