ತಮಿಳು ಅಕ್ಷರಗಳಲ್ಲಿ ಮೂಡಿದ ಆನಂದ ಮಹೀಂದ್ರಾ ಚಿತ್ರ, ವಿಡಿಯೋ ವೈರಲ್

ಗಣೇಶ್ ಎಂಬ ಕಲಾವಿದ ತಮೀಳು ಭಾಷೆಯಲ್ಲಿ ಆನಂದ ಮಹೀಂದ್ರಾ ಅವರ ಭಾವಚಿತ್ರವನ್ನು ಬಿಡಿಸಿದ್ದಾರೆ.

ತಮಿಳು ಅಕ್ಷರಗಳಲ್ಲಿ ಮೂಡಿದ ಆನಂದ ಮಹೀಂದ್ರಾ ಚಿತ್ರ, ವಿಡಿಯೋ ವೈರಲ್
ತಮೀಳು ಭಾಷೆಯಲ್ಲಿ ಆನಂದ ಮಹೀಂದ್ರಾ ಅವರ ಚಿತ್ರ
Image Credit source: India Today
Updated By: ವಿವೇಕ ಬಿರಾದಾರ

Updated on: May 23, 2022 | 7:17 PM

ಕಲಾವಿದನ ಕುಂಚದಿಂದ ಮೂಡಿ ಬಂದ ಎಲ್ಲ ಚಿತ್ರಗಳು ಅದ್ಭುತವಾಗಿರುವತ್ತವೆ ಅವುಗಳನ್ನು ನೋಡುವುದೇ ಚಂದ. ತಮಿಳುನಾಡಿನ (Tamilnadu) ಕಾಂಚೀಪುರಂನ ವ್ಯಕ್ತಿಯೊಬ್ಬರು ಅಪರೂಪದ ಸ್ಕೆಚ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಗಣೇಶ್ ಎಂಬ ಕಲಾವಿದರು ಮಹೀಂದ್ರಾ ಕಂಪನಿಯ ಮಾಲಿಕಾರದ ಆನಂದ್ ಮಹೀಂದ್ರಾ (Anand Mahindra) ಅವರ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಆನಂದ ಮಹೀಂದ್ರಾ ಅವರ ಭಾವಚಿತ್ರವನ್ನು, ಚಿತ್ರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಇದನ್ನು ಓದಿ: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್

ಆದರೆ ಗಣೇಶ ಅವರು ಚಿತ್ರವನ್ನು ಸಾಮನ್ಯವಾಗಿ ಬಿಡಿಸಿಲ್ಲ.  ಗಣೇಶ್ ಅವರು 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ಭಾವಚಿತ್ರವನ್ನು ರಚಿಸಿದ್ದಾರೆ. ಇದನ್ನು ಕಂಡು ಮಹೀಂದ್ರ ಅವರು ಮೂಕವಿಸ್ಮಿತರಾಗಿದ್ದಾರೆ. ಗಣೇಶ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಟ್ವೀಟ್  ಮಾಡಿದ ಆನಂದ್ ಮಹೀಂದ್ರಾ ಅವರು ವಾಹ್, ನನ್ನ ಚಿತ್ರವನ್ನು 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ರೂಪಿಸಲಾಗಿದೆ, ನಾನು ಆಶ್ಚರ್ಯ ಪಡುತ್ತೇನೆ. ಚಿತ್ರ ಬಿಡಿಸಿದವರನ್ನು ಶ್ಲಾಘಿಸಿಸುತ್ತೇನೆ.  ನನ್ನ ಮನೆಯಲ್ಲಿ ಭಾವಚಿತ್ರವನ್ನು ಇರಿಸಲು ಬಯಸುತ್ತೇನೆ ಎಂದು ತಮೀಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ:  ಪತ್ನಿಯ ಆತ್ಮಹತ್ಯೆಗೆ ಪತಿಯೇ ಕಾರಣವೆಂದು ತೀರ್ಪು ನೀಡಿದ ನ್ಯಾಯಾಲಯ

ವೀಡಿಯೊವನ್ನು 142k ಜನರು ವೀಕ್ಷಿಸಿದ್ದಾರೆ ಮತ್ತು ಸಾಕಷ್ಟು ಕಾಮೇಂಟ್​ಗಳು ಬಂದಿವೆ. ಜನರು ಅದ್ಭುತ ಪರಿಕಲ್ಪನೆಯಿಂದ ದಿಗ್ಭ್ರಮೆಗೊಂಡರು ಮತ್ತು ಕಲಾಕೃತಿಯು ನಿಜವಾಗಿಯೂ ನೋಡುವ ದೃಶ್ಯವಾಗಿದೆ ಎಂದು ಬರೆದಿದ್ದಾರೆ. ಇಂತಹ  ಕಲಾಕೃತಿಗಳನ್ನು ಇನ್ನಷ್ಟು ಮಾಡುವಂತೆ ಗಣೇಶ್‌ಗೆ ಹಲವರು ವಿನಂತಿಸಿದರು.

ಈ ಹಿಂದೆ ಗಣೇಶ್ ಅವರು ಅನೇಕ ಗಣ್ಯರ ಚಿತ್ರಗಳನ್ನು ತಮೀಳು ಭಾಷೆಯಲ್ಲಿ ಚಿತ್ರಿಸಿದ್ದರು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Mon, 23 May 22