Viral Video: ಸಂಬಳ ಕಡಿಮೆ ಎಂದು ವರ್ಕ್​ ಫ್ರಾಮ್ ಹೋಮ್​​ನಲ್ಲಿಯೂ ಆಫೀಸ್​ನಲ್ಲಿ ಬಂದು ಉಳಿದುಕೊಂಡ ವ್ಯಕ್ತಿ

ಇಲ್ಲೊಬ್ಬ ವ್ಯಕ್ತಿ ಆಫೀಸ್​ಗೇ  ತನ್ನ ಮನೆಯ ವಸ್ತುಗಳನ್ನು, ಬಟ್ಟೆಗಳನ್ನು ತಂದಿಟ್ಟುಕೊಂಡು ಕೆಲಸಮಾಡುತ್ತಿದ್ದಾನೆ. ಯುಎಸ್​ ವ್ಯಕ್ತಿಯ ಈ ನಡೆ ಸದ್ಯ ಪ್ರಪಂಚದಾದ್ಯಂತ ವೈರಲ್​ ಆಗಿದೆ.

Viral Video: ಸಂಬಳ ಕಡಿಮೆ ಎಂದು ವರ್ಕ್​ ಫ್ರಾಮ್ ಹೋಮ್​​ನಲ್ಲಿಯೂ ಆಫೀಸ್​ನಲ್ಲಿ ಬಂದು ಉಳಿದುಕೊಂಡ ವ್ಯಕ್ತಿ
ಕಚೇರಿಯಲ್ಲಿ ಉಳಿದ ವ್ಯಕ್ತಿ
Edited By:

Updated on: Mar 18, 2022 | 10:52 AM

ಈಗೆಲ್ಲಾ ವರ್ಕ್​ ಫ್ರಾಮ್​ ಹೋಮ್ (Work From Home)​ ಎಲ್ಲರಿಗೂ ಗೊತ್ತಿರುವ ಸಂಗತಿ ಆದರೆ, ಕಚೇರಿಗೇ ಮನೆಯ ವಸ್ತುಗಳನ್ನು ತಂದು ವಾಸ ಮಾಡಿಕೊಂಡು ಕೆಲಸ ಮಾಡಿದರೆ? ಹೌದು ಇಲ್ಲೊಬ್ಬ ವ್ಯಕ್ತಿ ಆಫೀಸ್​ಗೇ  ತನ್ನ ಮನೆಯ ವಸ್ತುಗಳನ್ನು, ಬಟ್ಟೆಗಳನ್ನು ತಂದಿಟ್ಟುಕೊಂಡು ಕೆಲಸಮಾಡುತ್ತಿದ್ದಾನೆ. ಯುಎಸ್​ ವ್ಯಕ್ತಿಯ ಈ ನಡೆ ಸದ್ಯ ಪ್ರಪಂಚದಾದ್ಯಂತ ವೈರಲ್​ ಆಗಿದೆ. ಆತ ಈ ರೀತಿ ಮಾಡಿರುವುದಕ್ಕೆ ಕಾರಣ ಕೇಳಿದರೆ ದಂಗಾಗುವುದಂತೂ ಹೌದು. ಸೈಮನ್​ ಎನ್ನುವ ವ್ಯಕ್ತಿ ತನ್ನ ಕಚೇರಿಯಲ್ಲಿ ಕಡಿಮೆ ಸಂಬಳ ನೀಡುತ್ತಾರೆ. ರೂಮ್​ನ ಬಾಡಿಗೆಗೆ ನೀಡಲು ಹಣ ಸಾಕಾಗುವುದಿಲ್ಲ ಎನ್ನುವ ಕಾರಣ ನೀಡಿ ಆಪೀಸ್​ನ ಕ್ಯೂಬಿನ್​ನಲ್ಲಿ ತನ್ನ ಮನೆಯ ವಸ್ತಗಳನ್ನು ತಂದಿರಿಸಿಕೊಂಡು ವಾಸಮಾಡುತ್ತಿದ್ದಾನೆ. ಅಲ್ಲಿಯೇ ಉಳಿದುಕೊಂಡು ಪ್ರತಿದಿನ ಕೆಲಸವನ್ನೂ ಮಾಡುತ್ತಿದ್ದಾನೆ.

ಸೈಮನ್​ ವಾಸಮಾಡುತ್ತಿರುವುದರ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್​ ಆಗಿದೆ. ಕಿರು ವೀಡಿಯೊದಲ್ಲಿ, ಸೈಮನ್ ತನ್ನ ಸೂಟ್‌ಕೇಸ್‌ನಿಂದ ತಗೆದು ತನ್ನ ವಸ್ತುಗಳನ್ನು ಮೇಜಿನ ಮೇಲೆ ಇಡುವುದನ್ನು ಕಾಣಬಹುದು. ಅವನು ತನ್ನ ಮೇಜಿನ ಕೆಳಗೆ ಮಲಗುತ್ತಾನೆ. ಆಹಾರಕ್ಕಾಗಿ, ಅವರು ಫ್ರಿಜ್ನಲ್ಲಿ ಡಬ್ಬಿಯಲ್ಲಿ ಅನಾನಸ್ ಮತ್ತು ಹ್ಯಾಮ್ ಅನ್ನು ಸಂಗ್ರಹಿಸಿಟ್ಟಿದ್ದನು. ಕಚೇರಿಯ ಎರಡನೇ ಕಟ್ಟಡದಲ್ಲಿ ಸ್ನಾನ ಮಾಡುವುದಾಗಿಯೂ ತಿಳಿಸಿದ್ದಾನೆ.

ಈ ಬಗ್ಗೆ ಸೈಮನ್​ ತಮ್ಮ ,ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವರ್ಕ್​ ಫ್ರಾಮ್​ ಹೋಮ್​ ನ ವೇಳೆ ನೀಡುವ ಸಂಬಳ ಸಾಕಾಗುತ್ತಿಲ್ಲ. ಇದೇ ಕಾರಣದಿಂದ ನಾನು ಕಚೇರಿಯಲ್ಲಿ ವಾಸ ಆರಂಭಿಸಿದ್ದೇನೆ. ಎಷ್ಟು ದಿನ ಇದು ಮುಂದುವರೆಯುತ್ತದೆ ನೋಡಬೇಕು ಎನ್ನುವ ಕ್ಯಾಪ್ಷನ್​ ನೀಡಿದ್ದಾರೆ.  ಸದ್ಯ ವೈರಲ್​ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಐಫಲ್​ ಟವರ್​ ಎದುರು ಗಂಗೂಬಾಯಿ ಚಿತ್ರದ ಹಾಡಿಗೆ ಮಹಿಳೆಯರ ಸಖತ್​ ಸ್ಟೆಪ್​ : ವಿಡಿಯೋ ವೈರಲ್​

Published On - 10:49 am, Fri, 18 March 22