ವಿವಿಧ ರೀತಿಯ ಜನ ಹಲವು ವಿಧಗಳಲ್ಲಿ ದಾಖಲೆ ಬರೆಯಬೇಕು ಎಂದುಕೊಂಡಿರುತ್ತಾರೆ. ಅದು ಆಹಾರದ ವಿಷಯದಲ್ಲಿ ಆದರೆ ಕೆಲವರು ಮಾತ್ರ ಸಿಗುತ್ತಾರೆ. ಇದೀಗ ಯುಎಸ್ನ ವ್ಯಕ್ತಿಯೊಬ್ಬ 40 ಕೆಜಿಯ ಜಗತ್ತಿನ ಅತಿ ದೊಡ್ಡ ಲಾಲಿ ಪಾಪ್ ರೀತಿ ಕೇಕ್ ತಯಾರಿಸಿದ್ದಾರೆ. ಈ ಮೂಲಕ ಜಗತ್ತಿನ ಅತಿ ದೊಡ್ಡ ಕೇಕ್ ಪಾಪ್ ತಯಾರಿಸಿದ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಕೇಕ್ ತಯಾರಿಸಿದ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ.
ಯುಎಸ್ ಮೂಲದ ನಿಕ್ ಡಿಜಿಯೊವಾನಿ ಎನ್ನುವ ವ್ಯಕ್ತಿ ಈ ಕೇಕ್ ತಯಾರಿಸಿದ್ದಾರೆ. ಇವರಿಗೆ ಜಪಾನ್ನ ಲಿನ್ ಡೇವಿಸ್ ಎನ್ನುವವರು ಸಹಾಯ ಮಾಡಿದ್ದಾರೆ. ಕೇಕ್ ತಯಾರಿಸಿದ ವೀಡಿಯೋವನ್ನು ನಿಕ್ ಹಂಚಿಕೊಂಡಿದ್ದಾರೆ. ಒಟ್ಟು 44.24 ಕೆಜಿ ತೂಗುವ ಕೇಕ್ ತಯಾರಿಸಿ ಜಗತ್ತಿನ ಅತಿ ದೊಡ್ಡ ಕೇಕ್ ತಯಾರಿಸಿದ ಕೀರ್ತಿ ಗಳಿಸಿದ್ದಾರೆ. ವೀಡಿಯೋದಲ್ಲಿ ಕೇಕ್ ಅನ್ನು ಹೇಗೆ ತಯಾರಿಸಿದ್ದಾರೆ ಎನ್ನುವುದನ್ನು ಮೊದಲು ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ಜಗತ್ತಿನ ಅತಿ ದೊಡ್ಡ ಕೇಕ್ ತಯಾರಿಸಿ ದಾಖಲೆ ಮಾಡಿದ ಪ್ರಮಾಣಪತ್ರವನ್ನು ತೋರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹಂಚಿಕೊಂಡ ಈ ವೀಡಿಯೋ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದ್ದು, ಸಾವಿರಾರು ಮಂದಿ ಅಚ್ಚರಿ ವ್ಯಕ್ತಪಡಿಸಿ ಕಾಮೆಟ್ ಮಾಡಿದ್ದಾರೆ. ಹಲವರು ವಾವ್ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಹಲವರು EPIC ಎಂದಿದ್ದಾರೆ.
ಇದನ್ನೂಓದಿ:
10 ವರ್ಷದ ಬಾಲಕಿಗೆ ಮಾರಣಾಂತಿಕ ಚಾಲೆಂಜ್ ನೀಡಿದ ಅಲೆಕ್ಸಾ: ಆಕ್ರೋಶಗೊಂಡ ಬಳಕೆದಾರರು